ಕ್ರಿಕೆಟ್’ಗೂ ಬಂತು ರೆಡ್ ಕಾರ್ಡ್ ರೂಲ್ಸ್..! ಹೊಸ ನಿಯಮದ ಶಿಕ್ಷೆಗೆ ಒಳಗಾದ ಮೊದಲ ಆಟಗಾರ ಈ ಆಫ್ ಸ್ಪಿನ್ನರ್
Sunil Narine Red Card Punishment: ಅನುಭವಿ ಆಫ್ ಸ್ಪಿನ್ನರ್ ಸುನಿಲ್ ನರೈನ್ ಕ್ರಿಕೆಟ್’ನಲ್ಲಿ ರೆಡ್ ಕಾರ್ಡ್ ಪಡೆದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕ್ರಿಕೆಟ್ ಇತಿಹಾಸದಲ್ಲಿ ಕ್ರಿಕೆಟಿಗರಿಗೆ ರೆಡ್ ಕಾರ್ಡ್ ತೋರಿಸುತ್ತಿರುವುದು ಇದೇ ಮೊದಲ ಬಾರಿಗೆ.
Sunil Narine Red Card Punishment: ಟ್ರಿನ್’ಬಾಗೊ ನೈಟ್ ರೈಡರ್ಸ್ ಅನುಭವಿ ಆಫ್ ಸ್ಪಿನ್ನರ್ ಸುನಿಲ್ ನರೈನ್ ಸಿಪಿಎಲ್ (ಕೆರಿಬಿಯನ್ ಪ್ರೀಮಿಯರ್ ಲೀಗ್) ಪಂದ್ಯದಲ್ಲಿ ಓವರ್ ರೇಟ್ ಉಲ್ಲಂಘನೆಗಾಗಿ ರೆಡ್ ಕಾರ್ಡ್ ಪಡೆದಿದ್ದಾರೆ. ಈ ಮೂಲಕ ಕ್ರಿಕೆಟ್’ನಲ್ಲಿ ರೆಡ್ ಕಾರ್ಡ್ ಪಡೆದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕ್ರಿಕೆಟ್ ಇತಿಹಾಸದಲ್ಲಿ ಕ್ರಿಕೆಟಿಗರಿಗೆ ರೆಡ್ ಕಾರ್ಡ್ ತೋರಿಸುತ್ತಿರುವುದು ಇದೇ ಮೊದಲ ಬಾರಿಗೆ.
ಇದನ್ನೂ ಓದಿ: ಸ್ಟಾರ್ ವೇಗದ ಬೌಲರ್ ಸೇರಿ 6 ಮಂದಿ ಕ್ರಿಕೆಟಿಗರು Asia Cup 2023ರಿಂದ ಔಟ್: ವಿಶ್ವಕಪ್’ನಲ್ಲೂ ಇಲ್ಲ ಚ್ಯಾನ್ಸ್!
ಈ ರೆಡ್ ಕಾರ್ಡ್ ರೂಲ್ಸ್’ನ್ನು ಸಿಪಿಎಲ್ ಟಿ-20 ಲೀಗ್’ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ.
ಇದು ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು…
ಕೊನೆಯ ಮೂರು ಓವರ್’ಗಳಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ನಿಧಾನಗತಿಯ ಬೌಲಿಂಗ್ ಮಾಡಿತ್ತು. ಅಷ್ಟೇ ಅಲ್ಲದೆ, ತಂಡವು ಅಗತ್ಯ ಓವರ್ ರೇಟ್ ನಿಂದ ಹಿಂದುಳಿದಿತ್ತು. ಇದರಿಂದಾಗಿ 19ನೇ ಓವರ್ ಮುಗಿದ ಬಳಿಕ ಅಂಪೈರ್ ತಂಡಕ್ಕೆ ರೆಡ್ ಕಾರ್ಡ್ ತೋರಿಸಿದರು. ರೈಡರ್ಸ್ ನಾಯಕ ಪೊಲಾರ್ಡ್ ಕೊನೆಯ ಓವರ್ ನಲ್ಲಿ ಸ್ಪಿನ್ನರ್ ಸುನಿಲ್ ನರೈನ್ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿದರು.
ಒಂದು ಓವರ್’ನಲ್ಲಿ 100ಕ್ಕೂ ಹೆಚ್ಚು ಮೀಟರ್ ದೂರಕ್ಕೆ 4 ದೈತ್ಯ ಸಿಕ್ಸರ್ ಬಾರಿಸಿದ ಆಟಗಾರ! ವಿಡಿಯೋ
ಇನ್ನು ಪೊಲಾರ್ಡ್ ರೆಡ್ ಕಾರ್ಡ್ ನಿಯಮವನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ. ಪಂದ್ಯ ಮುಗಿದ ನಂತರ ಮಾತನಾಡಿದ ಪೊಲಾರ್ಡ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಎಲ್ಲರೂ ಮಾಡಿದ ಶ್ರಮವನ್ನು ಹಾಳುಮಾಡುತ್ತದೆ. ನಾವು ಸಾಧ್ಯವಾದಷ್ಟು ವೇಗವಾಗಿ ಆಡುತ್ತೇವೆ. ಈ ರೀತಿಯ ಪಂದ್ಯಾವಳಿಯಲ್ಲಿ ನೀವು 30-45 ಸೆಕೆಂಡುಗಳ ಕಾಲ ದಂಡನೆಗೆ ಒಳಗಾದರೆ ಅದು ಸಂಪೂರ್ಣವಾಗಿ ಹಾಸ್ಯಾಸ್ಪದ” ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ