PAK Cricketer Statement on Kohli: ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮುಂದಿನ ತಿಂಗಳು ಜೂನ್ 7 ರಿಂದ 11 ರವರೆಗೆ ನಡೆಯಲಿದೆ. ಲಂಡನ್‌ ನ ಓವಲ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಇದಕ್ಕಾಗಿ ಟೀಂ ಇಂಡಿಯಾದ ಹಲವು ಆಟಗಾರರು ಲಂಡನ್ ತಲುಪಿದ್ದು, ಇನ್ನು ಕೆಲ ಆಟಗಾರರು ತೆರಳಬೇಕಿದೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಕೊಹ್ಲಿ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: WTC Finalಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್ ಅಬ್ಬರ: ಆಸೀಸ್ ಪಡೆಗೆ ದುಃಸ್ವಪ್ನವಾಗುವುದು ಖಂಡಿತ!


ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ನ ಎರಡೂ ಇನ್ನಿಂಗ್ಸ್‌ ಗಳಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಟೆಸ್ಟ್ ನಾಯಕ ಸಯೀದ್ ಅನ್ವರ್ ನಂಬಿದ್ದಾರೆ. ಈ ದೊಡ್ಡ ಪಂದ್ಯದ ಎರಡೂ ಇನ್ನಿಂಗ್ಸ್‌ ಗಳಲ್ಲಿ ಅವರು ದಾಖಲಿಸುವ ಶತಕ ನೋಡಲು ಕಾತುರದಿಂದ ಕಾಯುತ್ತಿದ್ದೇನೆ” ಎಂದು ಅನ್ವರ್ ಟ್ವೀಟ್ ಮಾಡಿದ್ದಾರೆ.  


ಸದ್ಯ ವಿರಾಟ್ ಕೊಹ್ಲಿ ಅಪಾಯಕಾರಿ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ ತುಂಬಾ ಮಾರಕವಾಗಿ ಬ್ಯಾಟ್ ಮಾಡಿದ್ದರು. ಅವರು ಆಡಿದ 14 ಪಂದ್ಯಗಳಲ್ಲಿ, 639 ರನ್ ಗಳಿಸಿದ್ದಾರೆ. ಇದರಲ್ಲಿ 6 ಅರ್ಧ ಶತಕ ಮತ್ತು ಎರಡು ಶತಕಗಳು ಸೇರಿವೆ. ಕೊಹ್ಲಿ ಈ ಸೀಸನ್ ನಲ್ಲಿ 53.25 ಸರಾಸರಿಯಲ್ಲಿ ಮತ್ತು 139.82 ಸ್ಟ್ರೈಕ್ ರೇಟ್‌ ನಲ್ಲಿ ರನ್ ಗಳಿಸಿದರು. ಔಟಾಗದೆ 101 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪ್ಲೇ ಆಫ್‌ ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಸಿಕ್ಕಾಯ್ತು ಧೋನಿಯಂತಹ ‘ಸ್ಮಾರ್ಟ್ ಕ್ಯಾಪ್ಟನ್’: ಈ ಆಲ್ ರೌಂಡರ್ ಹೆಸರೇಳಿದ ಗವಾಸ್ಕರ್!


 ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಅಂಕಿಅಂಶಗಳು:


ಟೆಸ್ಟ್ ಕ್ರಿಕೆಟ್‌ ನಲ್ಲಿ ವಿರಾಟ್ ಕೊಹ್ಲಿ ಅವರ ಅಂಕಿಅಂಶಗಳ ಕುರಿತು ಮಾತನಾಡುವುದಾದರೆ, ಅವರು ಇದುವರೆಗೆ 108 ಟೆಸ್ಟ್ ಪಂದ್ಯಗಳ 183 ಇನ್ನಿಂಗ್ಸ್‌ ಗಳಲ್ಲಿ 48.93 ಸರಾಸರಿಯೊಂದಿಗೆ 8416 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್‌ ನಿಂದ 28 ಶತಕ, 7 ದ್ವಿಶತಕ ಮತ್ತು 28 ಅರ್ಧ ಶತಕಗಳು ಹೊರಹೊಮ್ಮಿವೆ. ಅವರ ಗರಿಷ್ಠ ಸ್ಕೋರ್ 254 ರನ್. WTC ಫೈನಲ್‌ ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಈ ಪಂದ್ಯದಲ್ಲಿ ಅವರ ಬ್ಯಾಟ್ ಕೆಲಸ ಮಾಡಿದರೆ, ಟೀಮ್ ಇಂಡಿಯಾ WTC ಫೈನಲ್ ಗೆಲ್ಲುವ ಅವಕಾಶವನ್ನು ಪಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.