Rishab Pant Health: ರಿಷಬ್ ಪಂತ್ ಹೇಗಿದ್ದಾರೆ? ಅವರ ಆರೋಗ್ಯದ ಬಗ್ಗೆ ಪಕ್ಕಾ ಮಾಹಿತಿ ನೀಡುತ್ತದೆ ಈ ಒಂದು ಫೋಟೋ

Rishab Pant Health Update: 25ರ ಹರೆಯದ ರಿಷಬ್ ಪಂತ್ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅದರ ಶೀರ್ಷಿಕೆಯಲ್ಲಿ, 'ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಶಾಲಿ, ಒಂದು ಹೆಜ್ಜೆ ಉತ್ತಮ' ಎಂದು ಬರೆದಿದ್ದಾರೆ. ಪಂತ್ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

Written by - Bhavishya Shetty | Last Updated : Feb 10, 2023, 09:19 PM IST
    • ಭಾರತ ಕ್ರಿಕೆಟ್ ತಂಡದ ಸೂಪರ್‌ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್
    • ಅಪಘಾತಕ್ಕೀಡಾದ ಬಳಿಕ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ
    • ಶುಕ್ರವಾರ ತಮ್ಮ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ
Rishab Pant Health: ರಿಷಬ್ ಪಂತ್ ಹೇಗಿದ್ದಾರೆ? ಅವರ ಆರೋಗ್ಯದ ಬಗ್ಗೆ ಪಕ್ಕಾ ಮಾಹಿತಿ ನೀಡುತ್ತದೆ ಈ ಒಂದು ಫೋಟೋ  title=
Rishabh Pant

Rishab Pant Health Update: ಭಾರತ ಕ್ರಿಕೆಟ್ ತಂಡದ ಸೂಪರ್‌ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಪ್ರಸ್ತುತ ಚೇತರಿಕೆಯಲ್ಲಿದ್ದಾರೆ. ಅವರು ಶುಕ್ರವಾರ ತಮ್ಮ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಪಂತ್ ಕ್ರಚರ್ (ಊರುಗೋಲು)ಗಳ ಸಹಾಯದಿಂದ ನಡೆಯುವುದನ್ನು ಕಾಣಬಹುದು. ಅವರ ಒಂದು ಕಾಲಿಗೆ ಬ್ಯಾಂಡೇಜ್ ಹಾಕಲಾಗಿದೆ. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ಪಂತ್ ಕಾರು ಅಪಘಾತಕ್ಕೀಡಾಗಿದ್ದರು.

ಇದನ್ನೂ ಓದಿ: KL Rahul : ನಾಗ್ಪುರ ಟೆಸ್ಟ್ ಕೆಎಲ್ ರಾಹುಲ್ ವೃತ್ತಿಜೀವನದ ಕೊನೆಯ ಪಂದ್ಯ? ಸಂಚಲನ ಮೂಡಿಸಿದ ಬಿಸಿಸಿಐ ಅಧಿಕಾರಿ ಹೇಳಿಕೆ

25ರ ಹರೆಯದ ರಿಷಬ್ ಪಂತ್ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅದರ ಶೀರ್ಷಿಕೆಯಲ್ಲಿ, 'ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಶಾಲಿ, ಒಂದು ಹೆಜ್ಜೆ ಉತ್ತಮ' ಎಂದು ಬರೆದಿದ್ದಾರೆ. ಪಂತ್ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅವರ ಬಲಗಾಲಿನಲ್ಲಿ ಊತ ಕಾಣಿಸುತ್ತಿದೆ. ಕೇವಲ ಒಂದು ಕಾಲಿನ ಮೇಲೆ ನಿಂತಿರುವುದು ಕಂಡುಬರುತ್ತದೆ. ಹೀಗಿರುವಾಗ ಪಂತ್‌ಗೆ ಅಸಹನೀಯ ನೋವಿದೆ ಎಂದು ಅಭಿಮಾನಿಗಳು ಊಹಿಸಬಹುದು.

ಕಳೆದ ವರ್ಷ ಡಿಸೆಂಬರ್ 30 ರಂದು ರಿಷಬ್ ಪಂತ್ ಕಾರು ಅಪಘಾತಕ್ಕೀಡಾಗಿತ್ತು. ಘಟನೆಯ ನಂತರ ಅವರ ಕಾರಿನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯ ಜನರ ಸಹಾಯದಿಂದ ಪಂತ್ ಅವರನ್ನು ತಕ್ಷಣವೇ ರೂರ್ಕಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಅವರನ್ನು ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಯಿತು. ನಂತರ ಅವರನ್ನು ವಿಮಾನದಲ್ಲಿ ಮುಂಬೈಗೆ ಕರೆತರಲಾಯಿತು. ಈ ಅಪಘಾತ ಬಹಳ ಗಂಭೀರವಾಗಿತ್ತು. ಅಪಘಾತ ಸಂಭವಿಸಿದ ಕೂಡಲೇ ಅವರ ಕಾರು ಕೂಡ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: IND vs AUS : ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹೊಡೆತ, ಈ ಸ್ಟಾರ್ ಆಟಗಾರ ಪಂದ್ಯದಿಂದ ಔಟ್!

ಪಂತ್ ಅವರ ವೃತ್ತಿಜೀವನ ಹೀಗಿದೆ:

ರಿಷಬ್ ಪಂತ್ ಇದುವರೆಗೆ 33 ಟೆಸ್ಟ್, 30 ಏಕದಿನ ಹಾಗೂ 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 25ರ ಹರೆಯದ ಈ ವಿಕೆಟ್‌ಕೀಪರ್ ಟೆಸ್ಟ್‌ನಲ್ಲಿ 5 ಶತಕ ಮತ್ತು 11 ಅರ್ಧಶತಕಗಳ ಸಹಾಯದಿಂದ 2271 ರನ್ ಗಳಿಸಿದ್ದಾರೆ. ODIಗಳಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳ ಸಹಾಯದಿಂದ ಒಟ್ಟು 865 ರನ್ ಗಳಿಸಿದ್ದಾರೆ. T20 ಅಂತರಾಷ್ಟ್ರೀಯ ಮಾದರಿಯ 66 ಪಂದ್ಯಗಳಲ್ಲಿ, 3 ಅರ್ಧಶತಕಗಳ ಕಾರಣದಿಂದಾಗಿ ಒಟ್ಟು 987 ರನ್ಗಳನ್ನು ಗಳಿಸಿದ್ದಾರೆ. ಅವರು ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News