Pro Kabaddi League ಪ್ರಾರಂಭಕ್ಕೆ ಡೇಟ್ ಫಿಕ್ಸ್: ಈ ನಗರಗಳಲ್ಲಿ ನಡೆಯಲಿದೆ ಸೀಸನ್-9 ಪಂದ್ಯಗಳು
ಈ ಬಾರಿ ಮೂರು ಪ್ರಮುಖ ನಗರಗಳ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಅಲ್ಲಿನ ಕ್ರೀಡಾಂಗಣಗಳಿಗೆ ಪ್ರತಿಯೊಬ್ಬ ವೀಕ್ಷಕನಿಗೂ ಪ್ರವೇಶಿಸಲು ಅನುವು ಮಾಡಿಕೊಡಲಾಗುತ್ತದೆ ಎಂದು ಗೋಸ್ವಾಮಿ ಹೇಳಿದರು.
ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ ಸೀಸನ್ ಒಂಬತ್ತು ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿದೆ ಮತ್ತು ಡಿಸೆಂಬರ್ ಮಧ್ಯದವರೆಗೆ ನಡೆಯಲಿದೆ ಎಂದು ಲೀಗ್‌ನ ಸಂಘಟಕ ಮಶಾಲ್ ಸ್ಪೋರ್ಟ್ಸ್ ಶುಕ್ರವಾರ ತಿಳಿಸಿದ್ದಾರೆ. ಸ್ಪರ್ಧೆಯ ಲೀಗ್ ಹಂತವು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ದಬಾಂಗ್ ಡೆಲ್ಲಿ ಹಾಲಿ ಚಾಂಪಿಯನ್ ಆಗಿ ಸ್ಪರ್ಧೆಯನ್ನು ಪ್ರವೇಶಿಸಲಿದೆ. ಲೀಗ್ ನ ಎಂಟನೇ ಸೀಸನ್ ಡೆಲ್ಲಿ ತಂಡ ಗೆದ್ದುಕೊಂಡಿದೆ, ಪಾಟ್ನಾ ಪೈರೇಟ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು
ಇದನ್ನೂ ಓದಿ: Team India: ‘ನನಗೆ 35 ವರ್ಷ, 75 ಅಲ್ಲ…’ ಟೀ ಇಂಡಿಯಾದಲ್ಲಿ ಸಿಗದ ಅವಕಾಶಕ್ಕೆ ಆಕ್ರೋಶ..!
"ದೇಶೀಯ ಕ್ರೀಡೆಯಾದ ಕಬಡ್ಡಿಯನ್ನು ಸಮಕಾಲೀನ ಮತ್ತು ಮುಂಬರುವ ಪೀಳಿಗೆಯ ಕ್ರೀಡಾಭಿಮಾನಿಗಳ ಜಗತ್ತಿಗೆ ಕೊಂಡೊಯ್ಯುವ ದೃಷ್ಟಿಯೊಂದಿಗೆ ಮಶಾಲ್ ಸ್ಪೋರ್ಟ್ಸ್ ಪ್ರೊ ಕಬಡ್ಡಿ ಲೀಗ್‌ನ ಪ್ರಯಾಣವನ್ನು ಪ್ರಾರಂಭಿಸಿದೆ. ಈ ಗುರಿಯಲ್ಲಿ ನಾವು ಪ್ರಭಾವಶಾಲಿ ಯಶಸ್ಸನ್ನು ಸಾಧಿಸುತ್ತಲೇ ಇದ್ದೇವೆ ಎಂದು PKL ಈ ವರ್ಷದ ಆರಂಭದಲ್ಲಿ ಸಾಬೀತುಪಡಿಸಿದೆ. ಸೀಸನ್ 8 ಅನ್ನು ಸಮಗ್ರ ಬಯೋ ಬಬಲ್‌ನಲ್ಲಿ ನಡೆಸಲಾಯಿತು" ಎಂದು ಪ್ರೊ ಕಬಡ್ಡಿ ಲೀಗ್‌ನ ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ಹೇಳಿದರು.
ಈ ಬಾರಿ ಮೂರು ಪ್ರಮುಖ ನಗರಗಳ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಅಲ್ಲಿನ ಕ್ರೀಡಾಂಗಣಗಳಿಗೆ ಪ್ರತಿಯೊಬ್ಬ ವೀಕ್ಷಕನಿಗೂ ಪ್ರವೇಶಿಸಲು ಅನುವು ಮಾಡಿಕೊಡಲಾಗುತ್ತದೆ ಎಂದು ಗೋಸ್ವಾಮಿ ಹೇಳಿದರು. ಪಿಕೆಎಲ್‌ನ ಎಂಟನೇ ಸೀಸನ್ ಸಂಪೂರ್ಣವಾಗಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.
"ಈಗ, ಮುಂಬರುವ ಪಿಕೆಎಲ್ ಸೀಸನ್ 9 ರ ಬಗ್ಗೆ ನಾವು ಇನ್ನಷ್ಟು ಉತ್ಸುಕರಾಗಿದ್ದೇವೆ ಏಕೆಂದರೆ ನಮ್ಮ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳು ಮತ್ತು ತಾರೆಯರ ಆಟವನ್ನು ನೋಡಲು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಾದ್ಯಂತ ಕ್ರೀಡಾಂಗಣಗಳಿಗೆ ಹಿಂತಿರುಗಲಿದ್ದಾರೆ" ಎಂದು ಲೀಗ್ ಹೇಳಿಕೊಂಡಿದೆ.
ಇದನ್ನೂ ಓದಿ: ರೋಹಿತ್ ಜೊತೆ ಓಪನರ್ ಆಗಿ ರಾಹುಲ್ ಅಲ್ಲ ಈ ಆಟಗಾರನಿಗೆ ಚಾನ್ಸ್!
ಲೀಗ್‌ನ ಸಂಘಟಕರು ಮುಂದಿನ ವಾರಗಳಲ್ಲಿ ಸೀಸನ್ ಒಂಬತ್ತರ ಹೆಚ್ಚಿನ ವಿವರಗಳು ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.