India vs Zimbabwe Odi Series : ಭಾರತ ತಂಡವು ಆಗಸ್ಟ್ 18 ರಿಂದ ಜಿಂಬಾಬ್ವೆ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಜಿಂಬಾಬ್ವೆಗೆ ತೆರಳಿದ್ದು, ಬಿಸಿಸಿಐ ಆಟಗಾರರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಭಾರಿ ತಂಡದ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಆಯ್ಕೆದಾರರು 31 ವರ್ಷದ ಬ್ಯಾಟ್ಸ್‌ಮನ್‌ನೊಬ್ಬ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಆಟಗಾರ ಜಿಂಬಾಬ್ವೆ ಪ್ರವಾಸದಲ್ಲಿ ತನ್ನ ಚೊಚ್ಚಲ ಪಂದ್ಯವನ್ನು ಆಡುವುದನ್ನ ನೋಡಬಹುದು.


COMMERCIAL BREAK
SCROLL TO CONTINUE READING

31 ವರ್ಷದ ಆಟಗಾರ ಚೊಚ್ಚಲ ಪಂದ್ಯಕ್ಕೆ ಎಂಟ್ರಿ 


ಜಿಂಬಾಬ್ವೆ ಪ್ರವಾಸಕ್ಕಾಗಿ ಹಲವು ಯುವ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ, ಆದರೆ 31 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ ಪದಾರ್ಪಣೆ ಮಾಡಿದ್ದಾರೆ. ರಾಹುಲ್ ತ್ರಿಪಾಠಿ ಮತ್ತೊಮ್ಮೆ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಟೀಂ ಇಂಡಿಯಾದಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಇನ್ನೂ ಸಿಕ್ಕಿರಲಿಲ್ಲ ಜಿಂಬಾಬ್ವೆ ಪ್ರವಾಸದಲ್ಲಿ ಮೂಲಕ ಟೀಮ್ ಇಂಡಿಯಾಗೆ ಮತ್ತೆ ಎಂಟ್ರಿ ನೀಡಿದ್ದಾರೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಅವರು ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.


ಇದನ್ನೂ ಓದಿ : Women IPL : ಕ್ರಿಕೆಟ್ ಫ್ಯಾನ್ಸ್ ಗೆ ಸಿಹಿ ಸುದ್ದಿ : ಮುಂದಿನ ವರ್ಷ ಇದೇ ತಿಂಗಳಿನಲ್ಲಿ ಮಹಿಳಾ IPL ಆರಂಭ!


ಇಂಗ್ಲೆಂಡ್-ಐರ್ಲೆಂಡ್ ಪ್ರವಾಸದಿಂದ ದೂರ ಉಳಿದಿದ್ದ ತ್ರಿಪಾಠಿ


ರಾಹುಲ್ ತ್ರಿಪಾಠಿ ಈ ಹಿಂದೆ ಹಲವು ಬಾರಿ ಟೀಂ ಇಂಡಿಯಾ ತಂಡದಲ್ಲಿ ಆಡಿದ್ದರು, ಆದರೆ ಪ್ಲೇಯಿಂಗ್ 11ರೊಳಗೆ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಟೀಂ ಇಂಡಿಯಾ ಇತ್ತೀಚೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ಎರಡೂ ಪ್ರವಾಸಗಳಲ್ಲಿ ರಾಹುಲ್ ತ್ರಿಪಾಠಿ ಟೀಂ ಇಂಡಿಯಾದ ತಂಡದ ಭಾಗವಾಗಿದ್ದರು, ಆದರೆ ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಅವರು ಐರ್ಲೆಂಡ್ ವಿರುದ್ಧದ 2 ಟಿ20 ಪಂದ್ಯಗಳಿಗೆ ತಂಡದಲ್ಲಿ ಚಾನ್ಸ್ ಪಡೆದಿದ್ದರು ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಕೇವಲ 1 ಟಿ20 ಪಂದ್ಯದಲ್ಲಿ ಅವಕಾಶ ಪಡೆದಿದ್ದರು.


ಐಪಿಎಲ್ 2022 ರಲ್ಲಿ ಯಶಸ್ವಿಯಾಗಿದ್ದ ರಾಹುಲ್ ತ್ರಿಪಾಠಿ


ರಾಹುಲ್ ತ್ರಿಪಾಠಿ ಐಪಿಎಲ್‌ನಲ್ಲಿ ಆರಂಭಿಕರಾಗಿ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಐಪಿಎಲ್ 2022 ರಲ್ಲಿ ರಾಹುಲ್ ತ್ರಿಪಾಠಿ ಬಹಳ ಯಶಸ್ವಿಯಾಗಿದ್ದರು. ಈ ಸೀಸನ್ ನಲ್ಲಿ ಅವರು 14 ಪಂದ್ಯಗಳಲ್ಲಿ 414 ರನ್ ಗಳಿಸಿದ್ದಾರೆ. ಈ ಶ್ರೇಷ್ಠ ಪ್ರದರ್ಶನದಿಂದಾಗಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗುತ್ತಿದೆ. ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು 76 ಪಂದ್ಯಗಳನ್ನು ಆಡಿರುವ ಅವರು ಈ ಪಂದ್ಯಗಳಲ್ಲಿ 1798 ರನ್ ಗಳಿಸಿದ್ದಾರೆ. ಜಿಂಬಾಬ್ವೆ ಪ್ರವಾಸವು ರಾಹುಲ್ ತ್ರಿಪಾಠಿ ಅವರ ವೃತ್ತಿಜೀವನಕ್ಕೆ ಬಹಳ ಮಹತ್ವದ್ದಾಗಿದೆ.


ಇದನ್ನೂ ಓದಿ : Team India : ಏಷ್ಯಾಕಪ್‌, ಟಿ20 ವಿಶ್ವಕಪ್‌ನಿಂದಲೂ ಬುಮ್ರಾ ಔಟ್ : ಯಾರ್ಕರ್ ಕಿಂಗ್ ಗೆ ಅವಕಾಶ!


ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ


ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹಾರ್.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.