ಪಾಕ್ ನಾಯಕನಿಂದ ಡೇವಿಡ್ ವಾರ್ನರ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್ ! ಟೆಸ್ಟ್ ಕೆರಿಯರ್ ಗೆ ವಿದಾಯ ...
PAK vs AUS 3rd Test : ಆಥಿತೇಯ ಆಸ್ಟ್ರೇಲಿಯ ತಂಡವು ಪಾಕ್ ವಿರುದ್ರದ 3ನೇ ಟೆಸ್ಟ್ ಪಂದ್ಯವನ್ನ ಗೆದ್ದು ಕೊಂಡಿದೆ. ಈ ಮೂಲಕ ಸರಣಿಯನ್ನು 3-0 ಅಂತರಗಳಿಂದ ವಶಪಡಿಸಿಕೊಂಡಿದ್ದು, ಪಾಕ್ ತಂಡವನ್ನು ವಾಶ್ ಔಟ್ ಮಾಡಿದೆ. ಆಸಿಸ್ನ ಆಟಗಾರ ಡೇವಿಡ್ ವಾರ್ನರ್ ಗೆ ಇದು ವಿಧಾಯ ಪಂದ್ಯವಾಗಿದ್ದು, ಎಲ್ಲಾ ಆಟಗಾರರು ಹೃದಯ ಸ್ಪರ್ಶಿ ಬಿಳ್ಕೊಡಿಗೆ ನೀಡಿದರು.
Devid Warner special gift : ಸಿಡ್ನಿ ಸ್ಟೇಡಿಯಂನಲ್ಲಿ ನಡೆದ ಕಡೆಯ ಟೆಸ್ಟ್ ಪಂದ್ಯದಲ್ಲಿ ಆಸಿಸ್ ಪಾಕ್ ವಿರುದ್ದ ಭರ್ಜರಿ ಜಯಗಳಿಸಿದೆ. ಈ ಮೂಲಕ ಆಸಿಸ್ ಪಾಕಿಸ್ತಾನದ ವಿರುದ್ದ ಟೆಸ್ಟ್ ಸರಣಿಯನ್ನು 3-0 ಅಂತರಗಳಿಂದ ಗೆದ್ದುಕೊಂಡಿದೆ. ಅಷ್ಟೇ ಅಲ್ಲದೇ ಡೇವಿಡ್ ವಾರ್ನರ್ ಪಾಲಿಗಂತೂ ಈ ಪಂದ್ಯ ಅವಿಸ್ಮರಣೀಯವಾಗಿ ಉಳಿದಿದೆ. ಏಕೆಂದರೆ ಇದು ವಾರ್ನರ್ ವೃತ್ತಿ ಜೀವನದ ಕಡೆಯ ಪಂದ್ಯವಾಗಿದೆ.
ಆಸಿಸ್ ತಂಡವು ಈ ಸರಣಿಯನ್ನು ಗೆಲ್ಲುವ ಮೂಲಕ ಡೇವಿಡ್ ವಾರ್ನರ್ ಗೆ ಗೌರವ ಸಲ್ಲಿಸಿದೆ. ಡೇವಿಡ್ ವಾರ್ನರ್ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ.ಪಾಕಿಸ್ತಾನ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೇ ಶತಕ ಸಿಡಿಸಿ ತಾವು ಇನ್ನೂ ಫಾರ್ಮ್‌ನಲ್ಲಿರುವುದಾಗಿ ತಿಳಿಸಿದರು.
ಇದನ್ನು ಓದಿ-ಭಾರತದ ಈ ಮೂವರು ವೇಗಿಗಳು ಜಗತ್ತಿನ ಯಾವುದೇ ತಂಡವನ್ನು ಬೇಕಾದ್ರೂ ನಡುಗಿಸಬಲ್ಲರು: ಜಹೀರ್ ಖಾನ್ ಕೊಂಡಾಡಿದ್ದು ಯಾರನ್ನು?
ಡೇವಿಡ್ ವಾರ್ನರ್ ಪಾಕ್ ವಿರುದ್ದ ಆಡಿದ ಕಡೆಯ ಸರಣಿಯಲ್ಲಿ 3 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 164, 0, 38, 6, ಹಾಗೂ 36 & 57 ರನ್ ಸಿಡಿಸಿದ್ದಾರೆ. 3ನೇ ಟೆಸ್ಟ್ ಪಂದ್ಯವು ಅಂತ್ಯಗೊಳ್ಳುತ್ತಿದಂತೆ ಡೇವಿಡ್ ವಾರ್ನರ್ ಗೆ ಎರಡು ತಂಡದ ಆಟಗಾರರಿಂದ ಗೌರವಾನ್ವಿತ ಬಿಳ್ಕೊಡಿಗೆ ದೊರೆಯಿತು.
ಪಾಕಿಸ್ತಾನ ತಂಡದ ನಾಯಕನಿಂದ ವಿಶೇಷ ಗಿಫ್ಟ್
ಪಾಕಿಸ್ತಾನ ತಂಡದ ನಾಯಕನಾದ ಶಾನ್ ಮಸೂದ್ ಡೇವಿಡ್ ವಾರ್ನರ್ ಬಗ್ಗೆ ಮಾತನಾಡಿದರು. ಡೇವಿಡ್ ವಾರ್ನರ್ ಚಿಕ್ಕದಾಗಿ ಅಭಿನಂದನೆ ಸಲ್ಲಿಸುವುದರ ಜೊತೆಗೆ ದೊಡ್ಡ ಕೊಡುಗೆ ನೀಡುವುದಾಗಿ ಹೇಳಿ, ಪಾಕ್ ಆಟಗಾರು ಸಹಿ ಮಾಡಿದ ಬಾಬರ್ ಆಜಮ್ ಅವರ ಜೆರ್ಸಿ ಯನ್ನು ವಾರ್ನರ್ ಗೆ ನೀಡುವ ಮೂಲಕ ಮುಂದಿನ ಜೀವನವನ್ನು ಹಾರೈಸಿದರು.
ಇದನ್ನು ಓದಿ-SA Vs IND: ಕೇಪ್ ಟೌನ್‌ನಲ್ಲಿ ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಬಳಿಕ ವಿರಾಟ್ ಕೊಹ್ಲಿಯ ತಮಾಷೆಯ ಪೋಸ್ ವೈರಲ್
ವಾರ್ನರ್ ತಮ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ 112 ಪಂದ್ಯಗಳನ್ನು ಆಡಿದ್ದು 205 ಇನ್ನಿಂಗ್ಸ್‌ಗಳಲ್ಲಿ ಬಾಟ್ ಮಾಡಿದ್ಧಾರೆ. 44.59 ಸರಾಸರಿಯಲ್ಲಿ ಬಾಟ್ ಮಾಡಿ 8786 ರನ್ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೇ 26 ಶತಕಗಳನ್ನು 37 ಬೌಂಡರಿಗಳನ್ನು ಗಳಿಸಿದ್ದು, ಅಜೇಯ 335 ರನ್‌ಗಳು ಇವರ ಅತ್ಯಧಿಕ ರನ್ ದಾಖಲೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ