1 KG Onion: ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಏರಿಕೆಯಿಂದ ಜನರು ತೊಂದರೆಗೀಡಾಗಿದ್ದಾರೆ. ದೇಶದ ಹಲವು ಪ್ರದೇಶಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 100 ರೂ ನಿಂದ 150 ರೂ ದಾಟಿ ಹೋಗಿದೆ. ಹೆಚ್ಚಿದ ಟೊಮೆಟೊ ಬೆಲೆಯನ್ನು ಜನರು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಈಗ ಈರುಳ್ಳಿ ಬೆಲೆಯೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಆದಾಯ ತೆರಿಗೆ ಪಾವತಿದಾರರಿಗೊಂದು ಗುಡ್ ನ್ಯೂಸ್!


ಬಿಗಿ ಪೂರೈಕೆಯಿಂದಾಗಿ ಈ ತಿಂಗಳ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಮುಂದಿನ ತಿಂಗಳಲ್ಲಿ ಕೆಜಿಗೆ 60-70 ರೂ.ಗೆ ತಲುಪಬಹುದು ಎನ್ನಲಾಗುತ್ತಿದೆ.


ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್ ವರದಿಯ ಪ್ರಕಾರ, ಬೇಡಿಕೆ-ಪೂರೈಕೆ ಅಸಮತೋಲನದ ಪರಿಣಾಮವು ಆಗಸ್ಟ್ ಅಂತ್ಯದ ವೇಳೆಗೆ ಈರುಳ್ಳಿ ಬೆಲೆಗಳ ಮೇಲೆ ಗೋಚರಿಸುವ ನಿರೀಕ್ಷೆಯಿದೆ. ನೆಲಮಟ್ಟದ ಮಾತುಕತೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ ಆರಂಭದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದ್ದು, ಕೆ.ಜಿ.ಗೆ 60-70 ರೂ.ವರೆಗೆ ತಲುಪಬಹುದು.


ಈರುಳ್ಳಿಯ ಸಂಗ್ರಹಣೆ ಮತ್ತು ಬಳಕೆಯ ಅವಧಿಯನ್ನು ಒಂದೆರಡು ತಿಂಗಳು ಕಡಿಮೆ ಮಾಡುವುದರೊಂದಿಗೆ ಮತ್ತು ಈ ವರ್ಷದ ಫೆಬ್ರವರಿ-ಮಾರ್ಚ್‌ ನಲ್ಲಿ ಹೆಚ್ಚಾಗಿ ಮಾರಾಟವಾಗುವುದರಿಂದ, ಸೆಪ್ಟೆಂಬರ್‌ನ ಬದಲಿಗೆ ಆಗಸ್ಟ್ ಅಂತ್ಯದ ವೇಳೆಗೆ ಮುಕ್ತ ಮಾರುಕಟ್ಟೆಯಲ್ಲಿ ರಬಿ ಸ್ಟಾಕ್ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.


ಇದನ್ನೂ ಓದಿ: ತಾಯಿ ಹಾಲಿನಂತೆ ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ ʼತೆಂಗಿನಕಾಯಿʼ..! ತಿಳಿಯಿರಿ


ಹಬ್ಬದ ತಿಂಗಳುಗಳಲ್ಲಿ (ಅಕ್ಟೋಬರ್-ಡಿಸೆಂಬರ್) ಬೆಲೆಗಳಲ್ಲಿನ ಏರಿಳಿತಗಳು ದೂರವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ