Neeraj Chopra: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವೆಲಿನ್‌ ಥ್ರೋ ಆಟಗಾರ, ಗೋಲ್ಡನ್ ಬಾಯ್ ನೀರಜ್‌ ಚೋಪ್ರಾ ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಸ್ವಿಜರ್ಲ್ಯಾಂಡ್‌ನ ಜ್ಯೂರಿಚ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್‌ ಟ್ರೋಫಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಜ್ಯೂರಿಚ್‌ನಲ್ಲಿ ನಡೆದ  ಡೈಮಂಡ್ ಲೀಗ್ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಡೈಮಂಡ್ ಲೀಗ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Team India : ಈ ಆಟಗಾರನ ಅನುಪಸ್ಥಿತಿಯಿಂದ ಟೀಂ ಇಂಡಿಯಾಗೆ ಈ ಪರಸ್ಥಿತಿ!


ನಿನ್ನೆ ರಾತ್ರಿ ಫೌಲ್ ಥ್ರೋನೊಂದಿಗೆ ಆಟ ಪ್ರಾರಂಭಿಸಿದ ನೀರಜ್‌ ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀ ಎಸೆದರು. ನೀರಜ್‌, ನಂತರದ ಪ್ರಯತ್ನದಲ್ಲಿ ಕ್ರಮವಾಗಿ 88.0 ಮೀ., 86.11 ಮೀ, 87.00 ಮೀಟರ್‌, 83.60 ಮೀ. ಎಸೆಯುವ ಮೂಲಕ ಪದಕಕ್ಕೆ ಮುತ್ತಿಕ್ಕಿದರು. ಅಲ್ಲದೇ, ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವವನ್ನು ಪಡೆದುಕೊಂಡರು. 


 


Koo App