Ind Vs NZ Squad: ಭಾರತ-ನ್ಯೂಜಿಲೆಂಡ್ ತಂಡಗಳು ಅಂತಿಮ T20 ಪಂದ್ಯವನ್ನಾಡುತ್ತಿದ್ದು, ಈಗಾಗಲೇ ನ್ಯೂಜಿಲ್ಯಾಂಡ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಂಡಿದೆ. ಇನ್ನೊಂದೆಡೆ ಟೀಂ ಇಂಡಿಯಾ ಈಗಾಗಲೆ ಒಂದು ಪಂದ್ಯ ಗೆದ್ದು ಮುನ್ನಡೆ ಸಾಧಿಸಿದ್ದು, ಈ ಪಂದ್ಯದಲ್ಲೂ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  FIFA World Cup 2022: ಕಾಲೇ ಇಲ್ಲದ ವ್ಯಕ್ತಿ ಕಾಲ್ಚೆಂಡಿನ ಲೋಕದ ರಾಯಭಾರಿ!


ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ಟಿ20ಯಲ್ಲಿ ಭಾರತ ಗೆಲುವು ಸಾಧಿಸಿದೆ. ಕೊನೆಯ ಪಂದ್ಯವಾಗಿದ್ದರೂ ಎರಡೂ ತಂಡಗಳು ಮೂರನೇ ಟಿ20 ಗೆಲ್ಲಲು ಕಣಕ್ಕೆ ಇಳಿದಿದೆ. ಈ ಪಂದ್ಯ ನೇಪಿಯರ್ ನಲ್ಲಿ ನಡೆಯುತ್ತಿದೆ.


ಸದ್ಯ ಈ ಪಂದ್ಯದಲ್ಲಿ ಬದಲಾವಣೆಯೊಂದಿಗೆ ಟೀಂ ಇಂಡಿಯಾ ಕಣಕ್ಕೆ ಇಳಿದಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ವೈದ್ಯಕೀಯ ನೇಮಕಾತಿಯಿಂದಾಗಿ ಕಿವೀಸ್ ನಿಯಮಿತ ನಾಯಕ ವಿಲಿಯಮ್ಸನ್ ಈ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.


ಈಗಾಗಲೆ ಪಂದ್ಯ ಆರಂಭವಾಗಿದ್ದು, ನ್ಯೂಜಿಲ್ಯಾಂಡ್ 2 ವಿಕೆಟ್ ನಷ್ಟಕ್ಕೆ 49 ರನ್ ಕಲೆ ಹಾಕಿದೆ. ಭಾರತ ಫೀಲ್ಡಿಂಗ್ ಮಾಡುತ್ತಿದ್ದು, ಸದ್ಯ ಉತ್ತಮವಾಗಿಯೇ ಆಟವಾಡುತ್ತಿದೆ.


ಕಣಕ್ಕಿಳಿದಿರುವ ಆಟಗಾರರು ಇವರೇ:


ಭಾರತ: ಇಶಾನ್ ಕಿಶನ್, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್


ಇದನ್ನೂ ಓದಿ: ಮತ್ತೆ ಬಂದ ಮೃತ ವ್ಯಕ್ತಿ…ದೆವ್ವದ ಜೊತೆ ಮಾತನಾಡಿದ ಸಿಬ್ಬಂದಿ..ಕ್ಯಾಮರಾದಲ್ಲಿ ವಿಡಿಯೋ ಸೆರೆ


ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಇಶ್ ಸೋಧಿ, ಟಿಮ್ ಸೌಥಿ (ನಾಯಕ), ಲ್ಯೂಕಿ ಫರ್ಗುಸನ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.