ಸೆಪ್ಟೆಂಬರ್ 1 ರೊಳಗೆ ಚಿತ್ರತಂಡ ಈ ಕೆಲಸ ಮಾಡದಿದ್ದರೆ ಶಿವಣ್ಣ, ರಜನಿ ಜೈಲರ್ ಸಿನಿಮಾ ಪ್ರದರ್ಶನಕ್ಕೆ ಬೀಳುತ್ತೆ ಬ್ರೇಕ್ !

RCB jersey in Jailer Cinema: ಐಪಿಎಲ್‘ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ಬಳಸಲಾಗಿದೆ ಮತ್ತು ಈ ತಂಡದ ಜೆರ್ಸಿ ಬಳಸಿದ ದೃಶ್ಯಗಳನ್ನು ತೆಗೆದುಹಾಕಲು ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ಆದೇಶಿಸಿದೆ.

Written by - Bhavishya Shetty | Last Updated : Aug 29, 2023, 09:51 AM IST
    • ಭರ್ಜರಿ ಪ್ರದರ್ಶನ ಕಾಣುತ್ತಿದ್ದ ಈ ಚಿತ್ರಕ್ಕೆ ಐಪಿಎಲ್ ಜೆರ್ಸಿಯೇ ಸಂಕಷ್ಟ ತಂದಿಟ್ಟಿದೆ
    • ಜೆರ್ಸಿ ಬಳಸಿದ ದೃಶ್ಯಗಳನ್ನು ತೆಗೆದುಹಾಕಲು ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ಆದೇಶ
    • ಸೆಪ್ಟೆಂಬರ್ 1 ರೊಳಗೆ ಚಿತ್ರದಲ್ಲಿನ ಎಲ್ಲಾ ದೃಶ್ಯಗಳನ್ನು ತೆಗೆದುಹಾಕಲು ಸೂಚನೆ
ಸೆಪ್ಟೆಂಬರ್ 1 ರೊಳಗೆ ಚಿತ್ರತಂಡ ಈ ಕೆಲಸ ಮಾಡದಿದ್ದರೆ ಶಿವಣ್ಣ, ರಜನಿ ಜೈಲರ್ ಸಿನಿಮಾ ಪ್ರದರ್ಶನಕ್ಕೆ ಬೀಳುತ್ತೆ ಬ್ರೇಕ್ ! title=
RCB jersey in Jailer Cinema

RCB jersey in Jailer Cinema: ರಜನಿಕಾಂತ್ ಅಭಿನಯದ ಜೈಲರ್ ಚಿತ್ರಕ್ಕೆ ದೆಹಲಿ ಹೈಕೋರ್ಟ್ ನಿಂದ ಹಿನ್ನಡೆಯಾಗಿದೆ. ಭರ್ಜರಿ ಪ್ರದರ್ಶನ ಕಾಣುತ್ತಿದ್ದ ಈ  ಚಿತ್ರಕ್ಕೆ ಐಪಿಎಲ್ ಜೆರ್ಸಿಯೇ ಸಂಕಷ್ಟ ತಂದಿಟ್ಟಿದೆ. ಈ ಚಿತ್ರದಲ್ಲಿ ಐಪಿಎಲ್‘ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ಬಳಸಲಾಗಿದೆ ಮತ್ತು ಈ ತಂಡದ ಜೆರ್ಸಿ ಬಳಸಿದ ದೃಶ್ಯಗಳನ್ನು ತೆಗೆದುಹಾಕಲು ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ಆದೇಶಿಸಿದೆ.

ಇದನ್ನೂ ಓದಿ: Petrol Price: ದೇಶದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ

ಈ ಚಿತ್ರದಲ್ಲಿ ಶೂಟರ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಜೆರ್ಸಿಯನ್ನು ಧರಿಸಿದ್ದರು. ಜರ್ಸಿಯನ್ನು ಧರಿಸಿರುವ ಚಿತ ದೃಶ್ಯಗಳನ್ನು ತೆಗೆದುಹಾಕಲು ಅಥವಾ ಮಾರ್ಪಡಿಸುವಂತೆ ಹೈಕೋರ್ಟ್ ಚಲನಚಿತ್ರ ನಿರ್ಮಾಪಕರಿಗೆ ಸೂಚಿಸಿದೆ.

ಸೆಪ್ಟೆಂಬರ್ 1 ರವರೆಗೆ ಸಮಯ!

ಸೆಪ್ಟೆಂಬರ್ 1 ರೊಳಗೆ ಚಿತ್ರದಲ್ಲಿನ ಎಲ್ಲಾ ದೃಶ್ಯಗಳನ್ನು ತೆಗೆದುಹಾಕಲು ಅಥವಾ ಮಾರ್ಪಡಿಸಲು ಚಲನಚಿತ್ರ ನಿರ್ಮಾಪಕರಿಗೆ ಹೈಕೋರ್ಟ್ ಸೂಚಿಸಿದೆ. ಐಪಿಎಲ್ ತಂಡ ಕೋರ್ಟ್‌’ಗೆ ಅರ್ಜಿ ಸಲ್ಲಿಸಿದ್ದು, ಚಿತ್ರದಲ್ಲಿ ಆರ್‌’ಸಿಬಿ ಜೆರ್ಸಿ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಚಿತ್ರದಲ್ಲಿ ಗುತ್ತಿಗೆ ಹಂತಕನೊಬ್ಬ ಆರ್‌’ಸಿಬಿ ಜೆರ್ಸಿ ಧರಿಸಿದ್ದಾನೆ. ಜೆರ್ಸಿಯನ್ನು ನೆಗೆಟಿವ್ ಆಗಿ ಬಳಸಲಾಗಿದೆ ಎಂದು ಆರ್‌ಸಿಬಿ ತನ್ನ ಅರ್ಜಿಯಲ್ಲಿ ತಿಳಿಸಿದ್ದು, ಚಿತ್ರದಲ್ಲಿ ಜೆರ್ಸಿ ಬಳಸುವ ಮುನ್ನ ತಂಡದ ಒಪ್ಪಿಗೆ ಪಡೆದಿಲ್ಲ. ಇದು ತನ್ನ ಬ್ರ್ಯಾಂಡ್ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಆರ್‌ಸಿಬಿ ಹೇಳಿದೆ.

ಇದನ್ನೂ ಓದಿ: ಒಂದು ಓವರ್’ನಲ್ಲಿ 100ಕ್ಕೂ ಹೆಚ್ಚು ಮೀಟರ್ ದೂರಕ್ಕೆ 4 ದೈತ್ಯ ಸಿಕ್ಸರ್ ಬಾರಿಸಿದ ಆಟಗಾರ! ವಿಡಿಯೋ

ಈ ವಿಚಾರದಲ್ಲಿ ಚಿತ್ರ ನಿರ್ಮಾಪಕರು ಮತ್ತು RCB ನಡುವೆ ಮಾತುಕತೆ ನಡೆದಿದ್ದು, ಸಿನಿಮಾದಲ್ಲಿನ ದೃಶ್ಯವನ್ನು ಸುಧಾರಿಸಲು ಚಿತ್ರ ನಿರ್ಮಾಪಕರು ಸಿದ್ಧರಾಗಿದ್ದಾರೆ. RCB ಯ ಜೆರ್ಸಿಯಂತೆ ಕಾಣದ ರೀತಿಯಲ್ಲಿ ದೃಶ್ಯವನ್ನು ಬದಲಾಯಿಸುವುದಾಗಿ ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಚಿತ್ರ ಆಗಸ್ಟ್ 10 ರಂದು ಬಿಡುಗಡೆಯಾಗಿದ್ದು, ಇದುವರೆಗೆ ವಿಶ್ವದಾದ್ಯಂತ 600 ಕೋಟಿಗೂ ಹೆಚ್ಚು ಗಳಿಸಿದೆ. ಗಳಿಕೆಯಲ್ಲಿ ಇದು ರಜನಿಕಾಂತ್ ಅವರ ವೃತ್ತಿಜೀವನದ ಎರಡನೇ ದೊಡ್ಡ ಚಿತ್ರವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News