National Sports Awards - ಟೋಕಿಯೊ ಒಲಿಂಪಿಕ್ಸ್‌ನಲ್ಲಿ (Tokyo Olympics 2020) ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಮತ್ತು ಬೆಳ್ಳಿ ವಿಜೇತ ಕುಸ್ತಿಪಟು ರವಿ ದಹಿಯಾ (Ravi Dahiya) ಸೇರಿದಂತೆ 11 ಆಟಗಾರರು ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ (Major Dhyanchand Khel Ratna Award) ಆಯ್ಕೆಯಾಗಿದ್ದಾರೆ ಮತ್ತು 35 ಆಟಗಾರರು ಸೇರಿದಂತೆ ಕ್ರಿಕೆಟಿಗ ಶಿಖರ್ ಧವನ್ ಅವರನ್ನು ಅರ್ಜುನ ಪ್ರಶಸ್ತಿಗೆ (Arjun Award) ಆಯ್ಕೆ ಮಾಡಲಾಗಿದೆ.


T20 World Cup 2021: ನ್ಯೂಜಿಲೆಂಡ್ ಸೋಲಿನಿಂದ ಭಾರತದ ಸೆಮಿಫೈನಲ್‌ ಹಾದಿ ಸುಗಮ


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು (National Sports Awards) ಪ್ರತಿ ವರ್ಷ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29 ರಂದು ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ, ಆದರೆ ಈ ಬಾರಿ ಅದೇ ಅವಧಿಯಲ್ಲಿ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್  ಕ್ರೀಡಾಕೂಟಗಳು ಬಂದ ಕಾರಣ ಪ್ರಶಸ್ತಿಗಳನ್ನು ವಿತರಿಸಲು ವಿಳಂಬವಾಗಿದೆ.


ಇದನ್ನೂ ಓದಿ-ICC T20 World Cup 2021: ಪಾಕ್ ನ ಹಾರಿಸ್ ರೌಫ್ ದಾಳಿಗೆ ಕೀವಿಸ್ ತತ್ತರ


ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದ ಆಟಗಾರರಲ್ಲಿ ನೀರಜ್ ಚೋಪ್ರಾ, ರವಿ ದಹಿಯಾ, ಹಾಕಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್, ಫುಟ್‌ಬಾಲ್ ನಾಯಕ ಸುನಿಲ್ ಛೆತ್ರಿ, ಮಹಿಳಾ ಕ್ರಿಕೆಟಿಗ ಮಿಥಾಲಿ ರಾಜ್, ಮಹಿಳಾ ಬಾಕ್ಸರ್ ಲೋವ್ಲಿನಾ ಬೊರ್ಗೊಹೈನ್, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಾದ ಪ್ರಮೋದ್ ಭಗತ್, ಸುಮಿತ್ ಆಂಟಿಲ್, ಅವನಿ ಲೆಖ್ರಾ, ಕೃಷ್ಣ ನಗರ ಮತ್ತು ಮನೀಶ್ ನರ್ಮಾಲ್ ಶಾಮೀಲಾಗಿದ್ದಾರೆ. 


ಇದನ್ನೂ ಓದಿ-T20 World Cup 2021 : ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೈಬಿಡುವ ಸಾಧ್ಯತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ