Asia Cup 2023, ODI cricket records of Team India players: ಏಷ್ಯಾ ಕಪ್ 2023 ಆಗಸ್ಟ್ 30 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ನಡೆಯಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಟೂರ್ನಿಗೆ 17 ಸದಸ್ಯರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದ್ದು, ಈ ತಂಡದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿರಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Asia Cup 2023: ಈ ದಿಗ್ಗಜ ಆಟಗಾರನನ್ನು ಕೈಬಿಟ್ಟ ಆಯ್ಕೆದಾರರಿಂದ ದೊಡ್ಡ ಪ್ರಮಾದ!


ಏಷ್ಯಾ ಕಪ್ 2023 ಭಾರತ ತಂಡ ಹೀಗಿದೆ:


ರೋಹಿತ್ ಶರ್ಮಾ (ನಾಯಕ) ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ. ಇನ್ನು ಸಂಜು ಸ್ಯಾಮ್ಸನ್​ ಅವರಿಗೆ ಮೀಸಲು ಆಟಗಾರನಿಗೆ ಅವಕಾಶ ನೀಡಲಾಗಿದೆ.


ಇನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಈ ಬಾರಿ ಏಷ್ಯಾಕಪ್ ಟೂರ್ನಮೆಂಟ್‌ ನಡೆಯಲಿದೆ. ಆದರೆ ಭಾರತ ತಂಡದ ಪ್ರತೀ ಪಂದ್ಯವು ಶ್ರೀಲಂಕಾ ನೆಲದಲ್ಲಿ ನಡೆಯಲಿದೆ. ಇನ್ನು ಟೀಂ ಇಂಡಿಯಾದಿಂದ ಏಷ್ಯಾಕಪ್’ಗೆ ಆಯ್ಕೆಯಾದ 17 ಆಟಗಾರರ ಏಕದಿನ ಕ್ರಿಕೆಟ್ ದಾಖಲೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಿದ್ದೇವೆ.


ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ಮತ್ತು ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭಾರತದ ಪರ ಒಟ್ಟು  244 ಪಂದ್ಯಗಳನ್ನು ಆಡಿದ್ದು, ಒಟ್ಟು 9837 ರನ್‌ ಗಳಿಸಿದ್ದಾರೆ. ಇನ್ನು ರೋಹಿತ್ ಶರ್ಮಾ ಏಕದಿನದಲ್ಲಿ ಗರಿಷ್ಠ ವೈಯಕ್ತಿಕ ರನ್ 264 ಆಗಿದ್ದು, 3 ದ್ವಿಶತಕ ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ರೋಹಿತ್ ಹೆಸರಿನಲ್ಲಿದೆ.


ಶುಭ್ಮನ್ ಗಿಲ್: ಮೊದಲಿಗೆ ಪ್ರಕಟವಾದ ಲಿಸ್ಟ್’ನಲ್ಲಿ ಶುಭ್ಮನ್ ಹೆಸರು ಇರಲಿಲ್ಲ. ತಕ್ಷಣವೇ ತಪ್ಪು ಸರಿಪಡಿಸಿಕೊಂಡ ಬಿಸಿಸಿಐ ಮತ್ತೆ ಪಟ್ಟಿ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಶುಭ್ಮನ್ ಹೆಸರನ್ನು ಉಲ್ಲೇಖಿಸಲಾಗಿತ್ತು. ಇನ್ನು ಇವರ ದಾಖಲೆಗಳನ್ನು ನೋಡುವುದಾದರೆ ಸದ್ಯ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಗಿಲ್ 27 ODI ಪಂದ್ಯಗಳನ್ನು ಆಡಿದ್ದಾರೆ ಮತ್ತು 27 ಇನ್ನಿಂಗ್ಸ್‌’ಗಳಲ್ಲಿ 1437 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 208 ಆಗಿದೆ. 4 ODI ಶತಕಗಳು, 6 ODI ಅರ್ಧ ಶತಕಗಳು ಮತ್ತು 8 ಬಾರಿ 30+ ಮತ್ತು 3 ಬಾರಿ 20+ ODI ರನ್‌’ಗಳನ್ನು ಬಾರಿಸಿದ್ದಾರೆ.


ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಈವರೆಗೆ 275 ಏಕದಿನ ಪಂದ್ಯಗಳನ್ನು ಆಡಿದ್ದು, 12898 ರನ್ ಗಳಿಸಿದ್ದಾರೆ. ಇವರ ಅತೀ ಹೆಚ್ಚು ಸ್ಕೋರ್ 183 ರನ್ ಆಗಿದೆ. ಇದರಲ್ಲಿ 46 ಶತಕ, 65 ದ್ವಿಶತಕ ಸೇರಿದೆ.


ತಿಲಕ್ ವರ್ಮಾ: ಟೀಂ ಇಂಡಿಯಾಗೆ ಭವಿಷ್ಯದ ಯುವರಾಜ್ ಸಿಂಗ್ ಆಗಬಲ್ಲ ಸಾಮಾರ್ಥ್ಯವುಳ್ಳ ಯುವ ಪ್ರತಿಭೆ ತಿಲಕ್ ವರ್ಮಾ ಈವರೆಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿಲ್ಲ. ಇವರು 7 ಟಿ20 ಪಂದ್ಯಗಳನ್ನು ಆಡಿದ್ದು, 174 ರನ್ ಗಳಿಸಿದ್ದಾರೆ. ಬೌಲಿಂಗ್’ನಲ್ಲಿ ಒಂದು ವಿಕೆಟ್ ಪಡೆದಿದ್ದಾರೆ.


ಕೆ ಎಲ್ ರಾಹುಲ್: ಕನ್ನಡಿಗ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಕಳೆದ ಮೂರು ತಿಂಗಳಿನಿಂದ ತಂಡದಿಂದ ಹೊರಗುಳಿದಿದ್ದರು. ಇದೀಗ ಕಂಬ್ಯಾಕ್ ಮಾಡಿರುವ ರಾಹುಲ್ ಏಕದಿನ ದಾಖಲೆ ನೋಡುವುದಾದರೆ ಒಟ್ಟು 54 ಏಕದಿನ ಪಂದ್ಯಗಳನ್ನು ಆಡಿದ್ದು, 1986 ರನ್ ಗಳಿಸಿದ್ದಾರೆ. ಇವರ ಅತೀ ಹೆಚ್ಚು ಸ್ಕೋರ್ 112 ರನ್ ಆಗಿದೆ. ಇದರಲ್ಲಿ 5 ಶತಕ ಮತ್ತು 13 ಅರ್ಧ ಶತಕಗಳು ಸೇರಿದೆ.


ಇಶಾನ್ ಕಿಶನ್: ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಕಿಶನ್ 17 ಏಕದಿನ ಪಂದ್ಯಗಳನ್ನು ಆಡಿದ್ದು, 694 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ, 6 ಅರ್ಧಶತಕ ಸೇರಿದೆ. ಇವರ ಅತೀ ಹೆಚ್ಚು ಸ್ಕೋರ್ 210 ರನ್ ಆಗಿದೆ.


ಶ್ರೇಯಸ್ ಅಯ್ಯರ್: ಗಾಯದ ಕಾರಣದಿಂದಾಗಿ ಕಳೆದ ಹಲವು ದಿನಗಳಿಂದ ಕ್ರಿಕೆಟ್‌ ಚಟುವಟಿಕೆಗಳಿಂದ ದೂರ ಉಳಿದಿದ್ದ ಶ್ರೇಯಸ್ ಅಯ್ಯರ್ ಇದೀಗ ಏಷ್ಯಾಕಪ್’ನಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟು 42 ಪಂದ್ಯಗಳನ್ನಾಡಿದ ಅವರು 2 ಶತಕ ಮತ್ತು 14 ಅರ್ಧಶತಕ ಬಾರಿಸಿದ್ದಾರೆ.


ಸೂರ್ಯಕುಮಾರ್ ಯಾದವ್: ಟೀಂ ಇಂಡಿಯಾದ ಮಿ.360 ಎಂದೇ ಖ್ಯಾತಿ ಪಡೆದ ಸೂರ್ಯಕುಮಾರ್ ಯಾದವ್, ಟಿ20ಯಲ್ಲಿ ಸಖತ್ ಸ್ಪೆಷಲಿಸ್ಟ್. ಆದರೆ ಏಕದಿನದಲ್ಲಿ ಹೇಳಿಕೊಳ್ಳುವಂತಹದ್ದೇನು ಮಾಡಿಲ್ಲ.  26 ಏಕದಿನ ಪಂದ್ಯಗಳಲ್ಲಿ 511 ರನ್ ಗಳಿಸಿದ ಅವರ ಅತೀ ಹೆಚ್ಚು ವೈಯಕ್ತಿಕ ಸ್ಕೋರ್ 64 ರನ್ ಆಗಿದೆ.


ಹಾರ್ದಿಕ್ ಪಾಂಡ್ಯ: ಏಷ್ಯಾಕಪ್‌’ನಲ್ಲಿ ಸ್ಥಾನ ಪಡೆದಿರುವ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ, 2022 ರಿಂದ ಕೇವಲ 14 ಏಕದಿನ ಪಂದ್ಯಗಳನ್ನು ಆಡಿದ್ದು, 34.54 ಸರಾಸರಿಯಲ್ಲಿ 380 ರನ್ ಗಳಿಸಿದ್ದಾರೆ. ಜೊತೆಗೆ 16 ವಿಕೆಟ್ ಕೂಡ ಕಬಳಿಸಿದ್ದಾರೆ.


ರವೀಂದ್ರ ಜಡೇಡಾ: ಟೀಂ ಇಂಡಿಯಾದ ಲೆಫ್ಟ್ ಆರ್ಮ್ ಆರ್ಥಡಾಕ್ಸ್ ಸ್ಪಿನ್ ಬೌಲರ್ ಮತ್ತು ಬ್ಯಾಟಿಂಗ್ ಆಪತ್ಭಾಂದವ ಎಂದೇ ಕರೆಯುವ ರವೀಂದ್ರ ಜಡೇಜಾ 2022 ರಿಂದ ಈವರೆಗೆ 9 ಏಕದಿನ ಪಂದ್ಯಗಳನ್ನು ಆಡಿದ್ದು, 149 ರನ್ ಹಾಗೂ 6 ವಿಕೆಟ್ ಪಡೆದಿದ್ದಾರೆ.


ಜಸ್ಪ್ರೀತ್ ಬುಮ್ರಾ: ಸುಮಾರು 11 ತಿಂಗಳ ಕಾಲ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗಿದ್ದ ಬುಮ್ರಾ ಇದೀಗ ಐರ್ಲೆಂಡ್ ಟಿ20 ಮೂಲಕ ನಾಯಕನಾಗಿ ತಂಡಕ್ಕೆ ಮರಳಿದ್ದಾರೆ. ಬುಮ್ರಾ 2022 ರಿಂದ ಈವರೆಗೆ 5 ಏಕದಿನ ಪಂದ್ಯಗಳನ್ನು ಆಡಿದ್ದು 13 ವಿಕೆಟ್ ಪಡೆದಿದ್ದಾರೆ.


ಮೊಹಮ್ಮದ್ ಶಮಿ: ಕೆಲ ಕಾಲ ತಂಡದಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ ಕಳೆದ ವರ್ಷದಿಂದ 11 ಏಕದಿನ ಪಂದ್ಯಗನ್ನಾಡಿದ್ದು 14 ವಿಕೆಟ್ ಪಡೆದಿದ್ದಾರೆ.


ಮೊಹಮ್ಮದ್ ಸಿರಾಜ್: ಟೀಂ ಇಂಡಿಯಾದಲ್ಲಿ ಹಿರಿಯ ವೇಗಿಗಳ ಕೊರತೆಯನ್ನು ನೀಗಿಸುತ್ತಿರುವ ಭರವಸೆಯ ಬೌಲರ್ ಮೊಹಮ್ಮದ್ ಸಿರಾಜ್, 2022 ರಿಂದ ಈವರೆಗೆ 23 ಏಕದಿನ ಪಂದ್ಯಗಳನ್ನು ಆಡಿದ್ದು, 43 ವಿಕೆಟ್ ಪಡೆದಿದ್ದಾರೆ.


ಶಾರ್ದೂಲ್ ಠಾಕೂರ್: ಟೀಂ ಇಂಡಿಯಾದ ಮತ್ತೊಬ್ಬ ಆಲ್‌ ರೌಂಡರ್ ಶಾರ್ದೂಲ್ ಠಾಕೂರ್ 2022 ರಿಂದ ಈವರೆಗೆ 23 ಏಕದಿನ ಪಂದ್ಯಗಳಲ್ಲಿ 208 ರನ್ ಮತ್ತು 36 ವಿಕೆಟ್ ಪಡೆದಿದ್ದಾರೆ.


ಕುಲದೀಪ್ ಯಾದವ್: ಎಡಗೈ ಲೆಗ್ ಸ್ಪಿನ್ನರ್ ಕುಲದೀಪ್ ಕಳೆದ ವರ್ಷದಿಂದ ಈವರೆಗೆ 19 ಏಕದಿನ ಪಂದ್ಯಗಳನ್ನು ಆಡಿದ್ದು, 34 ವಿಕೆಟ್ ಪಡೆದಿದ್ದಾರೆ.


ಅಕ್ಷರ್ ಪಟೇಲ್: ಟೀಂ ಇಂಡಿಯಾದ ಮತ್ತೊಬ್ಬ ಆಲ್‌ ರೌಂಡರ್ ಅಕ್ಷರ್ ಪಟೇಲ್ 14 ಏಕದಿನ ಪಂದ್ಯಗಳನ್ನಾಡಿದ್ದು 232 ರನ್ ಗಳಿಸಿಸದ್ದಾರೆ. ಇನ್ನೊಂದೆಡೆ ಬೌಲಿಂಗ್’ನಲ್ಲಿ 13 ವಿಕೆಟ್‌’ಗಳನ್ನು ಪಡೆದಿದ್ದಾರೆ.


ಪ್ರಸಿದ್ಧ್ ಕೃಷ್ಣ: ಕನ್ನಡಿಗ ಪ್ರಸಿದ್ಧ್ ಕೃಷ್ಣ ಇತ್ತೀಚೆಗೆ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಾಸ್ ಆಗಿದ್ದಾರೆ. ಇವರು ಇದುವರೆಗೆ 11 ಏಕದಿನ ಪಂದ್ಯಗಳನ್ನಾಡಿದ್ದು 19 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.


ಸಂಜು ಸ್ಯಾಮ್ಸನ್: ಕೇರಳ ಮೂಲದ ಸಂಜು ಸ್ಯಾಮ್ಸನ್ ಈ ಬಾರಿಯ ಏಷ್ಯಾಕಪ್ 2023ರ ಭಾರತ ತಂಡದಲ್ಲಿ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ. 2022 ರಿಂದ ಈವರೆಗೆ 13 ಏಕದಿನ ಪಂದ್ಯಗಳನ್ನು ಆಡಿರುವ ಸ್ಯಾಮ್ಸನ್, 55.71 ಸರಾಸರಿಯಲ್ಲಿ 390 ರನ್ ಕಲೆ ಹಾಕಿದ್ದಾರೆ.


ಇದನ್ನೂ ಓದಿ: ಏಷ್ಯಾಕಪ್’ಗೆ ಬಲಿಷ್ಠ ಭಾರತ ತಂಡ ಪ್ರಕಟ: ಇಬ್ಬರು ಕನ್ನಡಿಗರಿಗೆ ಮಣೆ ಹಾಕಿದ ಸಮಿತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.