The KING IS BACK: ಸಾವಿರ ದಿನಗಳ ಕಾಯವಿಕೆ ಅಂತ್ಯ, ಶತಕ‘ವೀರ’ನಿಗೆ ಪ್ರಶಂಸೆಗಳ ಮಹಾಪೂರ

ಏಷ್ಯಾಕಪ್ ಸೂಪರ್-4ರಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು.

Written by - Puttaraj K Alur | Last Updated : Sep 9, 2022, 10:23 AM IST
  • 1021 ದಿನಗಳ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ
  • 3 ವರ್ಷಗಳ ನಂತರ ಭರ್ಜರಿ ಶತಕ ಸಿಡಿಸಿ ಮಿಂಚಿದ ವಿರಾಟ್ ಕೊಹ್ಲಿ
  • ಟಿ-20ಯಲ್ಲಿ ಚೊಚ್ಚಲ ಶತಕ ಬಾರಿಸಿದ ಕೊಹ್ಲಿಗೆ ಪ್ರಶಂಸೆಗಳ ಮಹಾಪೂರ
The KING IS BACK: ಸಾವಿರ ದಿನಗಳ ಕಾಯವಿಕೆ ಅಂತ್ಯ, ಶತಕ‘ವೀರ’ನಿಗೆ ಪ್ರಶಂಸೆಗಳ ಮಹಾಪೂರ  title=
Virat Kohli Maiden T20I Century

ನವದೆಹಲಿ: 1021 ದಿನಗಳ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಬರೋಬ್ಬರಿ 3 ವರ್ಷಗಳ ನಂತರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಅಂತಾರಾಷ್ಟ್ರೀಯ ಟಿ-20ಯಲ್ಲಿ ಚೊಚ್ಚಲ ಶತಕ ಬಾರಿಸಿದ ಕೊಹ್ಲಿ ಒಟ್ಟಾರೆ 71ನೇ ಸೆಂಚ್ಯೂರಿ ದಾಖಲಿಸಿದ್ದಾರೆ. ಈ ಮೂಲಕ ಟೀಕಾಕಾರರ ಬಾಯಿಗೆ ಕಿಂಗ್ ಕೊಯ್ಲಿ ಬೀಗ ಹಾಕಿದ್ದಾರೆ.

ಏಷ್ಯಾಕಪ್ ಸೂಪರ್-4ರಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಮೈದಾನದ ಮೂಲೆಮೂಲೆಗಳಿಗೂ ಬೌಂಡರಿ-ಸಿಕ್ಸರ್‍ಗಳ ಮೂಲಕ ರನ್‍ಗಳ ಮಳೆಯನ್ನೇ ಹರಿಸಿದರು. 61 ಎಸೆತಗಳಲ್ಲಿ ಕೊಹ್ಲಿ 12 ಬೌಂಡರಿ, 6 ಭರ್ಜರಿ ಸಿಕ್ಸರ್ ಸಹಿತ 122 ರನ್ ಗಳಿಸಿ ಅಜೇಯರಾಗುಳಿದರು. 200 ಸ್ಟ್ರೈಕ್ ರೇಟಿಂಗ್‍ನಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ ಕೋಟ್ಯಂತರ ಅಭಿಮಾನಿಗಳಿಗೆ ಕಮ್‍ಬ್ಯಾಕ್ ಮಾಡಿದ ಖುಷಿ ನೀಡಿದರು.   

ಇದನ್ನೂ ಓದಿ: Anushka Sharma: ಕೊಹ್ಲಿ ಶತಕಕ್ಕೆ ದೇಶವೇ ಶಹಬ್ಬಾಶ್ ಅಂದ್ರೆ,ಅನುಷ್ಕಾ ಹೇಳಿದ್ದು ಮಾತ್ರ ಹೀಗೆ!

ಟಿ-20 ವಿಶ್ವಕಪ್ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅವರ ಈ ಶತಕ ಟೀಂ ಇಂಡಿಯಾದ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 71ನೇ ಶತಕ ದಾಖಲಿಸುವ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. 104ನೇ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿರುವ ಕೊಹ್ಲಿ 3584 ರನ್ ಗಳಿಸಿದ್ದಾರೆ.

ಇನ್ನು ಬರೋಬ್ಬರಿ 3 ವರ್ಷಗಳ ನಂತರ ಕೊಹ್ಲಿ ಬ್ಯಾಟ್‍ನಿಂದ ಮೂಡಿಬಂದ ಭರ್ಜರಿ ಶತಕಕ್ಕೆ ವಿಶ್ವದ ಕ್ರಿಕೆಟ್ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ವಿವಿಎಸ್ ಲಕ್ಷ್ಮಣ್, ಯೂಸುಫ್ ಪಠಾಣ್, ಎಬಿ ಡಿವಿಲಿಯರ್ಸ್, ಕೇವಿನ್ ಪೀಟರ್ಸನ್ ಸೇರಿದಂತೆ ಅನೇಕ ದಿಗ್ಗಜರು ಕೊಹ್ಲಿ ಶತಕಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ: Asia Cup 2022: ಏಷ್ಯಾಕಪ್ ನಿಂದ ಔಟಾದ ಭಾರತ: ಕೋಚ್ ದ್ರಾವಿಡ್ ತಂಡದ ಬಗ್ಗೆ ಏನಂದ್ರು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News