Team India : ಏಷ್ಯಾಕಪ್‌, ಟಿ20 ವಿಶ್ವಕಪ್‌ನಿಂದಲೂ ಬುಮ್ರಾ ಔಟ್ : ಯಾರ್ಕರ್ ಕಿಂಗ್ ಗೆ ಅವಕಾಶ!

ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬುಮ್ರಾ ಕೊರತೆಯನ್ನು ಅನುಭವಿಸಲು ಬಿಡುವುದಿಲ್ಲ. ಈ ಆಟಗಾರರು ತಮ್ಮ ಕಿಲ್ಲರ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಹಾಗಿದ್ರೆ, ಈ ಆಟಗಾರ ಯಾರು? ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Aug 13, 2022, 12:50 PM IST
  • ಈ ಮಾರಣಾಂತಿಕ ಬೌಲರ್ ಟೀಂಗೆ ಎಂಟ್ರಿ
  • ಪಂದ್ಯಗಳನ್ನು ಗೆಲ್ಲುವಲ್ಲಿ ಯಾವುದು ಅನುಮಾನವಿಲ್ಲ
  • ಟೀಂ ಇಂಡಿಯಾ ಹಲವು ಪಂದ್ಯಗಳನ್ನು ಗೆದ್ದಿದೆ
Team India : ಏಷ್ಯಾಕಪ್‌, ಟಿ20 ವಿಶ್ವಕಪ್‌ನಿಂದಲೂ ಬುಮ್ರಾ ಔಟ್ : ಯಾರ್ಕರ್ ಕಿಂಗ್ ಗೆ ಅವಕಾಶ! title=

Jasprit Bumrah : ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಗಾಯದ ಕಾರಣ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ. ಈಗ ಅವರು ಟಿ 20 ವಿಶ್ವಕಪ್‌ನಿಂದಲೂ ಹೊರಗುಳಿಯುತ್ತಾರೆ ಎಂಬ ಊಹಾಪೋಹಗಳಿವೆ, ಆದರೆ ಏಷ್ಯಾ ಕಪ್‌ಗಾಗಿ, ಭಾರತ ತಂಡವು ಬುಮ್ರಾ ಹೊರಗುಳಿದರೆ ಬೌಲರ್ ಗಳ ಕೊರತೆ ಉಂಟಾಗುವುದಿಲ್ಲ. ಏಕೆಂದರೆ, ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬುಮ್ರಾ ಕೊರತೆಯನ್ನು ಅನುಭವಿಸಲು ಬಿಡುವುದಿಲ್ಲ. ಈ ಆಟಗಾರರು ತಮ್ಮ ಕಿಲ್ಲರ್ ಬೌಲಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಹಾಗಿದ್ರೆ, ಈ ಆಟಗಾರ ಯಾರು? ಇಲ್ಲಿದೆ ನೋಡಿ..

ಈ ಮಾರಣಾಂತಿಕ ಬೌಲರ್ ಟೀಂಗೆ ಎಂಟ್ರಿ

ಭುವನೇಶ್ವರ್ ಕುಮಾರ್ ಅವರು ಏಷ್ಯಾಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ ಅತ್ಯುತ್ತಮ ಫಾರ್ಮ್‌ನಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಭುವನೇಶ್ವರ್ ಬೌಲಿಂಗ್‌ನಲ್ಲಿ ಸುದೀರ್ಘ ಅನುಭವವನ್ನು ಹೊಂದಿದ್ದಾರೆ, ಇದು ಟೀಂ ಇಂಡಿಯಾಕ್ಕೆ ಉಪಯುಕ್ತವಾಗಿದೆ. ಭುವನೇಶ್ವರ್ ಕುಮಾರ್ ಬೌಲಿಂಗ್ ಕಿಲ್ಲರ್‌ಗೆ ಹೆಸರುವಾಸಿ. ಭುವನೇಶ್ವರ್ ತನ್ನ ಲಯದಲ್ಲಿದ್ದಾಗ, ಅವರು ಯಾವುದೇ ಬ್ಯಾಟ್ಸಮನ್ ಇವರ ಬೌಲಿಂಗ್ ಗೆ ವಿಕೆಟ್ ಬೀಳುವುದು ಪಕ್ಕ ಹೀಗಾಗಿ ಏಷ್ಯಾಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದು ತುಂಬಾ ಒಳ್ಳೆಯದುದಾಗಿದೆ.

ಇದನ್ನೂ ಓದಿ : Team India : ರೋಹಿತ್ ಶರ್ಮಾ ನಂತರ ಈ ಆಟಗಾರನೆ ಟೀಂ ಇಂಡಿಯಾ ಕಾಯಂ ಕ್ಯಾಪ್ಟನ್!

ಪಂದ್ಯಗಳನ್ನು ಗೆಲ್ಲುವಲ್ಲಿ ಯಾವುದು ಅನುಮಾನವಿಲ್ಲ

ಭುವನೇಶ್ವರ್ ಕುಮಾರ್ ಇನ್ನಿಂಗ್ಸ್‌ನ ಆರಂಭದಲ್ಲಿ ಮತ್ತು ಡೆತ್ ಓವರ್‌ಗಳಲ್ಲಿ ಅತ್ಯಂತ ಯಾರ್ಕ್ ಎಸೆಯುತ್ತಾರೆ ಮತ್ತು ಎಕಾನಮಿಯನ್ನು ಉಳಿಸಿಕೊಳ್ಳುತ್ತಾರೆ. ನಾಯಕನಿಗೆ ವಿಕೆಟ್ ಬೇಕಾದಾಗಲೆಲ್ಲ. ಅವರು ಭುವನೇಶ್ವರ್ ಕುಮಾರ್ ಗೆ ಬೌಲಿಂಗ್ ನೀಡುತ್ತಾರೆ. ಭುವನೇಶ್ವರ್ ವಿಕೆಟ್‌ನ ಎರಡೂ ಬದಿಗಳನ್ನು ಸ್ವಿಂಗ್ ಮಾಡುವಲ್ಲಿ ಅದ್ಭುತ ಬೌಲರ್. ಟಿ20 ಕ್ರಿಕೆಟ್‌ನಲ್ಲಿ, ಅವರ ನಾಲ್ಕು ಓವರ್‌ಗಳು ಸೋಲು ಮತ್ತು ಗೆಲುವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತವೆ.

ಟೀಂ ಇಂಡಿಯಾ ಹಲವು ಪಂದ್ಯಗಳನ್ನು ಗೆದ್ದಿದೆ

ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದುಕೊಟ್ಟಿದ್ದಾರೆ. ಅವರು ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಭುವನೇಶ್ವರ್ ಕುಮಾರ್ ಭಾರತದ ಪರ 21 ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್, 121 ODIಗಳಲ್ಲಿ 141 ಮತ್ತು 72 T20 ಪಂದ್ಯಗಳಲ್ಲಿ 73 ವಿಕೆಟ್ ಪಡೆದಿದ್ದಾರೆ. ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿ ಫೇಮಸ್ ಆಗಿದ್ದಾರೆ.

ಏಷ್ಯಾಕಪ್‌ಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್ ಮತ್ತು ಅವೇಶ್ ಖಾನ್.

ಇದನ್ನೂ ಓದಿ : Sanjay Manjrekar : ರವೀಂದ್ರ ಜಡೇಜಾ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ ಮಂಜ್ರೇಕರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News