RCB vs SRH : ಡಕ್ ಔಟ್ ಆದ ವಿರಾಟ್ ಕೊಹ್ಲಿ : ಕೋಪಗೊಂಡ ಫ್ಯಾನ್ಸ್ ಹೇಳಿದ್ದು ಹೀಗೆ!
ವಿರಾಟ್‌ನ ಇಂತಹ ಫಾರ್ಮ್ ನೋಡಿ ಕ್ರಿಕೆಟ್ ಅಭಿಮಾನಿಗಳು ಕೂಡ ಕೋಪಗೊಂಡಿದ್ದರು. ಅದರಲ್ಲೂ ವಿರಾಟ್ ಅವರ ಕಳಪೆ ಫಾರ್ಮ್ ನಿಂದಾಗಿ ಆರ್ ಸಿಬಿ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಹೀಗಿರುವಾಗ ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದಾರೆ.
Virat Kohli out on Duck : ಐಪಿಎಲ್ 2022 ರಲ್ಲಿ, ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ನಿಂದ ಹೋರಾಡುತ್ತಿದ್ದಾರೆ. ಈ ಸೀಸನ್ ವಿರಾಟ್ ಗೆ ಕೆಟ್ಟದಾಗಿ ಸಾಗುತ್ತಿದೆ. ಇಂದು ಆರ್‌ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ (RCB vs SRH) ನಡುವಿನ ಪಂದ್ಯದ ವೇಳೆ ಕೊಹ್ಲಿ ಮೊದಲ ಎಸೆತದಲ್ಲಿ ಖಾತೆ ತೆರೆಯದೆ ಡಕ್ ಔಟ್ ಆಗಿ ಸಪ್ಪೆ ಮೊರೆಯಿಂದ ಪೆವಿಲಿಯನ್‌ಗೆ ಮರಳಿದರು. ಆಗ ಅಭಿಮಾನಿಗಳು ಕೊಹ್ಲಿಗೆ ಮುಜುಗರ ಆಗುವ ರೀತಿ ನಡೆದುಕೊಂಡಿರುವುದು ಸೋಶಿಯಲ್ ಮೆಡಿದಲ್ಲಿ ಭಾರಿ ವೈರಲ್ ಆಗಿದೆ.
ಸಪ್ಪೆ ಮೊರೆಯಿಂದ ಪೆವಿಲಿಯನ್‌ಗೆ ಮರಳಿದ ಕೊಹ್ಲಿ
ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ವಿರಾಟ್ ಕೊಹ್ಲಿ ಓಪನಿಂಗ್ ಆಡಲು ಬಂದಾಗ, ಜಗದೀಶ್ ಸುಚಿತ್ ಮೊದಲ ಎಸೆತದ ಬಾಲ್ ಗೆ ಕೊಹ್ಲಿ ಬ್ಯಾಟ್ ಬಿಸಿದ್ದರು, ಆದ್ರೆ ಅದು ನೇರವಾಗಿ ಕೇನ್ ವಿಲಿಯಮ್ಸನ್ ಕೈಗೆ ಕ್ಯಾಚ್ ಸಿಕ್ಕಿತು. ಔಟಾದ ನಂತರ ವಿರಾಟ್ ತಮ್ಮ ಕಳಪೆ ಲಯಕ್ಕೆ ತುಂಬಾ ಅಸಮಾಧಾನಗೊಂಡು ಸಪ್ಪೆ ಮೊರೆಯಿಂದ ಪೆವಿಲಿಯನ್‌ಗೆ ಮರಳಿದರು. ಇದು ಐಪಿಎಲ್ 2022 ರಲ್ಲಿ ವಿರಾಟ್ ಅವರ ಮೂರನೇ ಗೋಲ್ಡನ್ ಡಕ್ ಆಗಿದೆ. ವಿರಾಟ್ ಇಂತಹ ಕೆಟ್ಟ ಐಪಿಎಲ್ ಸೀಸನ್ ಯಾವತ್ತೂ ಕಳೆದಿಲ್ಲ.
Delhi Capitals ನೆಟ್ ಬೌಲರ್‌ಗೆ ಕೋವಿಡ್: ಇಂದು ನಡೆಯುತ್ತಾ ಪಂದ್ಯ?
ಈಗಲೇ ನಿವೃತ್ತಿ ತೆಗೆದುಕೊಳ್ಳಿ ಎಂದ ಫ್ಯಾನ್ಸ್
ವಿರಾಟ್‌ನ ಇಂತಹ ಫಾರ್ಮ್ ನೋಡಿ ಕ್ರಿಕೆಟ್ ಅಭಿಮಾನಿಗಳು ಕೂಡ ಕೋಪಗೊಂಡಿದ್ದರು. ಅದರಲ್ಲೂ ವಿರಾಟ್ ಅವರ ಕಳಪೆ ಫಾರ್ಮ್ ನಿಂದಾಗಿ ಆರ್ ಸಿಬಿ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಹೀಗಿರುವಾಗ ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದಾರೆ. ಹಲವು ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಕ್ರಿಕೆಟ್ ನಿಂದ ನಿವೃತ್ತಿಯಾಗುವಂತೆ ಸಲಹೆ ನೀಡುತ್ತಿದ್ದಾರೆ. ವಿರಾಟ್ ಅವರ ಕಳಪೆ ಫಾರ್ಮ್‌ನಿಂದ ಅನೇಕ ಅಭಿಮಾನಿಗಳು ತುಂಬಾ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಐಪಿಎಲ್ 2022 ವಿರಾಟ್ ಕೊಹ್ಲಿಗೆ ತುಂಬಾ ಕೆಟ್ಟದಾಗಿದೆ. ಈ ಆಟಗಾರ ತನ್ನ ಮೊದಲ ಎಸೆತದಲ್ಲಿ ಮೂರು ಬಾರಿ ಔಟ್ ಆಗಿದ್ದಾರೆ. ವಿರಾಟ್ ಪಂದ್ಯದ ಮೊದಲ ಎಸೆತದಲ್ಲಿಯೇ ಔಟಾದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲೂ ವಿರಾಟ್ ಶೂನ್ಯಕ್ಕೆ ಔಟಾಗಿದ್ದರು. ಇದಲ್ಲದೇ ಈ ಬ್ಯಾಟ್ಸ್‌ಮನ್‌ಗೆ 3 ವರ್ಷಗಳಿಂದ ಶತಕ ಬಾರಿಸಲು ಸಾಧ್ಯವಾಗಿಲ್ಲ. ಹೈದರಾಬಾದ್ ವಿರುದ್ಧ ಔಟಾದ ನಂತರ ವಿರಾಟ್ ಅವರ ಭುಜಗಳು ನೋವು ಕಂಡುಬಂದಿತು. ಇದರಿಂದ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ.
RCB vs SRH: ಬೆಂಗಳೂರಿಗೆ ಹೈದರಾಬಾದ್ ಸವಾಲು: ಪ್ಲೇ ಆಫ್ ಪ್ರವೇಶಿಸುತ್ತಾ ಆರ್‌ಸಿಬಿ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.