ಓರ್ಲಿಯನ್ಸ್ (ಫ್ರಾನ್ಸ್): ಭಾನುವಾರ ಫ್ರಾನ್ಸ್‌ನಲ್ಲಿ ನಡೆದ ಓರ್ಲಿಯನ್ಸ್ ಮಾಸ್ಟರ್ಸ್ 2022(Orleans Masters Super 100) ರ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಷಟ್ಲರ್ ಮಿಥುನ್ ಮಂಜುನಾಥ್ (Mithun Manjunath), ಟೊಮಾ ಜೂನಿಯರ್ ಪೊಪೊವ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

79ನೇ ಶ್ರೇಯಾಂಕದ ಭಾರತೀಯ ಷಟ್ಲರ್ ಮಿಥುನ್‌, ಪಲೈಸ್ ಡೆಸ್ ಸ್ಪೋರ್ಟ್ಸ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ 21-11, 21-19, 21-11, 21-19 ಅಂಕಗಳ ಅಂತರದಿಂದ ಫ್ರಾನ್ಸ್‌ನ ಆಟಗಾರ  ಪೊಪೊವ್ ವಿರುದ್ಧ ಮುಗ್ಗರಿಸಿದ್ದಾರೆ. 


ಇದನ್ನು ಓದಿIPL 2022: ಐಪಿಎಲ್‌ನಲ್ಲಿ ವಿಶ್ವದ ನಂಬರ್ 1 ಬೌಲರ್‌ನ ಪ್ರವೇಶ- ಕೆಕೆಆರ್ ತಂಡಕ್ಕೆ ದೊಡ್ಡ ಅಸ್ತ್ರ


ಟೂರ್ನಮೆಂಟ್‌ನ ಎರಡನೇ ಸುತ್ತಿನಲ್ಲಿ ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಕೆಲ ತಪ್ಪುಗಳಿಂದ  ಭಾರತದ ಷಟ್ಲರ್ ಮಿಥುನ್ ಮಂಜುನಾಥ್, ಟೊಮಾ ಜೂನಿಯರ್ (Toma Junior Popov) ವಿರುದ್ಧ ಸೋಲನ್ನೊಪ್ಪಿಕೊಂಡರು. 


ಈ ಹಿಂದೆ ಜ್ಯೂನಿಯರ್‌ ಯುರೋಪಿಯನ್ ಚಾಂಪಿಯನ್  ಆಗಿ ಟೊಮಾ ಜೂನಿಯರ್ ಪೊಪೊವ್ ಹೊರಹೊಮ್ಮಿದ್ದರು. ಇದೀಗ ಓರ್ಲಿಯನ್ಸ್ ಮಾಸ್ಟರ್ಸ್ 2022ರ ಕಿರೀಟವನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. 


ಇದನ್ನು ಓದಿIPL2022: ಪಂಜಾಬ್ ಕಿಂಗ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ಗೆ ಹೀನಾಯ ಸೋಲು



ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.