ನವದೆಹಲಿ : ಇತ್ತೀಚೆಗಷ್ಟೇ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು (Virat Kohli) ಕೆಳಗಿಳಿಸಿ ರೋಹಿತ್ ಶರ್ಮಾ (Rohit Sharma) ಅವರನ್ನು ಬಿಸಿಸಿಐ ನಾಯಕನನ್ನಾಗಿ ನೇಮಕ ಮಾಡಿದೆ. ಬಿಸಿಸಿಐನ ಈ ನಿರ್ಧಾರದಿಂದ ವಿರಾಟ್ ಕೊಹ್ಲಿ ಮುನಿಸಿಕೊಂಡಿರುವುದಂತೂ ಸುಳ್ಳಲ್ಲ. ಇದೀಗ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ. ವಿರಾಟ್ ತನ್ನನ್ನು ತಾನು ಈ ಸರಣಿಗೆ ಅಲಭ್ಯ ಎಂದು ಹೇಳಿಕೊಂಡಿದ್ದಾರೆ. ಹೀಗಾದರೆ, ಭಾರತ ತಂಡ ಏಕದಿನ ಸರಣಿಯಲ್ಲಿ ವಿರಾಟ್ ಇಲ್ಲದೆ ಕಣಕ್ಕಿಳಿಯಲಿದೆ.
ರೋಹಿತ್ ನಾಯಕತ್ವದಲ್ಲಿ ಆಡಲು ಮನಸ್ಸಿಲ್ಲ :
ಈ ಬೆಳವಣಿಗೆಯಿಂದ ವಿರಾಟ್ ಕೊಹ್ಲಿಗೆ (Virat Kohli) ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಲು ಇಷ್ಟವಿಲ್ಲ ಎನ್ನುವುದಂತೂ ಸ್ಪಷ್ಟವಾಗುತ್ತದೆ. ಭಾರತದ ದಕ್ಷಿಣ ಆಫ್ರಿಕಾ ಪ್ರವಾಸವು ಡಿಸೆಂಬರ್ 26 ರಿಂದ ಪ್ರಾರಂಭವಾಗಲಿದ್ದು, ಅಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು ODI ಸರಣಿಯನ್ನು ಆಡಬೇಕಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜನವರಿ 19 ರಿಂದ ಮೊದಲ ಏಕದಿನ ಪಂದ್ಯ ನಡೆಯಲಿದೆ. ವರದಿಯ ಪ್ರಕಾರ, ಕೊಹ್ಲಿ ತಮ್ಮ ಮಗಳು ವಮಿಕಾ (Vamika) ಮೊದಲ ಹುಟ್ಟುಹಬ್ಬವನ್ನು ಆಚರಿಸಲು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : India vs South Africa: ಟೀಂ ಇಂಡಿಯಾದ ದೊಡ್ಡ ಶತ್ರು ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ
ಏಕದಿನ ಸರಣಿಯಿಂದ ಹಿಂದೆ ಸರಿದ ಕೊಹ್ಲಿ :
ಕಳೆದ ವರ್ಷ ಜನವರಿ 11 ರಂದು ವಾಮಿಕಾ ಜನ್ಮ ದಿನ. ಟೆಸ್ಟ್ ಸರಣಿ ಮುಗಿದ ನಂತರ ಕೊಹ್ಲಿ ತಮ್ಮ ಕುಟುಂಬದೊಂದಿಗೆ ರಜಾದಿನ ಕಳೆಯುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯ ಜನವರಿ 11 ರಿಂದ ಆರಂಭವಾಗಲಿದ್ದು, ಜನವರಿ 19 ರಿಂದ ಏಕದಿನ ಪಂದ್ಯಗಳು ಆರಂಭವಾಗಲಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ತಂಡವನ್ನು ಪ್ರಕಟಿಸಿಲ್ಲ. ಭಾರತ ಮತ್ತು ದಕ್ಷಿಣ ಆಫ್ರಿಕಾ ಕೂಡ 4 T20 ಪಂದ್ಯಗಳನ್ನು ಆಡಬೇಕಿತ್ತು. ಆದರೆ Omicron ಕಾರಣದಿಂದಾಗಿ ಪ್ರವಾಸವನ್ನು ಡಿಸೆಂಬರ್ 17 ರಿಂದ ಡಿಸೆಂಬರ್ 26 ರವರೆಗೆ ಮುಂದೂಡಬೇಕಾಯಿತು. ಅಲ್ಲದೆ ಇದೇ ಕಾರಣಕ್ಕಾಗಿ T20 ಸರಣಿಯನ್ನು ರದ್ದುಗೊಳಿಸಲಾಯಿತು.
ಬಿಸಿಸಿಐ ಮುಂದೆ ದೊಡ್ಡ ಸಂಕಟ :
ಈಗ ಕೇಳಿ ಬರುತ್ತಿರುವ ಸುದ್ದಿ ನಿಜವಾದರೆ, ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ (South Africa Series) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. 2021 ರ ಟಿ 20 ವಿಶ್ವಕಪ್ ನಂತರ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ 20 ಅಂತರರಾಷ್ಟ್ರೀಯ ಸರಣಿ ಮತ್ತು ಒಂದು ಟೆಸ್ಟ್ ಪಂದ್ಯದಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಈಗ ಮತ್ತೆ ಕೊಹ್ಲಿ ವಿಶ್ರಾತಂತಿ ಪಡೆಯುವ ಸುದ್ದಿ ಆಘಾತಕಾರಿಯಾಗಿದೆ. ಹೀಗಿರುವಾಗ ವಿರಾಟ್ ಕೊಹ್ಲಿಯ ಈ ನಿರ್ಧಾರ ಬಿಸಿಸಿಐ (BCCI) ಸಂಕಷ್ಟ ಹೆಚ್ಚಿದೆ.
ಇದನ್ನೂ ಓದಿ : ದ.ಆಫ್ರಿಕಾ ಸರಣಿಯಿಂದ ರೋಹಿತ್ ಶರ್ಮಾ ಔಟ್: ‘ಹಿಟ್‌ಮ್ಯಾನ್’ ಸ್ಥಾನಕ್ಕೆ ಈ ಆಟಗಾರನ ಎಂಟ್ರಿ!
ರೋಹಿತ್ ಶರ್ಮಾ ಗಾಯದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಗಾಯವು ಗಂಭೀರವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಹೀಗಿರುವಾಗ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ (Team India) ನಾಯಕತ್ವವನ್ನು ಯಾರು ವಹಿಸಲಿದ್ದಾರೆ ಎಂಬುದು ಬಿಸಿಸಿಐ ಮುಂದಿರುವ ಸಮಸ್ಯೆ. ಬಿಸಿಸಿಐ ಏಕದಿನ ಸರಣಿಗೆ ಟೀಂ ಇಂಡಿಯಾದ ಉಪನಾಯಕನ ಘೋಷಣೆಯನ್ನು ಕೂಡಾ ಮಾಡಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.