ನವದೆಹಲಿ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟಿ20 ಟೂರ್ನಿಯ 19 ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನವು ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಇದನ್ನೂ ಓದಿ :ಸೋನಿಯಾ ಗಾಂಧಿ ಭೇಟಿ ಅಂತ್ಯ: ರಾಷ್ಟ್ರ ರಾಜಕೀಯಕ್ಕೆ ಹೋಗಲ್ಲವೆಂದ ಸಿದ್ದರಾಮಯ್ಯ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದಿಕೊಂಡ ಪಾಕಿಸ್ತಾನವು ನ್ಯೂಜಿಲೆಂಡ್ ತಂಡವನ್ನು 20 ಓವರ್ ಗಳಲ್ಲಿ ಎಂಟು ವಿಕೆಟ್ ಗಳನ್ನು ಕಬಳಿಸುವ ಮೂಲಕ 134 ರನ್ ಗಳಿಗೆ ಕಟ್ಟಿಹಾಕಿತು.ನ್ಯೂಜಿಲೆಂಡ್ ತಂಡದ ಪರವಾಗಿ ಡೈರ್ಲಿ ಮಿಚೆಲ್ ಹಾಗೂ ಕಾನ್ವೆ ಇಬ್ಬರೂ 27 ರನ್ ಗಳಿಸಿದ್ದೆ ಅಧಿಕ ಸ್ಕೋರ್ ಆಗಿತ್ತು. ಇನ್ನೊಂದೆಡೆಗೆ ಪಾಕ್ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಹಾರಿಸ್ ರೌಫ್ ನಾಲ್ಕು ವಿಕೆಟ್ ಗಳನ್ನು ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.
Pakistan and Afghanistan occupy the 🔝 2 spots 👀
Will any team chase them down in Group 2❓#T20WorldCup pic.twitter.com/sODUFsgxBD
— ICC (@ICC) October 26, 2021
ಇದನ್ನೂ ಓದಿ :T20 World Cup 2021 : ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೈಬಿಡುವ ಸಾಧ್ಯತೆ!
ನ್ಯೂಜಿಲೆಂಡ್ ತಂಡವು ನೀಡಿದ್ದ 135 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು 18.4 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ದಡವನ್ನು ಸೇರಿತು. ಆರಂಭದಲ್ಲಿ ಮೊಹಮ್ಮದ್ ರಿಜವಾನ್ 33 ರನ್ ಗಳಿಸಿದರೆ, ಕೊನೆಯಲ್ಲಿ ಆಸೀಫ್ ಅಲಿ 27 ರನ್ ಗಳಿಸುವ ಮೂಲಕ ಗೆಲುವಿನ ದಡವನ್ನು ಸೇರಿಸಿದರು.
A late blitz from Asif Ali and Shoaib Malik helped Pakistan continue their momentum at the #T20WorldCup 2021 💥 #PAKvNZ report 👇 https://t.co/sjTSVOj61x
— ICC (@ICC) October 26, 2021
ಈಗ ಸತತ ಎರಡು ಪಂದ್ಯಗಳ ಗೆಲುವಿನಿಂದಾಗಿ ಪಾಕಿಸ್ತಾನವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.