ಗ್ಲ್ಯಾಸ್ಗೋ : ಭಾರತದ ಮೊದಲ ವಿಶ್ವ ಚಾಂಪಿಯನ್ ಆಗಲು ಪಿ.ವಿ.ಸಿಂಧು ಅದ್ಭುತ ಪ್ರಯತ್ನ ಮಾಡಿದರಾದರೂ ಜಪಾನ್ನ ನೊಜೊಮಿ ಒಕುಹಾರ ವಿರುದ್ಧ ಭಾನುವಾರ ನಡೆದ ಒಂದು ಮಹಾ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.  


COMMERCIAL BREAK
SCROLL TO CONTINUE READING

ಒಂದು ಗಂಟೆ 49 ನಿಮಿಷಗಳ ಕಾಲ ಕಠಿಣ ಹೋರಾಟ ಸುದೀರ್ಘ ಪಂದ್ಯದಲ್ಲಿ ಇಬ್ಬರೂ ಆಟಗಾರರು ದೈಹಿಕ ಮತ್ತು ಮಾನಸಿಕವಾಗಿ ಉತ್ತಮ ಪ್ರದರ್ಶನ ನೀಡಿದರು. ಸಿಂಧು ಅವರು 19-21, 22-20, 20-22 ಸೆಟ್‌ಗಳಿಂದ ವಿರೋಚಿತ ಸೋಲುಕಂಡರು. ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿ, 2ನೇ ಸೆಟ್ ನಲ್ಲಿ ತಿರುಗೇಟು ನೀಡಿದ್ದ ಸಿಂಧೂ ಅಂತಿಮ ಹಾಗೂ ನಿರ್ಣಾಯಕ ಘಟ್ಟದಲ್ಲಿ 20-22 ಸೆಟ್ ಗಳಿಂದ ಸೋಲನ್ನು ಅನುಭವಿಸಿದರು.  


2013 ಮತ್ತು 2014 ರ ಆವೃತ್ತಿಯಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದ ಸಿಂಧು, 2015 ರಲ್ಲಿ ಜಕಾರ್ತಾದಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಸೈನಾ ನೆಹ್ವಾಲ್ ಸಾಧನೆ ಮಾಡಿದ ನಂತರ ಬೆಳ್ಳಿ ಪದಕ ಗೆದ್ದ ಎರಡನೇ ಭಾರತೀಯನೆನಿಸಿಕೊಂಡರು. ಈ ಆವೃತ್ತಿಯ ಮೊದಲು ವಿಶ್ವ ಚ್ಯಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಒಂದು ಬೆಳ್ಳಿ ಮತ್ತು ನಾಲ್ಕು ಕಂಚುಗಳು ಇದ್ದವು.


ಮಹಿಳಾ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಅವರು 2011 ರಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದುಕೊಂಡರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ 1983 ರಲ್ಲಿ ಕಂಚಿನ ಪದಕ ಪಡೆದ ಪ್ರಕಾಶ್ ಪಡುಕೋಣೆ ಅವರು ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ.