Ravindra Jadeja Records: ರವೀಂದ್ರ ಜಡೇಜಾ ಸುಮಾರು ಐದು ತಿಂಗಳ ನಂತರ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ. ಪುನರಾಗಮನದ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಚೆಂಡನ್ನು ನೀಡಿದಾಗ ಅಲ್ಲಿಯೂ ಅದ್ಭುತ ಪ್ರದರ್ಶನ ನೀಡಿ, ಬ್ಯಾಟಿಂಗ್‌ಗೆ ಬಂದರೆ ಅಲ್ಲಿಯೂ ಮುನ್ನಡೆ ಸಾಧಿಸಿ ಅರ್ಧಶತಕ ಬಾರಿಸುವ ಮೂಲಕ ಟೀಕಾಕಾರರಿಗೆ ಹಾಗೂ ಆರೋಪ ಮಾಡಿದವರಿಗೆ ತಕ್ಕ ಉತ್ತರ ನೀಡಿದರು.


COMMERCIAL BREAK
SCROLL TO CONTINUE READING

ಆಸ್ಟ್ರೇಲಿಯಾದ ಕೆಲವು ಮಾಧ್ಯಮ ಸಂಸ್ಥೆಗಳು ಬಾಲ್ ಟ್ಯಾಂಪರಿಂಗ್ ಆರೋಪಗಳನ್ನು ಮಾಡುತ್ತಿದ್ದರೂ ಸಹ ಅವೆಲ್ಲದಕ್ಕೂ ಬ್ಯಾಟಿಂಗ್ ನಿಂದಲೇ ತಕ್ಕ ಉತ್ತರ ನೀಡಿದ್ದಾರೆ. ಇನ್ನೊಂದೆಡೆ ರವೀಂದ್ರ ಜಡೇಜಾ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಇದೀಗ ತಮ್ಮದೇ ಜೊತೆಗಾರ ರವಿಚಂದ್ರನ್ ಅಶ್ವಿನ್ ಗೆ ಸರಿಸಮನಾಗಿ ಬಂದಿದ್ದಾರೆ. ಅವರು ಈಗಾಗಲೇ ಭಾರತ ತಂಡದ ಮಾಜಿ ನಾಯಕ ಮತ್ತು ಆಲ್ ರೌಂಡರ್ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದಿದ್ದಾರೆ ಎನ್ನಬಹುದು.


ಇದನ್ನೂ ಓದಿ: ರಿಷಬ್ ಪಂತ್ ಹೇಗಿದ್ದಾರೆ? ಅವರ ಆರೋಗ್ಯದ ಬಗ್ಗೆ ಪಕ್ಕಾ ಮಾಹಿತಿ ನೀಡುತ್ತದೆ ಈ ಒಂದು ಫೋಟೋ


ರವೀಂದ್ರ ಜಡೇಜಾ ಮೊದಲು ಬೌಲಿಂಗ್ ಮಾಡಿದಾಗ ಐವರು ಆಸ್ಟ್ರೇಲಿಯಾದ ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಮೊದಲ ದಿನ 22 ಓವರ್ ಬೌಲ್ ಮಾಡಿದ ಅವರು 47 ರನ್ ನೀಡಿ ಐದು ವಿಕೆಟ್ ಪಡೆದರು. ಅವರು ಅಂತಹ ಎಂಟು ಓವರ್‌ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಅದರಲ್ಲಿ ಒಂದೇ ಒಂದು ರನ್ ಗಳಿಸಲಿಲ್ಲ. ನಾಯಕ ರೋಹಿತ್ ಶರ್ಮಾ ಅವರು ರವೀಂದ್ರ ಜಡೇಜಾ ಅವರನ್ನು ಟೀಮ್ ಇಂಡಿಯಾದಿಂದ ಗರಿಷ್ಠ ಓವರ್‌ಗಳನ್ನು ಬೌಲ್ ಮಾಡಲು ಆಯ್ಕೆ ಮಾಡಿಕೊಂಡರು. ಇದಾದ ನಂತರ ಇಂದು ಅಂದರೆ ಶುಕ್ರವಾರ ಅವರ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿತ್ತು. ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ದೊಡ್ಡ ಸ್ಕೋರ್ ನೀಡುವ ಜೊತೆಗೆ ಉತ್ತಮ ಮುನ್ನಡೆ ನೀಡುವ ಜವಾಬ್ದಾರಿಯ ರವೀಂದ್ರ ಜಡೇಜಾ ಹೆಗಲ ಮೇಲಿತ್ತು. ಅದಕ್ಕೆ ತಕ್ಕಂತೆ ಅದೇ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದರು. 170 ಎಸೆತಗಳಲ್ಲಿ 66 ರನ್ ಗಳಿಸಿ ದಿನದಾಟದ ಅಂತ್ಯಕ್ಕೆ ಅಜೇಯರಾಗಿ ಮರಳಿದರು. ದಿನದ ಆಟ ಮುಗಿಯುವ ಹಂತದಲ್ಲಿದ್ದಾಗ, ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಜಡೇಜಾ ಕ್ಯಾಚ್ ನೀಡಿದರು. ಆದರೆ ಸ್ಟೀವ್ ಸ್ಮಿತ್ ಸ್ಲಿಪ್‌ನಲ್ಲಿ ಹಿಡಿಯಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಕ್ಕೆ ಅವಕಾಶವಿದ್ದರೂ ಸಹ ಅದು ಸಾಧ್ಯವಾಗಲಿಲ್ಲ. ನಂತರ ದಿನದ ಆಟವು ಮುಂದಿನ ಎಸೆತದಲ್ಲಿ ಮುಕ್ತಾಯವಾಯಿತು.


ಇದನ್ನೂ ಓದಿ: ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್, ಸಿಗಲಿದೆ ಹೆಚ್ಚುವರಿ ಪಿಂಚಣಿ ಮಾರ್ಚ್ 3ರ ಮೊದಲು ಅಪ್ಲೈ ಮಾಡಿ


ರವೀಂದ್ರ ಜಡೇಜಾ ದಾಖಲೆ:


ಒಂದೇ ಪಂದ್ಯದಲ್ಲಿ ಐದು ವಿಕೆಟ್ ಹಾಗೂ 50 ರನ್ ಗಳಿಸಿದ ಏಕೈಕ ಆಟಗಾರ ರವೀಂದ್ರ ಜಡೇಜಾ ಎಂದೆನಿಸಿಕೊಂಡಿದ್ದಾರೆ. ಇದೀಗ ಆರನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಇನ್ನು ಭಾರತದ ಆಟಗಾರರ ಬಗ್ಗೆ ಹೇಳುವುದಾದರೆ, ಇದುವರೆಗೂ ಈ ವಿಚಾರದಲ್ಲಿ ನಂಬರ್ ಒನ್ ಆಗಿದ್ದ ರವಿಚಂದ್ರನ್ ಅಶ್ವಿನ್ ಕೂಡ ಆರು ಬಾರಿ ಈ ಸಾಧನೆ ಮಾಡಿದ್ದರು. ಈಗ ರವೀಂದ್ರ ಜಡೇಜಾ ಕೂಡ ಅವರ ಮಟ್ಟಕ್ಕೆ ಬಂದಿದ್ದಾರೆ. ಇದಕ್ಕೂ ಮೊದಲು 1983 ರಲ್ಲಿ ಮೊದಲ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ನಾಯಕ ಕಪಿಲ್ ದೇವ್ ಅವರು ಇಂತಹ ದಾಖಲೆ ಮಾಡಿದ್ದರು. ಟೆಸ್ಟ್ ಪಂದ್ಯದಲ್ಲಿ ನಾಲ್ಕು ಬಾರಿ ಈ ದಾಖಲೆ ಬರೆದಿದ್ದರು. ಈಗ ಜಡೇಜಾ ಮತ್ತು ಅಶ್ವಿನ್ ಸಮಬಲದಲ್ಲಿದ್ದಾರೆ. ಈ ನಡುವೆ ಮುಂದಿನ ದಿನಗಳಲ್ಲಿ ಈ ಕದನ ಇನ್ನಷ್ಟು ಕುತೂಹಲಕಾರಿಯಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ