ಒಲಿಂಪಿಕ್ಸ್’ಗೂ ಮುನ್ನ ಅಬ್ಬರಿಸಿದ ನೀರಜ್ ಚೋಪ್ರಾ: ಫೆಡರೇಷನ್ ಕಪ್’ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಗೋಲ್ಡನ್ ಬಾಯ್
Neeraj Chopra: ಫೆಡರೇಶನ್ ಕಪ್’ನಲ್ಲಿ ನೀರಜ್ ಚೋಪ್ರಾ 2021 ರಿಂದ ಚಿನ್ನದ ಬೇಟೆ ಮುಂದುವರೆಸಿಕೊಂಡು ಬಂದಿದ್ದಾರೆ. ಆ ವೇಳೆ 87.80 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.
Neeraj Chopra: 2024ರ ಒಲಿಂಪಿಕ್ಸ್’ಗೂ ಮುನ್ನ ಜಾವೆಲಿನ್ ಥ್ರೋ ದಿಗ್ಗಜ ನೀರಜ್ ಚೋಪ್ರಾ ಅಬ್ಬರಿಸಿದ್ದಾರೆ. ಫೆಡರೇಶನ್ ಕಪ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚೋಪ್ರಾ 3 ವರ್ಷಗಳ ನಂತರ ಹೋಮ್ ಟ್ರ್ಯಾಕ್’ನಲ್ಲಿ ಆಡಿದ್ದಾರೆ. ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ 3 ವರ್ಷಗಳ ನಂತರ ನೀರಜ್ ಚೋಪ್ರಾ ಆಡಿದ್ದು, 82.27 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: ಈ ಲೆಕ್ಕಾಚಾರದ ಪ್ರಕಾರ ನಡೆದರೆ RCB-CSK ಎರಡೂ ತಂಡಗಳೂ ಪ್ಲೇಆಫ್ ಪ್ರವೇಶಿಸುತ್ತೆ: ಅದ್ಹೇಗೆ ಗೊತ್ತಾ
ಫೆಡರೇಶನ್ ಕಪ್’ನಲ್ಲಿ ನೀರಜ್ ಚೋಪ್ರಾ 2021 ರಿಂದ ಚಿನ್ನದ ಬೇಟೆ ಮುಂದುವರೆಸಿಕೊಂಡು ಬಂದಿದ್ದಾರೆ. ಆ ವೇಳೆ 87.80 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.
ಇನ್ನು ಇತ್ತೀಚೆಗೆ ನೀರಜ್ ದೋಹಾ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಈ ವೇಳೆ ಅವರು 88.36 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ 89.94 ಮೀಟರ್. ವಿಶ್ವ ಚಾಂಪಿಯನ್‌ನ ಗುರಿ 90 ಮೀಟರ್ ದಾಟುವುದು. ಆದರೆ ಇಲ್ಲಿಯವರೆಗೆ ಈ ದಾಖಲೆ ಬ್ರೇಕ್ ಮಾಡಿಲ್ಲ.
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಭದ್ರತಾ ಸಿಬ್ಬಂದಿ ಆತ್ಮಹತ್ಯೆ
ಇನ್ನು ಡಿಪಿ ಮನು ಮತ್ತು ನೀರಜ್ ಚೋಪ್ರಾ ನಡುವೆ ಭರ್ಜರಿ ಪೈಪೋಟಿ ನಡೆದಿತ್ತು. ಆದರೆ ಕೊನೆಯಲ್ಲಿ ನೀರಜ್ ಗೆದ್ದು, ಮನು ಬೆಳ್ಳಿ ಪದಕ ಪಡೆದರು. ಉತ್ತಮ್ ಪಾಟೀಲ್ ಮೂರನೇ ಸ್ಥಾನದಲ್ಲಿದ್ದು, ಕಂಚಿನ ಪದಕ ಗೆದ್ದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews