Pro Kabaddi 2022 : ಕ್ರಿಕೆಟ್ ನಲ್ಲಿ ಆರ್ ಸಿಬಿ ಕಬ್ಬಡಿಯಲ್ಲಿ ಬೆಂಗಳೂರು ಬುಲ್ಸ್ ಎನ್ನುವಂತಿತ್ತು ಇಂದಿನ ಪಂದ್ಯ. ಅಂತೂ ಜೀವ ಬಾಯಿಗೆ ಬರುವಂತೆ ಮಾಡಿ ಪಂದ್ಯ ಸಮಬಲ ಸಾಧಿಸಿತು ಬೆಂಗಳೂರು ಬುಲ್ಸ್. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ತಂಡಗಳು 31-31  ಅಂತರದಲ್ಲಿ ಸಮಬಲ ಸಾಧಿಸಿವೆ.


COMMERCIAL BREAK
SCROLL TO CONTINUE READING

ಪಾಟ್ನಾ ಪೈರೇಟ್ಸ್‌ ತಂಡ ಕೊನೆಯವರೆಗೂ ಗೆಲ್ಲುವ ಅವಕಾಶ ಹೊಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮಾಡಿದ ಪ್ರಮಾದದ ಫಲವಾಗಿ ಗೆಲ್ಲುವ ಪಂದ್ಯದಲ್ಲಿ ಅಂಕ ಹಂಚಿಕೊಳ್ಳಬೇಕಾಯಿತು. ಬೆಂಗಳೂರು ಬುಲ್ಸ್‌ ಯು ಮುಂಬಾ ವಿರುದ್ಧದ ಪಂದ್ಯದಂತೆಯೇ ದ್ವಿತಿಯಾರ್ಧದಲ್ಲಿ ಪುಟಿದೆದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಭರತ್‌ 11 ಅಂಕಗಳನ್ನು ಗಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಇತ್ತಂಡಗಳಿಗೂ ಕಂಠೀರವ ಕ್ರೀಡಾಂಗಣದಲ್ಲಿ ಇದು ಕೊನೆಯ ಪಂದ್ಯವಾಗಿತ್ತು. 


ಇದನ್ನೂ ಓದಿ: Arshdeep Singh: ಏಷ್ಯಾಕಪ್ ನಲ್ಲಿ ಟ್ರೋಲ್…ವಿಶ್ವಕಪ್ ನಲ್ಲಿ ಗೋಲ್ಡ್: ಅರ್ಷದೀಪ್ ಆಟಕ್ಕೆ ‘ಹರ್ಷ’ವಾದ ಟೀಂ ಇಂಡಿಯಾ


ಹಿಂದಿನ ಪಂದ್ಯದಲ್ಲಿ ಜಯದ ಖಾತೆ ತೆರೆದು ಆತ್ಮವಿಶ್ವಾಸವನ್ನು ಇಮ್ಮಡಿ ಮಾಡಿಕೊಂಡಿದ್ದ ಪಾಟ್ನಾ ಪೈರೇಟ್ಸ್‌ ತಂಡ ಬೆಂಗಳೂರು ಬುಲ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 19-10 ಅಂಕಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಉತ್ತಮ ರೈಡಿಂಗ್‌ ಮತ್ತು ಟ್ಯಾಕಲ್‌ ಪ್ರದರ್ಶನ ನೀಡಿದ ಪಾಟ್ನಾ ತಂಡ ಪಂದ್ಯ ಆರಂಭಗೊಂಡ 9 ನಿಮಿಷದಲ್ಲಿಯೇ ಬೆಂಗಳೂರು ತಂಡವನ್ನು ಆಲೌಟ್‌ ಮಾಡಿ ಪ್ರಭುತ್ವ ಸಾಧಿಸಿತ್ತು. ರೈಡಿಂಗ್‌ನಲ್ಲಿ ರೋಹಿತ್‌ ಗುಲಿಯಾ (4) ಮತ್ತು ಸಚಿನ್‌ (6) ಉತ್ತಮ ಪ್ರದರ್ಶನ ತೋರಿ ಪ್ರತಿಯೊಂದು ಹಂತದಲ್ಲೂ ತಂಡದ ಮುನ್ನಡೆಗೆ ನೆರವಾದರು. 


ನಾಯಕ ಮಹೇಂದರ್‌ ಸಿಂಗ್‌ ಟ್ಯಾಕಲ್‌ನಲ್ಲಿ ಹಾಗೂ ಭರತ್‌ ರೈಡಿಂಗ್‌ನಲ್ಲಿ ತಲಾ 3 ಅಂಕ ಗಳಿಸುವ ಮೂಲಕ ಬೆಂಗಳೂರು ಬುಲ್ಸ್‌ ಸಮರ್ಥ ಹೋರಾಟ ನೀಡಿತು. ಹಿಂದಿನ ಪಂದ್ಯದಲ್ಲಿ ಇದೇ ರೀತಿ ಹಿನ್ನಡೆ ಕಂಡಿದ್ದ ಬೆಂಗಳೂರು ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿ ಪಂದ್ಯ ಗೆದ್ದುಕೊಂಡಿತ್ತು. ಪಾಟ್ನಾ ಪೈರೇಟ್ಸ್‌ ಪರ ನೀರಜ್‌ ಕುಮಾರ್‌ ಹಾಗೂ ಮನೀಶ್‌ ಟ್ಯಾಕಲ್‌ನಲ್ಲಿ ತಲಾ 2 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ