Rajat Patidar Test Debut: ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ಗಳಲ್ಲಿ ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್
Rajat Patidar to Replace Virat Kohli: First Two Tests vs. England: ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡುವುದಿಲ್ಲ. ಆದರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಸರ್ಫರಾಜ್ ಖಾನ್ ಆಡಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ರಜತ್ ಪಾಟಿದಾರ್ ಆಡುವುದು ಖಚಿತವಾಗಿದೆ.
Ind vs Eng Test Series: ಇದೇ ಜನವರಿ 25ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ಆದರೆ ಈ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ದೊಡ್ಡ ಆಘಾತ ಅನುಭವಿಸಿದೆ. ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸರಣಿಯ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಆಡುವುದಿಲ್ಲ. ಇದೀಗ, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡಕ್ಕೆ ರಜತ್ ಪಾಟಿದಾರ್ ಸೇರ್ಪಡೆಯಾಗಿದ್ದಾರೆ.
ವಾಸ್ತವವಾಗಿ, ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್‌ಗಳಿಗೆ ಲಭ್ಯವಿಲ್ಲದ ಕಾರಣ, ವಿರಾಟ್ ಕೊಹ್ಲಿ ಬದಲಿಗೆ ಟೀಂ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ಯಾವ ಆಟಗಾರನಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದರೊಂದಿಗೆ ವಿರಾಟ್ ಕೊಹ್ಲಿ ಬದಲಿಗೆ ಸರ್ಫರಾಜ್ ಖಾನ್ ಅಥವಾ ರಜತ್ ಪಾಟಿದಾರ್ ಅವರಿಗೆ ಅವಕಾಶ ಸಿಗಲಿದೆ ಎಂತಲೂ ಹೇಳಲಾಗುತ್ತಿತ್ತು. ಇದೀಗ ನಂತರ 30 ವರ್ಷ ವಯಸ್ಸಿನ ಮಧ್ಯಪ್ರದೇಶ ಬ್ಯಾಟ್ಸ್‌ಮನ್ ಗೆ ಈ ಅವಕಾಶ ದೊರೆತಿದ್ದು ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಆಡುವುದು ಖಚಿತವಾಗಿದೆ.
ಇದನ್ನೂ ಓದಿ- ಅಯೋಧ್ಯೆಯಲ್ಲಿ ಡ್ಯುಪ್ಲಿಕೇಟ್ ಕೊಹ್ಲಿ ಸದ್ದು.. ಸೆಲ್ಫಿಗೆ ಮುಗಿಬಿದ್ದ ಜನ, ವಿಡಿಯೋ ವೈರಲ್
ಮಾಧ್ಯಮ ವರದಿಗಳ ಪ್ರಕಾರ, ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಜತ್ ಪಾಟಿದಾರ್ ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ಸರ್ಫರಾಜ್ ಖಾನ್ತಮ್ಮ ಚೊಚ್ಚಲ ಪ್ರವೇಶಕ್ಕಾಗಿ ಇನ್ನೂ ಕಾಯಬೇಕಾಗಿದೆ.
ಕಳೆದ ವರ್ಷ ಎ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ರಜತ್ ಪಾಟಿದಾರ್, ಇತ್ತೀಚೆಗೆ ಭಾರತ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾಗಿ 111 ರನ್‌ಗಳ ಇನಿಂಗ್ಸ್ ಆಡಿದರು. ಇದಾದ ಬಳಿಕ ಕಳೆದ ವಾರ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ 151 ರನ್ ಗಳಿಸಿದ್ದ ಪಾಟಿದಾರ್ ಇತ್ತೀಚೆಗೆ ಉತ್ತಮ ಧಾಟಿಯಲ್ಲಿದ್ದಾರೆ.
ಇದನ್ನೂ ಓದಿ- ಶೋಯೆಬ್ ಮಲಿಕ್‌ನನ್ನು ಮದುವೆಯಾದ ಪಾಕಿಸ್ತಾನಿ ನಟಿ ಸನಾ ಜಾವೇದ್ ಯಾರು? ಆಕೆಯದು ಎರಡನೇ ಮದುವೆಯೇ?
ರಜತ್ ಪಾಟಿದಾರ್ 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.97 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಅಲ್ಲದೆ, ಈ ಬ್ಯಾಟ್ಸ್‌ಮನ್ ಪ್ರಥಮ ದರ್ಜೆ ಪಂದ್ಯಗಳಲ್ಲಿ 12 ಬಾರಿ ಶತಕದ ಗಡಿ ದಾಟಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.