IPL 2022: ಐಪಿಎಲ್‌ನಲ್ಲಿ ವಿಶ್ವದ ನಂಬರ್ 1 ಬೌಲರ್‌ನ ಪ್ರವೇಶ- ಕೆಕೆಆರ್ ತಂಡಕ್ಕೆ ದೊಡ್ಡ ಅಸ್ತ್ರ

IPL 2022: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಋತುವಿನ ಮುಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 6 ರಂದು ಆಡಲಿದೆ. ಈ ಪಂದ್ಯದಲ್ಲಿ ವಿಶ್ವದ ನಂ.1 ಬೌಲರ್ ಕೆಕೆಆರ್ ತಂಡಕ್ಕೆ ಸೇರ್ಪಡೆಯಾಗಬಹುದು. ಈ ಆಟಗಾರ ಭಾರತಕ್ಕೆ ಬಂದಿದ್ದು, ಆಯ್ಕೆಗೂ ಲಭ್ಯವಾಗಿದ್ದಾರೆ.

Written by - Yashaswini V | Last Updated : Apr 4, 2022, 11:57 AM IST
  • ಐಪಿಎಲ್‌ನಲ್ಲಿ ವಿಶ್ವದ ನಂ.1 ಬೌಲರ್ ಎಂಟ್ರಿ ಕೊಟ್ಟಿದ್ದಾರೆ
  • ಈ ಮಾರಕ ಬೌಲರ್ ಕೆಕೆಆರ್ ತಂಡದಲ್ಲಿ ಆಡಲಿದ್ದಾರೆ
  • ಮುಂದಿನ ಪಂದ್ಯ ಏಪ್ರಿಲ್ 6 ರಂದು ಮುಂಬೈ ಇಂಡಿಯನ್ಸ್ ವಿರುದ್ಧ
IPL 2022: ಐಪಿಎಲ್‌ನಲ್ಲಿ ವಿಶ್ವದ ನಂಬರ್ 1 ಬೌಲರ್‌ನ ಪ್ರವೇಶ- ಕೆಕೆಆರ್ ತಂಡಕ್ಕೆ ದೊಡ್ಡ ಅಸ್ತ್ರ title=
IPL 2022 KKR

IPL 2022: ಐಪಿಎಲ್ 2022 ರ ಆರಂಭದಲ್ಲಿ, ಅನೇಕ ತಂಡಗಳು ತಮ್ಮ ದೊಡ್ಡ ಆಟಗಾರರಿಲ್ಲದೆ ನೆಲಕಚ್ಚಿದ್ದವು. ಆದರೆ ಈಗ ಕ್ರಮೇಣ ಉಳಿದ ಆಟಗಾರರು ಐಪಿಎಲ್‌ಗೆ ಪ್ರವೇಶಿಸುತ್ತಿದ್ದಾರೆ, ಇದರಿಂದಾಗಿ ಈ ಲೀಗ್‌ನ ಮೋಜು ಮತ್ತಷ್ಟು ಹೆಚ್ಚಾಗಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡವು ತನ್ನ ಮಾರಕ ಬೌಲರ್ ತಂಡವನ್ನು ಸೇರಲು ಕಾಯುತ್ತಿತ್ತು, ಅದು ಈಗ ಪೂರ್ಣಗೊಳ್ಳಲಿದೆ. ಐಪಿಎಲ್ ಅಭಿಮಾನಿಗಳು ಈ ಋತುವಿನಲ್ಲಿ ವಿಶ್ವದ ನಂಬರ್ 1 ಬೌಲರ್ ಆಡುವುದನ್ನು ಶೀಘ್ರದಲ್ಲೇ ನೋಡಬಹುದು.  

ಐಪಿಎಲ್ 2022 (IPL 2022) ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಉತ್ತಮ ಆರಂಭವನ್ನು ಮಾಡಿದೆ, ತಂಡವು ತನ್ನ 3 ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ. ಏತನ್ಮಧ್ಯೆ, ತಂಡದ ಬಲವು ಮತ್ತಷ್ಟು ಹೆಚ್ಚಾಗಲಿದೆ, ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ (Pat Cummins) ಐಪಿಎಲ್‌ನಲ್ಲಿ ಭಾಗವಹಿಸಲು ಏಪ್ರಿಲ್ 1 ರಂದು ಭಾರತಕ್ಕೆ ಬಂದರು ಮತ್ತು ಇಂದು ಅವರ ಕ್ವಾರಂಟೈನ್ ಕೊನೆಗೊಳ್ಳಲಿದೆ. ಈ ಆಸ್ಟ್ರೇಲಿಯಾದ ವೇಗದ ಬೌಲರ್‌ ಏಪ್ರಿಲ್ 6 ರಿಂದ ಕೋಲ್ಕತ್ತಾ ತಂಡದಲ್ಲಿ ಆಡಲು ಲಭ್ಯವಿರುತ್ತಾರೆ. ಕಮ್ಮಿನ್ಸ್ ಕಳೆದ ಐದು ವರ್ಷಗಳಿಂದ ಕೆಕೆಆರ್ ತಂಡದ ಭಾಗವಾಗಿದ್ದಾರೆ. KKR ನ ಮುಂದಿನ ಪಂದ್ಯವು ಮುಂಬೈ ಇಂಡಿಯನ್ಸ್‌ನೊಂದಿಗೆ ಏಪ್ರಿಲ್ 6 ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಕಮ್ಮಿನ್ಸ್ ತಂಡದ ಪ್ಲೇಯಿಂಗ್ XI ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- IPL 2022: ಸತತ 2 ಸೋಲುಗಳಿಂದ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ ಮಾಡಿದ್ದೇನು?

ಕೆಕೆಆರ್‌ಗೆ ಹೆಚ್ಚಾಯ್ತು ಆಯ್ಕೆಯ ಟೆನ್ಷನ್ :
ಕೆಕೆಆರ್ (KKR) ಹೆಡ್ ಕೋಡ್ ಬ್ರೆಂಡನ್ ಮೆಕಲಮ್ ಅವರು ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಮತ್ತು ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ (Pat Cummins)  ತಂಡವನ್ನು ಸೇರಿಕೊಂಡಿರುವುದಕ್ಕೆ ತುಂಬಾ ಸಂತೋಷಪಟ್ಟಿದ್ದಾರೆ. ಆದರೆ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ದೊಡ್ಡ ಟೆನ್ಷನ್ ಆಗಲಿದೆ. ತಂಡದ ಆಯ್ಕೆ ಕುರಿತು ಮಾತನಾಡಿರುವ ಹೆಡ್ ಕೋಡ್ ಮೆಕಲಮ್, 'ಆಯ್ಕೆ ಈಗ ನಮಗೆ ತಲೆನೋವಾಗಿದೆ. ಏಕೆಂದರೆ ಈಗ ನಾವು ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡಲು ಸಾಕಷ್ಟು ಆಟಗಾರರನ್ನು ಹೊಂದಿದ್ದೇವೆ, ಈ ಸಮಸ್ಯೆಯನ್ನು ಎದುರಿಸುವುದು ತಂಡಕ್ಕೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಈ ಋತುವಿನಲ್ಲಿ ಕೆಕೆಆರ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದಲ್ಲಿ ಬದಲಾವಣೆ ಮಾಡುವುದು ದೊಡ್ಡ ನಿರ್ಧಾರವಾಗಿದೆ ಎಂದಿದ್ದಾರೆ.

ಮೆಗಾ ಹರಾಜಿನಲ್ಲಿ ಕಮ್ಮಿನ್ಸ್ ಮೇಲೆ ಬಾಜಿ:
ಮೆಗಾ ಹರಾಜಿನ ಮೊದಲು ಕಮ್ಮಿನ್ಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಕೈಬಿಟ್ಟಿತ್ತು. ಆದರೆ ವೇಗದ ಬೌಲರ್ ಕಮ್ಮಿನ್ಸ್ ಅವರನ್ನು ಮತ್ತೊಮ್ಮೆ ಕೆಕೆಆರ್ ಮೆಗಾ ಹರಾಜಿನಲ್ಲಿ 7.25 ಕೋಟಿಗೆ ಖರೀದಿಸಿತು. 2020ರ IPL ಹರಾಜಿನಲ್ಲಿ , KKR ಕಮ್ಮಿನ್ಸ್‌ಗಾಗಿ 15.50 ಕೋಟಿ ರೂ. ಖರ್ಚು ಮಾಡಿತ್ತು. ಆದರೆ ಈ ಬಾರಿ ವಿಶ್ವದ ನಂಬರ್-1 ಬೌಲರ್ ಅನ್ನು ಅರ್ಧದಷ್ಟು ಬೆಲೆಗೆ ತಂಡ ಪಡೆದುಕೊಂಡಿದೆ.

ಇದನ್ನೂ ಓದಿ- ICC Womens World Cup 2022: ಇಂಗ್ಲೆಂಡ್ ಮಣಿಸಿ 7ನೇ ಬಾರಿ ವಿಶ್ವ ಚಾಂಪಿಯನ್ ಆದ ಆಸ್ಟ್ರೇಲಿಯಾ

IPL 2022 ರಲ್ಲಿ KKR ತಂಡ:
ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಶೆಲ್ಡನ್ ಜಾಕ್ಸನ್, ಆರೋನ್ ಫಿಂಚ್, ಸ್ಯಾಮ್ ಬಿಲ್ಲಿಂಗ್ಸ್, ಪ್ರಥಮ್ ಸಿಂಗ್, ರಮೇಶ್ ಕುಮಾರ್, ಬಾಬಾ ಇಂದರ್‌ಜಿತ್, ಅಭಿಜಿತ್ ತೋಮರ್, ಸುನಿಲ್ ನರೈನ್, ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ಮೊಹಮ್ಮದ್ ನಬಿ, ಮೊಹಮ್ಮದ್ ನಬಿ , ನಿತೀಶ್ ರಾಣಾ, ಶಿವಂ ಮಾವಿ, ಚಾಮಿಕಾ ಕರುಣಾರತ್ನೆ, ಅಮನ್ ಖಾನ್, ವರುಣ್ ಚಕ್ರವರ್ತಿ, ಅಶೋಕ್ ಶರ್ಮಾ, ಉಮೇಶ್ ಯಾದವ್, ರಶಿಕ್ ದಾರ್, ಟಿಮ್ ಸೌಥಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News