ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದ ಈ ಆಟಗಾರ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಣೆ

Alex Hales Retirement: ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಆಂಗ್ಲರ ತಂಡದ ಸದಸ್ಯರಾಗಿದ್ದರು. ಆ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅವರು, ಟೀಂ ಇಂಡಿಯಾ ಟೂರ್ನಿಯಿಂದ ಹೊರ ಬೀಳುವಂತೆ ಮಾಡಿದ್ದರು

Written by - Bhavishya Shetty | Last Updated : Aug 5, 2023, 08:46 AM IST
    • ಅಲೆಕ್ಸ್ ಹೇಲ್ಸ್ ಶುಕ್ರವಾರ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ
    • ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಆಂಗ್ಲರ ತಂಡದ ಸದಸ್ಯರಾಗಿದ್ದರು.
    • 34 ವರ್ಷದ ಅಲೆಕ್ಸ್ ಹೇಲ್ಸ್ 2011ರ ಆಗಸ್ಟ್‌’ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದರು
ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದ ಈ ಆಟಗಾರ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಣೆ title=
alex hales retirement

Alex Hales Retirement: ಇಂಗ್ಲೆಂಡ್‌’ನ ಸ್ಟಾರ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಶುಕ್ರವಾರ (ಆಗಸ್ಟ್ 4) ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್‌’ಗೆ ಎರಡು ತಿಂಗಳ ಮೊದಲು ಹೇಲ್ಸ್ ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದ ಆಂಗ್ಲರ ತಂಡದ ಸದಸ್ಯರಾಗಿದ್ದರು. ಆ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅವರು, ಟೀಂ ಇಂಡಿಯಾ ಟೂರ್ನಿಯಿಂದ ಹೊರ ಬೀಳುವಂತೆ ಮಾಡಿದ್ದರು

ಇದನ್ನೂ ಓದಿ: ಇನ್ಮುಂದೆ RCBಗೆ ಜಿಂಬಾಬ್ವೆಯ ಮಾಜಿ ಆಟಗಾರ ನೂತನ ಹೆಡ್’ಕೋಚ್! ಹೊಸ ಪರ್ವದಲ್ಲಿ “ಈ ಸಲ ಕಪ್ ನಮ್ದೇ…”

34 ವರ್ಷದ ಅಲೆಕ್ಸ್ ಹೇಲ್ಸ್ 2011ರ ಆಗಸ್ಟ್‌’ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದರು. ಮೂರು ಸ್ವರೂಪಗಳಲ್ಲಿ ಒಟ್ಟು 156 ಪಂದ್ಯಗಳನ್ನು ಆಡಿದ್ದಾರೆ. ಏಳು ಶತಕಗಳ ಸಹಾಯದಿಂದ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 5000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ ಶತಕ ಸಿಡಿಸಿದ ಮೊದಲ ಇಂಗ್ಲಿಷ್ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಇವರ ಹೆಸರಿನಲ್ಲಿದೆ.

ಅಲೆಕ್ಸ್ ಹೇಲ್ಸ್ ಅವರ ನಿವೃತ್ತಿ ನಿರ್ಧಾರವು ಅಭಿಮಾನಿಗಳು ಸೇರಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅನ್ನು ಅಚ್ಚರಿಗೊಳಿಸಿದೆ. ಅನುಭವಿ ಬ್ಯಾಟ್ಸ್‌ಮನ್’ಗೆ 2024 ರ ಐಸಿಸಿ ಟಿ 20 ವಿಶ್ವಕಪ್‌ ನಲ್ಲಿ ಸ್ಥಾನ ಸಿಗುತ್ತದೆ ಎಂಬ ಭರಚಸೆ ಎಲ್ಲೆಡೆ ಇತ್ತು.

ಇನ್ನು ಈ ಬಗ್ಗೆ ಮಾತನಾಡಿದ ಹೇಲ್ಸ್, "ಎಲ್ಲಾ ಮೂರು ಸ್ವರೂಪಗಳಲ್ಲಿ 156 ಪಂದ್ಯಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ಒಂದು ಸುಯೋಗ. ನಾನು ಕೆಲವು ನೆನಪುಗಳನ್ನು ಮತ್ತು ಕೆಲವು ಸ್ನೇಹವನ್ನು ಜೀವಮಾನವಿಡೀ ಉಳಿಯುವಂತೆ ಮಾಡಿದ್ದೇನೆ. ನನಗೆ ಮುಂದುವರಿಯಲು ಇದು ಸರಿಯಾದ ಸಮಯ" ಎಂದು ಹೇಳಿದರು. “ಇದು ನಂಬಲಾಗದ ಪ್ರಯಾಣವಾಗಿದೆ. ಈ ಪ್ರಯಾಣದಲ್ಲಿ ಅನೇಕ ಹೆಚ್ಚು ಕಡಿಮೆಗಳನ್ನು ಅನುಭವಿಸಿದ್ದೇನೆ. ಇಂಗ್ಲೆಂಡ್‌’ಗಾಗಿ ನನ್ನ ಕೊನೆಯ ಪಂದ್ಯವೆಂದರೆ ಅದು T20 ವಿಶ್ವಕಪ್‌. ಆ ಕಪ್ ಗೆಲ್ಲಲೇಬೇಕು" ಎಂದರು.

ಇದನ್ನೂ ಓದಿ: ವಿಕೆಟ್ ಕೀಪರ್ ಆಗಿದ್ದು ಬ್ಯಾಟಿಂಗ್’ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದ ಕ್ರಿಕೆಟಿಗ ಯಾರು? ಅಗ್ರ 5ರಲ್ಲಿ ನಮ್ಮವ ಒಬ್ಬನೇ

ಭಾರತದ ವಿರುದ್ಧ ಆಡಿದ ಸ್ಮರಣೀಯ ಇನ್ನಿಂಗ್ಸ್:

ಕಳೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವಲ್ಲಿ ಹೇಲ್ಸ್ ಪ್ರಮುಖ ಪಾತ್ರ ವಹಿಸಿದ್ದರು. ಸೆಮಿಫೈನಲ್ ಸುತ್ತಿನಲ್ಲಿ ಭಾರತದ ವಿರುದ್ಧ 47 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದ್ದರು. ನಾಯಕ ಜೋಸ್ ಬಟ್ಲರ್ ನಂತರದ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಇನ್ನು 2019 ರಿಂದ ODIಗಳಲ್ಲಿ ಇವರು ಆಡಿಲ್ಲ. T20I ಗಳಲ್ಲಿ ತಂಡದ ಸಾಮಾನ್ಯ ಸದಸ್ಯರಾಗಿದ್ದರು. ಹೇಲ್ಸ್ ಪ್ರಸ್ತುತ ದಿ ಹಂಡ್ರೆಡ್ 2023 ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಟ್ರೆಂಟ್ ರಾಕೆಟ್ಸ್ ತಂಡದಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News