ಆದಾಯ ತೆರಿಗೆ ಪಾವತಿದಾರರಿಗೊಂದು ಗುಡ್ ನ್ಯೂಸ್!

Good News For Tax Payers: ಈಗಾಗಲೇ ತಿಳಿದಿರುವ ಹಾಗೆ ಸರ್ಕಾರದ ವತಿಯಿಂದ ಐಟಿಆರ್ ದಾಖಲಿಸಲು  ಕೊನೆಯ ದಿನಾಂಕ 31 ಜುಲೈ 2023 ನಿಗದಿಪಡಿಸಲಾಗಿತ್ತು ಮತ್ತು ಈ ದಿನಾಂಕದ ನಂತರ ಡಿಸೆಂಬರ್ 31 ರವರೆಗೆ ತೆರಿಗೆ ರಿಟರ್ನ್ ಸಲ್ಲಿಸುವವರು ರೂ 5000 ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿತ್ತು, ಆದರೆ ಈ ನಿಟ್ಟಿನಲ್ಲಿ ಒಂದು ಭಾರಿ ನೆಮ್ಮದಿಯ ಸುದ್ದಿ ಪ್ರಕಟವಾಗಿದೆ.   

Written by - Nitin Tabib | Last Updated : Aug 4, 2023, 10:06 PM IST
  • ಆದಾಯ ತೆರಿಗೆಯ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ, ನೀವು ಪಡೆಯುವ ವೈಯಕ್ತಿಕ ಮೂಲ ವಿನಾಯಿತಿ ರೂ 3 ಲಕ್ಷಗಳಾಗಿದೆ.
  • ಇದೇ ವೇಳೆ, ಹಳೆಯ ತೆರಿಗೆ ಪದ್ಧತಿಯಲ್ಲಿ, ಮೂಲ ವಿನಾಯಿತಿ ಮಿತಿಯು ವಯಸ್ಸಿನ ಪ್ರಕಾರ ಬದಲಾಗಬಹುದು.
  • ಇದರಲ್ಲಿ 60 ವರ್ಷದೊಳಗಿನವರಿಗೆ 2.5 ಲಕ್ಷ ಮತ್ತು 60 ರಿಂದ 80 ವರ್ಷದೊಳಗಿನವರಿಗೆ 3 ಲಕ್ಷದವರೆಗೆ ರಿಯಾಯಿತಿ ಸಿಗುತ್ತದೆ.
  • 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ರಿಯಾಯಿತಿ ಸಿಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

Trending Photos

ಆದಾಯ ತೆರಿಗೆ ಪಾವತಿದಾರರಿಗೊಂದು ಗುಡ್ ನ್ಯೂಸ್! title=

ನವದೆಹಲಿ: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವವರಿಗೆ ಒಂದು ಗುಡ್ ನ್ಯೂಸ್ ಪ್ರಕಟವಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಸರ್ಕಾರದಿಂದ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2023 ನಿಗದಿಪಡಿಸಲಾಗಿತ್ತು ಮತ್ತು ಈ ದಿನಾಂಕದ ನಂತರ ಡಿಸೆಂಬರ್ 31 ರವರೆಗೆ ತೆರಿಗೆ ರಿಟರ್ನ್ ಸಲ್ಲಿಸುವವರು ರೂ 5000 ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿತ್ತು, ಆದರೆ ಈ ನಿಟ್ಟಿನಲ್ಲಿ ಇದೀಗ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.  ಜುಲೈ 31 ರ ನಂತರವೂ ಐಟಿಆರ್ ಸಲ್ಲಿಸಲು ಜನರು ಯಾವುದೇ ದಂಡವನ್ನು ಪಾವತಿಸಬೇಕಾಗಿಲ್ಲ. ಆದಾಯ ತೆರಿಗೆ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ದಂಡ ಪಾವತಿಸಬೇಕಾಗಿಲ್ಲ
ಅನೇಕ ರಾಜ್ಯಗಳಲ್ಲಿ ಪ್ರವಾಹದಿಂದಾಗಿ, ಜನರಿಗೆ ತಮ್ಮ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗಿಲ್ಲ ಮತ್ತು ದಿನಾಂಕವನ್ನು ವಿಸ್ತರಿಸಲು ಪದೇ ಪದೇ ಮನವಿಗಳು ಬಂದರೂ ಕೂಡ ಸರ್ಕಾರವು ದಿನಾಂಕವನ್ನು ವಿಸ್ತರಿಸಿರಲಿಲ್ಲ. ಏತನ್ಮಧ್ಯೆ, ಇದೀಗ ಆದಾಯ ತೆರಿಗೆ ಇಲಾಖೆ ಐಟಿಆರ್ ಸಲ್ಲಿಸಲು ಮುಂದೆಯೂ ಕೂಡ ನೀವು ಯಾವುದೇ ದಂಡವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದೆ.
 
ತಡವಾಗಿ ಶುಲ್ಕ ಪಾವತಿಸುವ ಅಗತ್ಯವಿಲ್ಲ
ನೀವು ಕೂಡ ಒಂದು ವೇಳೆ ಐಟಿಆರ್ ಸಲ್ಲಿಕೆಯಿಂದ ಹೊರಗುಳಿದಿದ್ದರೆ ಮತ್ತು ಈ ಸಮಯದಲ್ಲಿ ದಂಡದೊಂದಿಗೆ ತಡವಾದ ಐಟಿಆರ್ ಅನ್ನು ಫೈಲ್ ಮಾಡಲು ಯೋಜಿಸುತ್ತಿದ್ದರೆ, ಅದಕ್ಕೂ ಮೊದಲು ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ. ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳ ಪ್ರಕಾರ, ಗಡುವು ಮುಗಿದ ನಂತರ ಐಟಿಆರ್ ಅನ್ನು ಸಲ್ಲಿಸಲು ಪ್ರತಿಯೊಬ್ಬರೂ ವಿಳಂಬ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.

ಇದನ್ನೂ ಓದಿ-ಶ್ರೀಸಾಮಾನ್ಯರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ, ದೀಪಾವಳಿಗೂ ಮುನ್ನ ಸಿಗಲಿದೆ ಈ ಉಡುಗೊರೆ!
 
ಯಾರು ದಂಡ ಪಾವತಿಸಬೇಕಾಗಿಲ್ಲ?
ಒಬ್ಬ ವ್ಯಕ್ತಿಯ ಒಟ್ಟು ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರದಿದ್ದರೆ, ತಡವಾಗಿ ITR ಅನ್ನು ಸಲ್ಲಿಸುವಾಗ ಆತ ದಂಡವನ್ನು ಪಾವತಿಸಬೇಕಾಗಿಲ್ಲ. ಈ ವಿನಾಯಿತಿಯನ್ನು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234F ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-ಎಲ್ಲಕ್ಕಿಂತ ಹೆಚ್ಚು ಈ ಕಂಪನಿಯ ಬೈಕ್ ಖರೀದಿಸುತ್ತಿದ್ದಾರೆ ಜನ, Royal Enfield ಎಷ್ಟನೆ ಸ್ಥಾನದಲ್ಲಿದೆ?
 
5 ಲಕ್ಷದವರೆಗೆ ರಿಯಾಯಿತಿ ಸಿಗಲಿದೆ
ಆದಾಯ ತೆರಿಗೆಯ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ, ನೀವು ಪಡೆಯುವ ವೈಯಕ್ತಿಕ ಮೂಲ ವಿನಾಯಿತಿ ರೂ 3 ಲಕ್ಷಗಳಾಗಿದೆ. ಇದೇ ವೇಳೆ, ಹಳೆಯ ತೆರಿಗೆ ಪದ್ಧತಿಯಲ್ಲಿ, ಮೂಲ ವಿನಾಯಿತಿ ಮಿತಿಯು ವಯಸ್ಸಿನ ಪ್ರಕಾರ ಬದಲಾಗಬಹುದು. ಇದರಲ್ಲಿ 60 ವರ್ಷದೊಳಗಿನವರಿಗೆ 2.5 ಲಕ್ಷ ಮತ್ತು 60 ರಿಂದ 80 ವರ್ಷದೊಳಗಿನವರಿಗೆ 3 ಲಕ್ಷದವರೆಗೆ ರಿಯಾಯಿತಿ ಸಿಗುತ್ತದೆ. 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ರಿಯಾಯಿತಿ ಸಿಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News