Ravindra Jadeja: ಶೀಘ್ರವೇ ಈ ಮಾದರಿಯ ಕ್ರಿಕೆಟ್ ನಿಂದ ರವೀಂದ್ರ ಜಡೇಜಾ ನಿವೃತ್ತಿ..?
ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಯೋಚಿಸುತ್ತಿದ್ದಾರಂತೆ. ಜಡೇಜಾ ಕಳೆದ ಕೆಲವು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ.
ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ(Ravindra Jadeja) ಪ್ರಸ್ತುತ ವಿಶ್ವದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರು. ಜಡೇಜಾ ಬೌಲಿಂಗ್, ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ ನಲ್ಲಿಯೂ ಮಿಂಚುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಆಟಗಾರ 3 ಸ್ವರೂಪಗಳ ಪಂದ್ಯಗಳಲ್ಲಿ ಭಾರತಕ್ಕೆ ಅನೇಕ ಗೆಲುವು ತಂದುಕೊಡಲು ಕಾರಣರಾಗಿದ್ದಾರೆ. ಆದರೆ ಇದೀಗ ಜಡೇಜಾ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಯೋಚಿಸುತ್ತಿದ್ದಾರೆಂಬ ವರದಿಗಳು ಹೊರಬೀಳುತ್ತಿವೆ.
ರವೀಂದ್ರ ಜಡೇಜಾ ನಿವೃತ್ತಿ..?
ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ(Ravindra Jadeja Retirement) ಹೊಂದಲು ಯೋಚಿಸುತ್ತಿದ್ದಾರಂತೆ. ಜಡೇಜಾ ಕಳೆದ ಕೆಲವು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಜಡೇಜಾ ಅವರ ಗಾಯ ತುಂಬಾ ಗಂಭೀರವಾಗಿದ್ದು, ಅವರು ಚೇತರಿಸಿಕೊಳ್ಳಲು ಕನಿಷ್ಠ 5-6 ತಿಂಗಳು ಬೇಕು ಎಂದು ಬಿಸಿಸಿಐ(BCCI) ತಿಳಿಸಿದೆ. ಜಡೇಜಾ ತಮ್ಮ ODI, T20 ಮತ್ತು IPL ವೃತ್ತಿಜೀವನವನ್ನು ದೀರ್ಘಕಾಲ ಉಳಿಸಿಕೊಳ್ಳಲು ಟೆಸ್ಟ್ ಅನ್ನು ತೊರೆಯಬಹುದು ಅಂತಾ ಜಡ್ಡು ಅವರ ವಿಶೇಷ ಸ್ನೇಹಿತ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Pakistan Cricket Team: ಇಂಟರ್ನ್ಯಾಷನಲ್ ಟಿ20ಯಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ
ಜಡೇಜಾ ಅವರ ಗಾಯ ಗಂಭೀರವಾಗಿದೆ
ಸದ್ಯ ರವೀಂದ್ರ ಜಡೇಜಾ(Ravindra Jadeja)ಅವರಿಗೆ ಆಗಿರುವ ಗಾಯದ ಸಮಸ್ಯೆ ತುಂಬಾ ಗಂಭೀರವಾಗಿದೆಯಂತೆ. ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಜಡೇಜಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಮೊದಲ ಟೆಸ್ಟ್ ಪಂದ್ಯ(Test Cricket)ದ ನಂತರ ಸರಣಿಯಿಂದ ಹೊರಗುಳಿದರು. ಪಂದ್ಯದ ವೇಳೆ ಗಾಯ ಮಾಡಿಕೊಂಡಿದ್ದ ಜಡೇಜಾರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಗಾಯದ ಕಾರಣದಿಂದ ಅವರು ಈಗ ಹಲವು ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆಂದು ತಿಳಿದುಬಂದಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಜಡೇಜಾ ಶ್ರೀಲಂಕಾ ವಿರುದ್ಧದ ಸರಣಿಯಿಂದಲೂ ಹೊರಗುಳಿಯಬಹುದು.
ಧೋನಿಗಿಂತಲೂ ದುಬಾರಿ ಜಡೇಜಾ
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಜಡೇಜಾರನ್ನು ಸಿಎಸ್‌ಕೆ(CSK) ತಂಡ ತನ್ನಲ್ಲಿಯೇ ಉಳಿಸಿಕೊಂಡಿದೆ. ಬರೋಬ್ಬರಿ 16 ಕೋಟಿ ರೂ. ಬೆಲೆ ತೆತ್ತು ಜಡೇಜಾರನ್ನು ಚೆನ್ನೈ ತಂಡದಲ್ಲಿ ಉಳಿಸಿಕೊಂಡಿದೆ. ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರಿಗೆ ಸಿಎಸ್‌ಕೆ 12 ಕೋಟಿ ರೂ.ಗೆ ನೀಡಿದೆ. ಧೋನಿ ನಂತರ ಜಡೇಜಾ ಸಿಎಸ್‌ಕೆಯ ಹೊಸ ನಾಯಕನಾಗಬಹುದು ಎಂಬುದು ಇದರಿಂದ ಹೆಚ್ಚು ಸ್ಪಷ್ಟವಾಗಿದೆ. ಈ ಕಾರಣಕ್ಕಾಗಿಯೇ ಈ ಆಟಗಾರ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಮೂಲಕ ಆಟದ ಹೊರೆಯನ್ನು ಕಡಿಮೆ ಮಾಡಲು ಬಯಸಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಸಾಧನೆ: ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದ ದೆಹಲಿಯ ಯುವಕ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.