CPL 2023, Kieron Pollard sixes: ಸಿಪಿಎಲ್ 2023 ರ 12 ನೇ ಪಂದ್ಯವು ಸೋಮವಾರ (ಆಗಸ್ಟ್ 28) ಎಸ್ ಕೆ ಎನ್ ಪೇಟ್ರಿಯಾಟ್ಸ್ ಮತ್ತು ಟ್ರಿನ್ ಬಾಗೊ ನೈಟ್ ರೈಡರ್ಸ್ ನಡುವೆ ವಾರ್ನರ್ ಪಾರ್ಕ್‌ನಲ್ಲಿ ನಡೆಯಿತು. ಈ ವೇಳೆ ನೈಟ್ ರೈಡರ್ಸ್ ನಾಯಕ ಕೀರಾನ್ ಪೊಲಾರ್ಡ್ ಮೈದಾನಕ್ಕೆ ನುಗ್ಗಿ ಒಂದೇ ಓವರ್ ನಲ್ಲಿ ದೈತ್ಯ ನಾಲ್ಕು ಸಿಕ್ಸರ್ ಬಾರಿಸಿದ್ದಾರೆ.
ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಟೊಮೇಟೊ ದರ: ಕೆಜಿಗೆ ಕೇವಲ ₹5ಕ್ಕೆ ಕುಸಿತ ಸಾಧ್ಯತೆ!
ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದರೂ, ಅವರ ಬ್ಯಾಟಿಂಗ್ ಇನ್ನೂ ಹಳೆಯ ದಿನಗಳನ್ನು ಮೆಲುಕು ಹಾಕುವಂತೆ ಮಾಡುತ್ತಿದೆ. ಇದರ ಪುರಾವೆಯನ್ನು ಜಗತ್ತು ಮತ್ತೊಮ್ಮೆ ನೋಡಿದೆ.
SKN ಪೇಟ್ರಿಯಾಟ್ಸ್ ವಿರುದ್ಧದ ಈ ಪಂದ್ಯದ ಒಂದು ಓವರ್ ನಲ್ಲಿ, ಪೊಲಾರ್ಡ್ ಒಂದರ ನಂತರ ಒಂದರಂತೆ ನಾಲ್ಕು ದೈತ್ಯಾಕಾರದ ಸಿಕ್ಸರ್ ಗಳನ್ನು ಹೊಡೆದಿದ್ದಾರೆ. ಅವುಗಳಲ್ಲಿ ಮೂರು 100 ಮೀಟರ್ ಗಿಂತ ಹೆಚ್ಚು ದೂರದಲ್ಲಿ ಬಿದ್ದರೆ, ಮತ್ತೊಂದು 95 ಮೀ ದೂರ ಹೋಗಿದೆ. ಈ ದೈತ್ಯ ಸಿಕ್ಸರ್ ವಿಡಿಯೋ ಸಖತ್ ವೈರಲ್ ಆಗಿದೆ.
- 101 meter six.
- 107 meter six.
- 102 meter six.
- 95 meter six.Kieron Pollard smashed 4 sixes in a single over - The brute force. pic.twitter.com/A6qzsynC8l
— Johns. (@CricCrazyJohns) August 28, 2023
ಪೊಲಾರ್ಡ್ ಅವರ ಈ ದೈತ್ಯಾಕಾರದ ಸಿಕ್ಸರ್ ಗಳು ನೈಟ್ ರೈಡರ್ಸ್ ಇನ್ನಿಂಗ್ಸ್ ನ 15 ನೇ ಓವರ್ ನಲ್ಲಿ ಕಂಡುಬಂದವು. ನವೀದ್ ಎಸ್ ಕೆ ಎನ್ ಪರ ಬೌಲಿಂಗ್ ಮಾಡುತ್ತಿದ್ದರು. ನೈಟ್ ರೈಡರ್ಸ್ ಗೆಲುವಿಗೆ 35 ಎಸೆತಗಳಲ್ಲಿ 58 ರನ್ ಗಳಿಸಬೇಕಿದ್ದ ಕಾರಣ ನಾಯಕ ಸ್ವತಃ ಆಕ್ರಮಣಕಾರಿ ಆಟವಾಡಲು ನಿರ್ಧರಿಸಿದರು.
ನವೀದ್ ಅವರ ಓವರ್’ನ ಎರಡನೇ ಎಸೆತದಲ್ಲಿ ಅವರು 101 ಮೀಟರ್ ಸಿಕ್ಸರ್ ಬಾರಿಸಿದರು. ಇದಾದ ನಂತರ ಓವರ್’ನ ಕೊನೆಯ ಮೂರು ಎಸೆತಗಳಲ್ಲಿ ದೈತ್ಯಾಕಾರದ ಸಿಕ್ಸರ್ ಗಳನ್ನು ಸಿಡಿಸಿದರು. ನಾಲ್ಕನೇ ಎಸೆತದಲ್ಲಿ 107 ಮೀಟರ್, ಐದನೇ ಎಸೆತದಲ್ಲಿ 102 ಮೀಟರ್ ಮತ್ತು ಆರನೇ ಎಸೆತದಲ್ಲಿ 95 ಮೀಟರ್ ಬ್ಯಾಕ್ ಟು ಬ್ಯಾಕ್ ಮೂರು ಸಿಕ್ಸರ್’ಗಳು ಹೊರಬಂದವು,
ಇದನ್ನೂ ಓದಿ:ರಾಜ್ಯದ 10 ಜಿಲ್ಲೆಗಳಲ್ಲಿ ಇಂದಿನಿಂದ ಸುರಿಯಲಿದೆ ಭಾರೀ ಮಳೆ: ಜಲಪ್ರಳಯದ ಸೂಚನೆ
ಪೊಲಾರ್ಡ್ 16 ಎಸೆತಗಳಲ್ಲಿ 231.25 ಸ್ಟ್ರೈಕ್ ರೇಟ್’ನಲ್ಲಿ 37 ರನ್ ಗಳಿಸಿದರು. ಅದೇ ಸಮಯದಲ್ಲಿ, ಆಂಡ್ರೆ ರಸೆಲ್ ಕೂಡ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ 8 ಎಸೆತಗಳಲ್ಲಿ 23 ರನ್ ಗಳಿಸಿದರು. ಇದಕ್ಕೂ ಮುನ್ನ ನಿಕೋಲಸ್ ಪೂರನ್ ನೈಟ್ ರೈಡರ್ಸ್ ಪರ 32 ಎಸೆತಗಳಲ್ಲಿ 61 ರನ್ ಬಾರಿಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಅಂತಿಮವಾಗಿ 179 ರನ್ಗಳ ಗುರಿಯನ್ನು ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ನೈಟ್ ರೈಡರ್ಸ್ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ