Arshdeep Singh: ಏಷ್ಯಾಕಪ್ ನಲ್ಲಿ ಟ್ರೋಲ್…ವಿಶ್ವಕಪ್ ನಲ್ಲಿ ಗೋಲ್ಡ್: ಅರ್ಷದೀಪ್ ಆಟಕ್ಕೆ ‘ಹರ್ಷ’ವಾದ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದರು. ಇನ್ನು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದಾರೆ. ಆದರೆ ಅರ್ಷದೀಪ್ ಸಿಂಗ್ ಅವರ ಆಟ ಈ ಪಂದ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.

Written by - Bhavishya Shetty | Last Updated : Oct 23, 2022, 07:52 PM IST
    • ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ
    • ಅರ್ಷದೀಪ್ ಸಿಂಗ್ ಅವರ ಆಟ ಈ ಪಂದ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ
    • ಪಾಕಿಸ್ತಾನ ಮೂರು ವಿಕೆಟ್ ಗಳನ್ನು ಕಬಳಿಸಿರುವ ಅರ್ಷದೀಪ್ ಮೋಡಿ ಮಾಡಿದ್ದರು
Arshdeep Singh: ಏಷ್ಯಾಕಪ್ ನಲ್ಲಿ ಟ್ರೋಲ್…ವಿಶ್ವಕಪ್ ನಲ್ಲಿ ಗೋಲ್ಡ್: ಅರ್ಷದೀಪ್ ಆಟಕ್ಕೆ ‘ಹರ್ಷ’ವಾದ ಟೀಂ ಇಂಡಿಯಾ title=
Arshadeep Singh

ಇಂದು ಮೆಲ್ಬರ್ನ್ ನ ಕ್ರಿಕೆಟ್ ಸ್ಟೇಡಿಯಂ ಅತ್ಯದ್ಭುತ ಪಂದ್ಯಕ್ಕೆ ಸಾಕ್ಷಿಯಾಗಿದ್ದು, ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೂವರು ಆಟಗಾರರು ಆಟಿದ ರೀತಿ ಇಡೀ ತಂಡದ ಗತಿಯನ್ನೇ ಬದಲಾಯಿಸಿದೆ.

ಇದನ್ನೂ ಓದಿ: IND vs PAK: ಇಂಡೋ-ಪಾಕ್ ರಣರೋಚಕ ಪಂದ್ಯ ವೀಕ್ಷಣೆಗೆ ಸ್ಟೇಡಿಯಂ ಫುಲ್: ಎಷ್ಟು ಜನ ಸೇರಿದ್ದರು ಗೊತ್ತೇ!

ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದರು. ಇನ್ನು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದಾರೆ. ಆದರೆ ಅರ್ಷದೀಪ್ ಸಿಂಗ್ ಅವರ ಆಟ ಈ ಪಂದ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.

 

 

ಏಷ್ಯಾಕಪ್ ನಲ್ಲಿ ಪಾಕಿಸ್ತಾನ ವಿರುದ್ಧದ ಆಟದಲ್ಲಿ ಕ್ಯಾಚ್ ಬಿಟ್ಟಿದ್ದರು ಎಂಬ ಕಾರಣಕ್ಕೆ ಅರ್ಷದೀಪ್ ಅವರನ್ನು ಟ್ರೋಲ್ ಮಾಡಲಾಗುತ್ತು, ವರದಿಗಳ ಪ್ರಕಾರ ಇದರಿಂದ ಭಾರೀ ಕುಗ್ಗಿದ್ದರು ಎನ್ನಲಾಗಿದೆ. ಆದರೆ ಇದೀಗ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಗೆಲ್ಲಬೇಕಾದರೆ ಅರ್ಷದೀಪ್ ಅವರ ಕೊಡುಗೆ ಮಹತ್ತರವಾಗಿತ್ತು ಎನ್ನಬಹುದು. ಪಾಕಿಸ್ತಾನ ಮೂರು ವಿಕೆಟ್ ಗಳನ್ನು ಕಬಳಿಸಿರುವ ಅರ್ಷದೀಪ್ ಮೋಡಿ ಮಾಡಿದ್ದರು.

ಇದನ್ನೂ ಓದಿ: Virat Kohli-Rohit Sharma: ಕಣ್ಣೀರಿಡುತ್ತಾ ಮೈದಾನದಲ್ಲಿ ಗೆಲುವು ಸಂಭ್ರಮಿಸಿದ ಕೊಹ್ಲಿ: ಎತ್ತಿ ಮುದ್ದಾಡಿದ ರೋಹಿತ್ ಶರ್ಮಾ

ಅಂದು ಟ್ರೋಲ್ ಗೆ ಗುರಿಯಾಗಿದ್ದ ಅರ್ಷದೀಪ್ ಬೆಂಬಲಕ್ಕೆ ಟೀಂ ಇಂಡಿಯಾದ ದಿಗ್ಗಜ ಆಟಗಾರ ಹರ್ಭಜನ್ ಸಿಂಗ್ ಕೂಡ ನಿಂತಿದ್ದರು. ಇದೀಗ ಮೊದಲ ಬಾಲ್ ಗೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ವಿಕೆಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಗೆಲುವು ಭಾರತಕ್ಕೆ ಹೆಮ್ಮೆಯ ಸಂಗತಿ ಎಂದರೆ ತಪ್ಪಾಗಲಾರದು.

 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News