WTC Finalಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್ ಅಬ್ಬರ: ಆಸೀಸ್ ಪಡೆಗೆ ದುಃಸ್ವಪ್ನವಾಗುವುದು ಖಂಡಿತ!

Shubman Gill Batting: ಐಪಿಎಲ್ 2023 ರ ಕ್ವಾಲಿಫೈಯರ್-2 ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೇ 26 ರಂದು ನಡೆಯಿತು. ಈ ಪಂದ್ಯದಲ್ಲಿ, ಗುಜರಾತ್ ಬ್ಯಾಟ್ಸ್‌ ಮನ್ ಶುಭ್ಮನ್ ಗಿಲ್ ಅವರು ಅತ್ಯಂತ ಅಪಾಯಕಾರಿ ಬ್ಯಾಟಿಂಗ್ ಮಾಡುತ್ತಾ ಸೀಸನ್ ನ ಮೂರನೇ ಶತಕ ಮತ್ತು ತಮ್ಮ ವೃತ್ತಿಜೀವನದ ಅತ್ಯುತ್ತಮ ಶತಕವನ್ನು ಬಾರಿಸಿದರು.

Written by - Bhavishya Shetty | Last Updated : May 27, 2023, 08:37 AM IST
    • ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ 2023 ರ ಫೈನಲ್ ಪಂದ್ಯ ಜೂನ್ 7 ರಿಂದ 11 ರವರೆಗೆ ನಡೆಯಲಿದೆ
    • ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಒಬ್ಬ ಬ್ಯಾಟ್ಸ್‌’ಮನ್ ತುಂಬಾ ಅಪಾಯಕಾರಿ ಫಾರ್ಮ್‌ ನಲ್ಲಿದ್ದಾರೆ
    • ಡಬ್ಲ್ಯುಟಿಸಿ ಫೈನಲ್‌ ನಲ್ಲಿಯೂ ಮುಂದುವರಿದರೆ, ಆಸ್ಟ್ರೇಲಿಯಾದ ಬೌಲರ್‌ ಗಳಿಗೆ ದುಃಸ್ವಪ್ನವಾಗುವುದು ಖಂಡಿತ
WTC Finalಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್ ಅಬ್ಬರ: ಆಸೀಸ್ ಪಡೆಗೆ ದುಃಸ್ವಪ್ನವಾಗುವುದು ಖಂಡಿತ!  title=
Shubman Gill

Team India-Shubman Gill Batting: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ 2023 ರ ಫೈನಲ್ ಪಂದ್ಯ ಜೂನ್ 7 ರಿಂದ 11 ರವರೆಗೆ ನಡೆಯಲಿದೆ. ಈ ಪಂದ್ಯ ಇಂಗ್ಲೆಂಡ್‌ ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಒಬ್ಬ ಬ್ಯಾಟ್ಸ್‌’ಮನ್ ತುಂಬಾ ಅಪಾಯಕಾರಿ ಫಾರ್ಮ್‌ ನಲ್ಲಿದ್ದಾರೆ. ಈ ಬ್ಯಾಟ್ಸ್‌ ಮನ್‌ ನ ಇದೇ ಫಾರ್ಮ್ ಡಬ್ಲ್ಯುಟಿಸಿ ಫೈನಲ್‌ ನಲ್ಲಿಯೂ ಮುಂದುವರಿದರೆ, ಆಸ್ಟ್ರೇಲಿಯಾದ ಬೌಲರ್‌ ಗಳಿಗೆ ದುಃಸ್ವಪ್ನವಾಗುವುದು ಖಂಡಿತ.

ಇದನ್ನೂ ಓದಿ: ಸರ್ಕಾರಿ ನೌಕರರ ಬಾಕಿ ಉಳಿದಿರುವ ತುಟ್ಟಿಭತ್ಯೆ ಮೂರು ಕಂತುಗಳಲ್ಲಿ ಬಿಡುಗಡೆ ! ಇಂದೇ ಖಾತೆಗೆ ಬಿತ್ತು ಮೊದಲ ಕಂತು !

ಐಪಿಎಲ್ 2023 ರ ಕ್ವಾಲಿಫೈಯರ್-2 ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೇ 26 ರಂದು ನಡೆಯಿತು. ಈ ಪಂದ್ಯದಲ್ಲಿ, ಗುಜರಾತ್ ಬ್ಯಾಟ್ಸ್‌ ಮನ್ ಶುಭ್ಮನ್ ಗಿಲ್ ಅವರು ಅತ್ಯಂತ ಅಪಾಯಕಾರಿ ಬ್ಯಾಟಿಂಗ್ ಮಾಡುತ್ತಾ ಸೀಸನ್ ನ ಮೂರನೇ ಶತಕ ಮತ್ತು ತಮ್ಮ ವೃತ್ತಿಜೀವನದ ಅತ್ಯುತ್ತಮ ಶತಕವನ್ನು ಬಾರಿಸಿದರು. ಕೇವಲ 60 ಎಸೆತಗಳಲ್ಲಿ 129 ರನ್‌ ಗಳ ಅಬ್ಬರದ ಇನ್ನಿಂಗ್ಸ್‌ ಆಡಿದರು. ಈ ವೇಳೆ ಅವರ ಬ್ಯಾಟ್‌ ನಿಂದ 7 ಬೌಂಡರಿ ಹಾಗೂ 10 ದೊಡ್ಡ ಸಿಕ್ಸರ್‌ ಗಳು ಹೊರ ಬಂದವು. ಈ ಅತ್ಯುತ್ತಮ ಇನ್ನಿಂಗ್ಸ್‌ನ ಆಧಾರದ ಮೇಲೆ ಗುಜರಾತ್ ಮುಂಬೈ ತಂಡವನ್ನು ಸೋಲಿಸಿ ಫೈನಲ್‌ ಗೆ ಲಗ್ಗೆ ಇಟ್ಟಿತು.

ಐಪಿಎಲ್ 2023ರ ಆರಂಭದಿಂದಲೂ, ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಅದ್ಭುತವಾಗಿದೆ. ಅದರಲ್ಲೂ ಅವರ ಕೊನೆಯ ಮೂರು ಪಂದ್ಯಗಳನ್ನು ನೋಡಿದರೆ ಒಂದರ ನಂತರ ಒಂದರಂತೆ ಸತತ ಮೂರು ಶತಕಗಳನ್ನು ಗಳಿಸಿದ್ದಾರೆ. ಮೂರನೇ ಶತಕದೊಂದಿಗೆ ಅವರು ಐಪಿಎಲ್ 2023 ರಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಆಡಿದ 16 ಪಂದ್ಯಗಳಲ್ಲಿ 60.79 ರ ಅತ್ಯಂತ ಅಪಾಯಕಾರಿ ಸರಾಸರಿ ಮತ್ತು 156.43 ರ ಸ್ಟ್ರೈಕ್ ರೇಟ್‌ ನಲ್ಲಿ 851 ರನ್ ಗಳಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅವರ ಬ್ಯಾಟ್‌ ನಿಂದ 3 ಶತಕ ಮತ್ತು 4 ಅರ್ಧ ಶತಕ ಕೂಡ ಹೊರಹೊಮ್ಮಿದೆ.

ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ ಬಗ್ಗೆ ಮಾತನಾಡುವುದಾದರೆ, ಗಿಲ್ ಸದ್ಯ ಮಾರಕ ಫಾರ್ಮ್ ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ WTC ಫೈನಲ್ ಪಂದ್ಯದಲ್ಲಿ ಅವರು ದೊಡ್ಡ ಇನ್ನಿಂಗ್ಸ್ ಆಡಬಹುದು ಎಂಬ ನಿರೀಕ್ಷೆಯಿದೆ. ಗಿಲ್ ತನ್ನ ಚೊಚ್ಚಲ ಪಂದ್ಯದಿಂದಲೂ ಎಲ್ಲಾ ಮೂರು ಸ್ವರೂಪಗಳಲ್ಲಿ ತನ್ನ ಅದ್ಭುತ ಬ್ಯಾಟಿಂಗ್‌ ನಿಂದ ಎಲ್ಲರನ್ನೂ ಮೆಚ್ಚಿಸಿದ್ದಾರೆ.

ಇದನ್ನೂ ಓದಿ: ತುಳಸಿ ಜೊತೆ ಈ ಒಂದು ವಸ್ತು ಸೇರಿಸಿ ಬಳಸಿ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತವೆ!

ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇಲ್ಲಿಯವರೆಗೆ ಭಾರತದ ಪರ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರ 28 ಇನ್ನಿಂಗ್ಸ್‌ ಗಳಲ್ಲಿ ಗಿಲ್ ಅವರ ಬ್ಯಾಟ್‌ನಿಂದ 890 ರನ್‌ ಗಳು ಹೊರಬಂದಿವೆ. ಈ ಅವಧಿಯಲ್ಲಿ 2 ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 128 ರನ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News