Virat Asks Chris Gayle To Comeback to IPL: ವಿರಾಟ್ ಕೊಹ್ಲಿ ಕ್ರಿಸ್ ಗೇಲ್ ಅವರನ್ನು ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮರಳಲು ಕೇಳಿಕೊಂಡಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ಮೇ 18 ರಂದು ಐಪಿಎಲ್ 2024 ರ ಪಂದ್ಯದಲ್ಲಿಅನುಷ್ಕಾ ಶರ್ಮಾ ಮತ್ತು ಸ್ಮೃತಿ ಮಂದಣ್ಣ ಅವರ ಜೊತೆಗೆ ಯುನಿವರ್ಸಲ್‌ ಬಾಸ್‌ ಕ್ರಿಸ್‌ ಗೇಲ್ ಕೂಡಾ ಭಾಗಿಯಾಗಿದ್ದರು. 


COMMERCIAL BREAK
SCROLL TO CONTINUE READING

ಆರ್‌ಸಿಬಿ ತಂಡ ಶನಿವಾರದ ಮ್ಯಾಚ್‌ ಅನ್ನು ಗೆದ್ದ ನಂತರ ಗೇಲ್ ತಮ್ಮ ಕ್ರಿಕೆಟಿಗರನ್ನು ಅಭಿನಂದಿಸಲು  ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದರು. ತಂಡದ ಆಟಗಾರರು ಯೂನಿವರ್ಸ್ ಬಾಸ್ ಅನ್ನು ಮೋಡಿ ಬಹಳಾನೇ ಸಂತೋಷ ಪಟ್ಟರು. ಎಲ್ಲಾರೂ ಒಟ್ಟಾಗಿದ್ದಾಗ ಸಂತೋಷದ ವಾತಾವರಣದ ಜೊತೆಗೆ ಸ್ವಲ್ಪ ಹಾಸ್ಯವನ್ನು ಸೇರಿಸಿಕೊಂಡಿತು . ಅಂತಹ ಸಂದರ್ಭದಲ್ಲೇ ವಿರಾಟ್ ಕೊಹ್ಲಿ ಕ್ರಿಸ್ ಗೇಲ್ ಅವರನ್ನು ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲು ವಿನಂತಿಸಿದರು.


ಇದನ್ನೂ ಓದಿ: ಆತನ ಬ್ಯಾಟಿಂಗ್ ನೋಡಿದ್ರೆ ಭಯವಾಗುತ್ತೆ, ಆತನಿಗೆ ಬೌಲಿಂಗ್ ಮಾಡಲು ಬಯಸಲ್ಲ! ಪ್ಯಾಟ್ ಕಮಿನ್ಸ್’ಗೆ ಭಯ ಹುಟ್ಟಿಸಿದ ಆ ಭಾರತೀಯ ಯಾರು?


ಸೋಶಿಯಲ್‌ ಮಿಡಿಯಾದ ಒಂದು ವಿಡಿಯೋದಲ್ಲಿ ವಿರಾಟ್‌ ಕೊಹ್ಲಿ, "ಕಾಕಾ, ಮುಂದಿನ ವರ್ಷ ಹಿಂತಿರುಗಿ ಬನ್ನಿ. ಇಂಪ್ಯಾಕ್ಟ್ ಪ್ಲೇಯರ್ ಆಗಿ  ಆಟವಾಡಿ.  ನೀವು ಇನ್ನು ಮುಂದೆ ಫೀಲ್ಡಿಂಗ್ ಮಾಡಬೇಕಾಗಿಲ್ಲ. ಇದು ನಿಮಗಾಗಿ ವಿನ್ಯಾಸಗೊಳಿಸಲಾಗಿದೆ" ಎಂದು ಕ್ರಿಸ್‌ ಗೇಲ್‌ಗೆ ಹತ್ತಿರ ಕೇಳಿಕೊಂಡಿದ್ದಾರೆ. ಯೂನಿವರ್ಸ್ ಬಾಸ್ ಮೊದಲು ಆರ್‌ಸಿಬಿ ತಂಡಕ್ಕೆ ಆಟವಾಡುವ ಮೊದಲು ಕೆಕೆಆರ್‌ಗಾಗೀ ಪಂದ್ಯದಲ್ಲಿ ಆಟವಾಡುವ ಮೂಲಕ ಐಪಿಎಲ್‌ ವೃತ್ತಿಜೀವನವನ್ನು ಪ್ರಾರಂಭಿಸಿದರು.


ಯುನಿವರ್ಸಲ್‌ ಬಾಸ್‌ ಕ್ರಿಸ್‌ ಗೇಲ್‌ ಪಿಬಿಕೆಎಸ್‌ಗೆ ಒಂದೆರಡು ಋತುಗಳನ್ನು ಆಡುವ ಮೂಲಕ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಪ್ರಸ್ತುತ T20 ಕ್ರಿಕೆಟ್‌ನಲ್ಲಿ ಕ್ರಿಸ್‌ ಗೇಲ್‌ ಆರ್‌ಸಿಬಿ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 91 ಪಂದ್ಯಗಳಿಂದ 43.29 ಸರಾಸರಿಯಲ್ಲಿ 3420 ರನ್ ಗಳಿಸಿದ್ದಾರೆ ಮತ್ತು 5 ಶತಕಗಳು ಮತ್ತು 21 ಅರ್ಧ ಶತಕಗಳೊಂದಿಗೆ 154.40 ಸ್ಟ್ರೈಕ್ ರೇಟ್‌ಗಳನ್ನು ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.