ಶೋಯೆಬ್ ಮಲಿಕ್‌ನನ್ನು ಮದುವೆಯಾದ ಪಾಕಿಸ್ತಾನಿ ನಟಿ ಸನಾ ಜಾವೇದ್ ಯಾರು? ಆಕೆಯದು ಎರಡನೇ ಮದುವೆಯೇ?

Pakistani actress Sana Javed: ಮೊದಲ ವೈವಾಹಿಕ ಸಂಬಂಧಕ್ಕೆ ಬ್ರೇಕ್‌ ಹಾಕಿದ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗಿದ್ದಾರೆ.. ಇದೀಗ ಈ ಸನಾ ಜಾವೇದ್ ಅವರ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 

Written by - Savita M B | Last Updated : Jan 23, 2024, 03:28 PM IST
  • ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ
  • ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್
  • ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್
 ಶೋಯೆಬ್ ಮಲಿಕ್‌ನನ್ನು ಮದುವೆಯಾದ ಪಾಕಿಸ್ತಾನಿ ನಟಿ ಸನಾ ಜಾವೇದ್ ಯಾರು? ಆಕೆಯದು ಎರಡನೇ ಮದುವೆಯೇ? title=

Sana Javed: ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆಗಿನ ವಿಚ್ಚೇದನದ ನಂತರ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಈ ಸಂಬಂಧ ಫೋಟೋಗಳನ್ನು ಸ್ವತಃ ಶೋಯೆಬ್ ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ... 

ಈ ಹಿಂದೆ ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಕಳೆದ ವರ್ಷ ಸನಾ ಅವರ ಹುಟ್ಟುಹಬ್ಬದಂದು ಪಾಕಿಸ್ತಾನಿ ಕ್ರಿಕೆಟಿಗರು ಶುಭ ಹಾರೈಸಿದಾಗ ವದಂತಿಗಳು ಇನ್ನು ಹೆಚ್ಚು ಬಲಗೊಂಡಿದ್ದವು.. ಇದೀಗ ಸನಾ ಜಾವೇದ್‌ ಕುರಿತಾದ ಚರ್ಚೆಗಳು ಶುರುವಾಗಿದ್ದು.. ಆಕೆಯ ವೈಯಕ್ತಿಕ ಜೀವನದ ಮಾಹಿತಿಯೊಂದು ಹೊರಬಿದ್ದಿದೆ.. 

ಇದನ್ನೂ ಓದಿ-ಈ ದಿನ ಆರಂಭವಾಗಲಿದೆ IPL 2024 : ಫೈನಲ್ ಪಂದ್ಯದ ದಿನಾಂಕವೂ ಪ್ರಕಟ

ಸನಾ ಜಾವೇದ್ ಅವರು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮಾರ್ಚ್ 25, 1993 ರಂದು ಜನಿಸಿದ್ದು... ಕರಾಚಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಈ ಪಾಕಿಸ್ತಾನಿ ನಟಿ ಉರ್ದು ದೂರದರ್ಶನ ಉದ್ಯಮದಲ್ಲಿ ಚಿರಪರಿಚಿತ... 

ಇದನ್ನೂ ಓದಿ-ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ ವಿಚ್ಚೇದನಕ್ಕೆ ಇದೇ ಮೂಲ ಕಾರಣವಂತೆ!

ಇವರು 2012 ರಲ್ಲಿ 'ಶೆಹರ್-ಎ-ಝಾತ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಖಾನಿ, ರುಸ್ವಾಯಿ ಮತ್ತು ಡಂಕ್‌ನಂತಹ ನಾಟಕಗಳಲ್ಲಿನ ಅಭಿನಯಕ್ಕಾಗಿ ಅವರು ಪ್ರಶಂಸೆಯನ್ನು ಪಡೆದರು. 2017 ರಲ್ಲಿ, ಅವರು ಸಾಮಾಜಿಕ-ಹಾಸ್ಯ ಚಿತ್ರ ಮೆಹರುನ್ನಿಸಾ ವಿ ಲವ್ ಯೂ ಮೂಲಕ ತಮ್ಮ ದೊಡ್ಡ ಪರದೆಯ ಚೊಚ್ಚಲ ಪ್ರವೇಶ ಮಾಡಿದರು..

ಸನಾ ಜಾವೇದ್ ಸಹ ಈ ಹಿಂದೆ ಅಕ್ಟೋಬರ್ 2020 ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನಿ ನಟ, ಗಾಯಕ-ಗೀತರಚನೆಕಾರ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರು.. ವರದಿಯ ಪ್ರಕಾರ, ಇಬ್ಬರೂ 2023 ರಲ್ಲಿ ಬೇರ್ಪಟ್ಟರು ಎನ್ನಲಾಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News