Asia Cup 2023: ಈ ದಿಗ್ಗಜ ಆಟಗಾರನನ್ನು ಕೈಬಿಟ್ಟ ಆಯ್ಕೆದಾರರಿಂದ ದೊಡ್ಡ ಪ್ರಮಾದ!

ಏಷ್ಯಾಕಪ್ 2023: ಗಾಯದ ಸಮಸ್ಯೆಯಿಂದ ಸ್ವಲ್ಪ ಸಮಯದಿಂದ ಹೊರಗುಳಿದಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಆಗಸ್ಟ್ 31ರಿಂದ ಪ್ರಾರಂಭವಾಗುವ ಏಷ್ಯಾಕಪ್‌ಗಾಗಿ ಸೋಮವಾರ ಭಾರತ ತಂಡದಲ್ಲಿ ಸೇರ್ಪಡೆಗೊಂಡರೆ, ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Written by - Puttaraj K Alur | Last Updated : Aug 21, 2023, 03:32 PM IST
  • ಬಿಸಿಸಿಐ ಆಯ್ಕೆ ಸಮಿತಿಯು ಏಷ್ಯಾಕಪ್‌ ಟೂರ್ನಿಗಾಗಿ ಭಾರತದ 17 ಸದಸ್ಯರ ತಂಡವನ್ನು ಪ್ರಕಟಿಸಿದೆ
  • ಏಷ್ಯಾಕಪ್‌ಗಾಗಿ ಆಯ್ಕೆ ಸಮಿತಿಯು ತನ್ನ ತಂಡದಲ್ಲಿ ಹಲವು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ
  • ಸ್ಫೋಟಕ ಆರಂಭಿಕ ಆಟಗಾರ ಶಿಖರ್ ಧವನ್‍ಗೆ ಅವಕಾಶ ನೀಡದ ಆಯ್ಕೆ ಸಮಿತಿ
Asia Cup 2023: ಈ ದಿಗ್ಗಜ ಆಟಗಾರನನ್ನು ಕೈಬಿಟ್ಟ ಆಯ್ಕೆದಾರರಿಂದ ದೊಡ್ಡ ಪ್ರಮಾದ! title=
ಏಷ್ಯಾ ಕಪ್ 2023

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಆಯ್ಕೆ ಸಮಿತಿಯು 2023ರ ಏಷ್ಯಾಕಪ್‌ಗಾಗಿ ಭಾರತದ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. 2023ರ ಏಷ್ಯಾಕಪ್‌ಗಾಗಿ ಆಯ್ಕೆ ಸಮಿತಿಯು ತನ್ನ ತಂಡದಲ್ಲಿ ಹಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಏಷ್ಯಾಕಪ್‌ ಟೂರ್ನಿಗೆ ಟೀಂ ದಿಗ್ಗಜ ಆಟಗಾರನನ್ನು ಆಯ್ಕೆ ಮಾಡದೆ ದೊಡ್ಡ ಪ್ರಮಾದ ಮಾಡಿದೆ. ಆಯ್ಕೆದಾರರ ​​ಈ ತಪ್ಪಿಗೆ ಏಷ್ಯಾಕಪ್‍ನಲ್ಲೂ ಟೀಂ ಇಂಡಿಯಾ ಸಾಕಷ್ಟು ಬೆಲೆ ತೆರಬೇಕಾಗಬಹುದು.

ಆಯ್ಕೆದಾರರ ದೊಡ್ಡ ಪ್ರಮಾದ!

ಏಷ್ಯಾಕಪ್ ಟೂರ್ನಿಗೆ ಬಿಸಿಸಿಐ ಆಯ್ಕೆ ಸಮಿತಿಯು ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್) ಮತ್ತು ಶುಭಮನ್ ಗಿಲ್ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಏಷ್ಯಾಕಪ್‌ ಟೂರ್ನಿಗೆ ತಂಡದಲ್ಲಿ ಸ್ಫೋಟಕ ಆಟಗಾರ ಶಿಖರ್ ಧವನ್‌ಗೆ ಅವಕಾಶ ನೀಡಿಲ್ಲ.

ಇದನ್ನೂ ಓದಿ: ಟೆಸ್ಟ್’ನಲ್ಲಿ ತ್ರಿಶತಕ ಸಿಡಿಸಿದ ಈ ಆಟಗಾರ Team Indiaದಲ್ಲಿ ಅವಕಾಶ ಪಡೆಯಲು 6 ವರ್ಷಗಳಿಂದ ತುದಿಗಾಲಲ್ಲಿ ಕಾಯುತ್ತಿದ್ದಾನೆ!

ದೊಡ್ಡ ಟೂರ್ನಿಗಳಲ್ಲಿ ಆಡಿದ ಅನುಭವ

ಶಿಖರ್ ಧವನ್ ಭಾರತದ ಐಸಿಸಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದರು. ಆದರೆ ಈ ಆಟಗಾರನಿಗೆ ಏಷ್ಯಾಕಪ್ ಟೂರ್ನಿಗೆ ಅವಕಾಶ ನೀಡುವ ಅಗತ್ಯವನ್ನು ಆಯ್ಕೆದಾರರು ಪರಿಗಣಿಸಲಿಲ್ಲ. ಏಷ್ಯಾಕಪ್‌ನಲ್ಲಿ ಈ ಸ್ಟಾರ್ ಆಟಗಾರನಿಗೆ ಅವಕಾಶ ನೀಡದೆ ಆಯ್ಕೆದಾರರು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಶಿಖರ್ ಧವನ್‍ಗೆ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಬಹಳ ದೊಡ್ಡ ಹೆಸರಿದೆ. ಶಿಖರ್ ಧವನ್ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಪ್ರಬಲ ಆಧಾರಸ್ತಂಭವಾಗಿದ್ದಾರೆ. ಧವನ್ ದೊಡ್ಡ ಐಸಿಸಿ ಟೂರ್ನಿಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಅವರು ಏಕಾಂಗಿಯಾಗಿ ಭಾರತಕ್ಕೆ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಅತ್ಯಂತ ಅಪಾಯಕಾರಿ!

2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ವರ್ಚಸ್ವಿ ನಾಯಕ ಎಂ.ಎಸ್.ಧೋನಿ, ಶಿಖರ್ ಧವನ್‍ರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದರು. ನಂತರ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಿಖರ್ ಧವನ್ ಸಾಕಷ್ಟು ರನ್ ಗಳಿಸಿದ್ದರು. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಿಖರ್ ಧವನ್ ಅತ್ಯಧಿಕ 363 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶಿಖರ್ ಧವನ್ ಬಗ್ಗೆ ಹೇಳುವುದಾದರೆ, ಏಕದಿನ ಕ್ರಿಕೆಟ್‌ನಲ್ಲಿ ಅವರ ದಾಖಲೆ ತುಂಬಾ ಅಪಾಯಕಾರಿಯಾಗಿದೆ.

ಇದನ್ನೂ ಓದಿ: ವಿದಾಯಕ್ಕೆ ಇದು ಸರಿಯಾದ ಸಮಯ”: 13 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್!

17 ಶತಕ ಸಿಡಿಸಿದ ದಾಖಲೆ!

ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ 17 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಧವನ್ ಏಕದಿನ ಕ್ರಿಕೆಟ್‌ನಲ್ಲಿ ಧಾರಾಕಾರವಾಗಿ ರನ್ ಮಳೆ ಸುರಿಸುತ್ತಿದ್ದಾರೆ. ಟೀಂ ಇಂಡಿಯಾ ಪರ ಶಿಖರ್ ಧವನ್ 34 ಟೆಸ್ಟ್ ಪಂದ್ಯಗಳಲ್ಲಿ 2,315 ರನ್, 167 ಏಕದಿನ ಪಂದ್ಯಗಳಲ್ಲಿ 6,793 ರನ್ ಮತ್ತು 68 ಟಿ-20 ಪಂದ್ಯಗಳಲ್ಲಿ 1,759 ರನ್ ಗಳಿಸಿದ್ದಾರೆ. ಎಡಗೈ ಬಿರುಸಿನ ಬ್ಯಾಟ್ಸ್‌ಮನ್ ಶಿಖರ್ ಧವನ್ ಜೊತೆಗೆ ಬಲಗೈ ಓಪನರ್ ರೋಹಿತ್ ಶರ್ಮಾ ಆರಂಭಿಕ ಜೋಡಿಯಾದ್ರೆ ಏಷ್ಯಾಕಪ್‌ ಟೂರ್ನಿಯನ್ನೇ ಸುಲಭವಾಗಿ ಗೆಲ್ಲಬಹುದು. ಧವನ್ ಬೌಂಡರಿ ಮತ್ತು ಸಿಕ್ಸರ್‍ಗಳ ಮೂಲಕ ತ್ವರಿತವಾಗಿ ರನ್ ಗಳಿಸಬಹುದು.  

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News