ಗಾನಕೋಗಿಲೆ ಲತಾ ಮಂಗೇಶ್ಕರ್ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗಿ

92 ನೇ ವಯಸ್ಸಿನಲ್ಲಿ ಇಂದು ಬೆಳಿಗ್ಗೆ ನಿಧನರಾದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪ್ರಧಾನಿ ನರೇಂದ್ರ ಮೋದಿ ಅವರು ದುಃಖದ ಸುದ್ದಿಯನ್ನು ಹಂಚಿಕೊಂಡವರಲ್ಲಿ ಮೊದಲಿಗರು ಮತ್ತು ಅವರು "ಪದಗಳಿಗೆ ಮೀರಿದ ದುಃಖ" ಎಂದು ಹೇಳಿದರು.

Last Updated : Feb 6, 2022, 03:58 PM IST
  • ಲತಾ ಮಂಗೇಶ್ಕರ್ ಹಿನ್ನೆಲೆ ಗಾಯಕಿ ಮತ್ತು ಸಾಂದರ್ಭಿಕ ಸಂಗೀತ ಸಂಯೋಜಕರಾಗಿದ್ದರು ಮತ್ತು ಅವರ ಮಧುರ ಧ್ವನಿಗಾಗಿ "ನೈಟಿಂಗೇಲ್ ಆಫ್ ಇಂಡಿಯಾ" ಎಂದು ಜನಪ್ರಿಯರಾಗಿದ್ದರು. ಅವರ ಕೃತಿಯು ಭಕ್ತಿ ಮತ್ತು ಶಾಸ್ತ್ರೀಯ ಆಲ್ಬಮ್‌ಗಳನ್ನು ಒಳಗೊಂಡಿತ್ತು ಮತ್ತು ಇಂಗ್ಲಿಷ್, ರಷ್ಯನ್, ಡಚ್ ಮತ್ತು ಸ್ವಾಹಿಲಿ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 27,000 ಹಾಡುಗಳನ್ನು ಹಾಡಿದ್ದಾರೆ.
ಗಾನಕೋಗಿಲೆ ಲತಾ ಮಂಗೇಶ್ಕರ್ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗಿ  title=

ಮುಂಬೈ: 92 ನೇ ವಯಸ್ಸಿನಲ್ಲಿ ಇಂದು ಬೆಳಿಗ್ಗೆ ನಿಧನರಾದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸುತ್ತಾ ಅವರು "ಪದಗಳಿಗೆ ಮೀರಿದ ದುಃಖ" ಎಂದು ಬಣ್ಣಿಸಿದರು.

"ದಯೆ ಮತ್ತು ಕಾಳಜಿಯುಳ್ಳ ಲತಾ ದೀದಿ ಅವರು ನಮ್ಮನ್ನು ಅಗಲಿದ್ದಾರೆ.ಅವರು ನಮ್ಮ ದೇಶದಲ್ಲಿ ತುಂಬಲಾರದ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ.ಮುಂಬರುವ ಪೀಳಿಗೆಗಳು ಅವರನ್ನು ಭಾರತೀಯ ಸಂಸ್ಕೃತಿಯ ಧೀಮಂತಿಕೆ ಎಂದು ನೆನಪಿಸಿಕೊಳ್ಳುತ್ತಾರೆ, ಅವರ ಮಧುರ ಧ್ವನಿಯು ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯವನ್ನು ಹೊಂದಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ-Relationship Tips: ನಿಮ್ಮ ಸಂಗಾತಿಗೆ ಅಪ್ಪಿ-ತಪ್ಪಿಯೂ ಕೂಡ ಈ ಸಿಕ್ರೆಟ್ ಹೇಳಬೇಡಿ, ಇಲ್ದಿದ್ರೆ..?

ಮುಂಬೈನಲ್ಲಿ ಗಾಯಕಿ ಲತಾಅವರ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. "ಲತಾ ದೀದಿ ಅವರಿಗೆ ಅಂತಿಮ ನಮನ ಸಲ್ಲಿಸಲು ಸ್ವಲ್ಪ ಸಮಯದ ನಂತರ ಮುಂಬೈಗೆ ತೆರಳುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೋವಿಡ್-19 ಮತ್ತು ನ್ಯುಮೋನಿಯಾ ಇರುವುದು ಪತ್ತೆಯಾದ ನಂತರ  ಅವರನ್ನು ಜನವರಿ 8 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಕೋವಿಡ್‌ನಿಂದ ಚೇತರಿಸಿಕೊಂಡಿದ್ದರೂ, ಶನಿವಾರದಂದು ಅವರ ಸ್ಥಿತಿ ಹದಗೆಟ್ಟ ನಂತರ ಗಾಯಕಿಯನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಯಿತು.ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಎರಡು ದಿನಗಳ ರಾಷ್ಟ್ರೀಯ ಶೋಕ

ಲತಾ ಮಂಗೇಶ್ಕರ್ ಅವರ ಹಾಡುಗಳು ವಿವಿಧ ಭಾವನೆಗಳನ್ನು ಹೊರತಂದಿವೆ ಎಂದು ಪ್ರಧಾನಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. "ಅವರು ದಶಕಗಳ ಕಾಲ ಭಾರತೀಯ ಚಲನಚಿತ್ರ ಪ್ರಪಂಚದ ಸ್ಥಿತ್ಯಂತರಗಳನ್ನು ನಿಕಟವಾಗಿ ವೀಕ್ಷಿಸಿದರು. ಚಲನಚಿತ್ರಗಳನ್ನು ಮೀರಿ, ಅವರು ಯಾವಾಗಲೂ ಭಾರತದ ಬೆಳವಣಿಗೆಯ ಬಗ್ಗೆ ಭಾವೋದ್ರಿಕ್ತರಾಗಿದ್ದರು. ಅವರು ಯಾವಾಗಲೂ ಬಲವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸಿದ್ದರು" ಎಂದು ಅವರು ಹೇಳಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಮೊದಲ ಬಜೆಟ್: ಆರ್ಥಿಕ ಮುಗ್ಗಟ್ಟಿನ ಮದ್ಯೆ ಆಯವ್ಯಯ! ಯಾವ ಯೋಜನೆಗಳಿಗೆ ಆದ್ಯತೆ?

"ಲತಾ ದೀದಿಯವರಿಂದ ನಾನು ಯಾವಾಗಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ ಎಂದು ನಾನು ನನ್ನ ಗೌರವವೆಂದು ಪರಿಗಣಿಸುತ್ತೇನೆ. ಅವರೊಂದಿಗಿನ ನನ್ನ ಸಂವಹನವು ಅವಿಸ್ಮರಣೀಯವಾಗಿ ಉಳಿಯುತ್ತದೆ. ಲತಾ ದೀದಿಯವರ ನಿಧನದಿಂದ ನನ್ನ ಸಹ ಭಾರತೀಯರೊಂದಿಗೆ ನಾನು ದುಃಖಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ವರ್ಚುವಲ್ ಭಾಷಣದಲ್ಲಿ, ಗಾಯಕಿನನ್ನು ನೆನಪಿಸಿಕೊಳ್ಳುವ ಮೂಲಕ ಪ್ರಧಾನಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು ಮತ್ತು "ಅವರು ಮಾನವೀಯತೆಗೆ ಆಶೀರ್ವಾದ, ಅವರ ಧ್ವನಿ ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: Lata Mangeshkar: ಗಾಯನ ನಿಲ್ಲಿಸಿದ ಭಾರತ ರತ್ನ ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಹಿನ್ನೆಲೆ ಗಾಯಕಿ ಮತ್ತು ಸಾಂದರ್ಭಿಕ ಸಂಗೀತ ಸಂಯೋಜಕರಾಗಿದ್ದರು ಮತ್ತು ಅವರ ಮಧುರ ಧ್ವನಿಗಾಗಿ "ನೈಟಿಂಗೇಲ್ ಆಫ್ ಇಂಡಿಯಾ" ಎಂದು ಜನಪ್ರಿಯರಾಗಿದ್ದರು. ಅವರ ಕೃತಿಯು ಭಕ್ತಿ ಮತ್ತು ಶಾಸ್ತ್ರೀಯ ಆಲ್ಬಮ್‌ಗಳನ್ನು ಒಳಗೊಂಡಿತ್ತು ಮತ್ತು ಇಂಗ್ಲಿಷ್, ರಷ್ಯನ್, ಡಚ್ ಮತ್ತು ಸ್ವಾಹಿಲಿ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 27,000 ಹಾಡುಗಳನ್ನು ಹಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News