Delhi Capitals ನೆಟ್‌ ಬೌಲರ್‌ಗೆ ಕೋವಿಡ್‌: ಇಂದು ನಡೆಯುತ್ತಾ ಪಂದ್ಯ?

ಈ ಹಿಂದೆ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್, ಆಲ್ ರೌಂಡರ್ ಮಿಚೆಲ್ ಮಾರ್ಷ್, ಕೀಪರ್-ಬ್ಯಾಟರ್ ಟಿಮ್ ಸೀಫರ್ಟ್ ಮತ್ತು ಇತರ ಮೂವರಿಗೆ ಕೊರೊನಾ ಸೋಂಕು ತಗುಲಿತ್ತು. ಆ ಸಂದರ್ಭದಲ್ಲಿಯೂ ಆಟಗಾರರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.    

Written by - Bhavishya Shetty | Last Updated : May 8, 2022, 03:17 PM IST
  • ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್‌ ಬೌಲರ್‌ಗೆ ಕೊರೊನಾ
  • ಡೆಲ್ಲಿ ಮತ್ತು ಚೆನ್ನೈ ನಡುವೆ ನಡೆಯಬೇಕಿದ್ದ ಪಂದ್ಯ
  • ಸದ್ಯ ಐಸೋಲೇಷನ್‌ನಲ್ಲಿರುವ ಆಟಗಾರರು
Delhi Capitals ನೆಟ್‌ ಬೌಲರ್‌ಗೆ ಕೋವಿಡ್‌: ಇಂದು ನಡೆಯುತ್ತಾ ಪಂದ್ಯ? title=
Delhi Capitals

ಇಂದು ಮುಂಬೈನ ಡಾ. ಡಿ.ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್  ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ನಡುವೆ ಐಪಿಎಲ್‌ನ 55ನೇ ಪಂದ್ಯ ನಡೆಯಲಿತ್ತು. ಆದರೆ ಡೆಲ್ಲಿ ತಂಡದ ನೆಟ್‌ ಬೌಲರ್‌ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಪಂದ್ಯದ ಗತಿ ಏನಾಗಲಿದೆ ಎಂದು ಇನ್ನೂ ತಿಳಿದುಬಂದಿಲ್ಲ. 

ಇದನ್ನು ಓದಿ: Mi vs GT : ಆಘಾತಕಾರಿ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ!

ಸದ್ಯ ನೆಟ್‌ ಬೌಲರ್‌ ಸೇರಿದಂತೆ ತಂಡದ ಎಲ್ಲಾ ಆಟಗಾರರನ್ನು ಐಸೋಲೇಷನ್‌ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಐಪಿಎಲ್‌ 2022ರ ಆವೃತ್ತಿಯಲ್ಲಿ ದೆಹಲಿ ತಂಡವು ಎರಡನೇ ಬಾರಿ ಐಸೋಲೇಟ್‌ ಆಗುತ್ತಿದೆ. ಈ ಹಿಂದೆ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್, ಆಲ್ ರೌಂಡರ್ ಮಿಚೆಲ್ ಮಾರ್ಷ್, ಕೀಪರ್-ಬ್ಯಾಟರ್ ಟಿಮ್ ಸೀಫರ್ಟ್ ಮತ್ತು ಇತರ ಮೂವರಿಗೆ ಕೊರೊನಾ ಸೋಂಕು ತಗುಲಿತ್ತು. ಆ ಸಂದರ್ಭದಲ್ಲಿಯೂ ಆಟಗಾರರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.  

ಸದ್ಯ ಪಂದ್ಯಗಳು ನಡೆಯಲಿದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಕುರಿತು ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮೂಲಗಳು ತಿಳಿಸಿರುವ ಪ್ರಕಾರ ಪಂದ್ಯದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ. 

ಇಂದು ಮಧ್ಯಾಹ್ನ 3.30ಕ್ಕೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 54ನೇ ಪಂದ್ಯವು ಇಂದು ಪ್ರಾರಂಭವಾಗಲಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಧ್ಯೆ ನಡೆಯಲಿದೆ. ಉಭಯ ತಂಡಗಳು ಸಹ ಪ್ಲೇ ಆಫ್‌ಗೆ ಪ್ರವೇಶ ಪಡೆಯಲು ಹೋರಾಟ ನಡೆಸಲಿವೆ.

ಇದನ್ನು ಓದಿ: Sehwag On Warner : ಡೇವಿಡ್ ವಾರ್ನರ್ ಹಾಡಿ ಹೊಗಳಿದ ವೀರೇಂದ್ರ ಸೆಹ್ವಾಗ್

ಇನ್ನೊಂದೆಡೆ ಸಂಜೆ 7.30ಕ್ಕೆ  ಡೆಲ್ಲಿ ಕ್ಯಾಪಿಟಲ್ಸ್  ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ನಡುವೆ ಹಣಾಹಣಿ ನಡೆಯಲಿತ್ತು. ಆದರೆ ಇತ್ತೀಚಿಗೆ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಡೆಲ್ಲಿ ತಂಡದ ನೆಟ್‌ ಬೌಲರ್‌ಗೆ ಕೊರೊನಾ ಕಾಣಿಸಿಕೊಂಡಿದ್ದು, ಇಂದು ಪಂದ್ಯ ನಡೆಯುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News