ನವದೆಹಲಿ: ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಭಾನುವಾರ ಸಂತಾಪ ಸೂಚಿಸಿದ್ದಾರೆ.


COMMERCIAL BREAK
SCROLL TO CONTINUE READING

"ಲತಾ ಮಂಗೇಶ್ಕರ್ ಅವರು ಅನುಗ್ರಹ, ನಮ್ರತೆ ಮತ್ತು ಸರಳತೆಯ ಪ್ರತಿರೂಪವಾಗಿದ್ದರು ಮತ್ತು ಆದ್ದರಿಂದ ಅವರ ಶ್ರೇಷ್ಠತೆ ಎಲ್ಲರಿಗೂ ಪಾಠವಾಗಿದೆ.ಕಿಶೋರ್ ಕುಮಾರ್ ನಂತರ ಈಗ ಅವರ ಸಾವು ನನಗೆ ಸಂಗೀತವೆ ಇಲ್ಲದಂತಾಗಿದೆ" ಎಂದು ರಾಜಾ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಬೆಳ್ಳನೆ ಬೆಳಗಾಯಿತು' ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಲತಾ ಮಂಗೇಶ್ಕರ್..!


ಲತಾ ಮಂಗೇಶ್ಕರ್ ಅವರು ಕೋವಿಡ್-19 ಮತ್ತು ನ್ಯುಮೋನಿಯಾ ನಂತರ ಜನವರಿ 8 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು.ಕೊರೊನಾದಿಂದ ಚೇತರಿಸಿಕೊಂಡಿದ್ದರೂ, ಗಾಯಕಿಯ ಸ್ಥಿತಿ ಶನಿವಾರ ಹದಗೆಟ್ಟ ನಂತರ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.


ಮಂಗೇಶ್ಕರ್ ಅವರು ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಸಾಂದರ್ಭಿಕ ಸಂಗೀತ ಸಂಯೋಜಕರಾಗಿದ್ದರು ಮತ್ತು ಅವರ ಮಧುರ ಧ್ವನಿಗಾಗಿ "ನೈಟಿಂಗೇಲ್ ಆಫ್ ಇಂಡಿಯಾ" ಎಂದು ಜನಪ್ರಿಯರಾಗಿದ್ದರು.


ಗಾನಕೋಗಿಲೆ ಲತಾ ಮಂಗೇಶ್ಕರ್ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗಿ


ಸೆಪ್ಟೆಂಬರ್ 28, 1929 ರಂದು ಜನಿಸಿದ ಅವರು 1942 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಏಳು ದಶಕಗಳ ವೃತ್ತಿಜೀವನದಲ್ಲಿ,  ಸಾವಿರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಅವರು ಮೂವತ್ತಾರು ಪ್ರಾದೇಶಿಕ ಭಾರತೀಯ ಭಾಷೆಗಳು ಮತ್ತು ವಿದೇಶಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.


2001 ರಲ್ಲಿ, ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ, ಅವರು ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಲಾಯಿತು ಮತ್ತು ಸುಬ್ಬುಲಕ್ಷ್ಮಿ ನಂತರ ಈ ಗೌರವವನ್ನು ಪಡೆದ ಎರಡನೇ ಗಾಯಕಿಯಾಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.