ICC World Cup 2023: ಈಗಾಗಲೇ ವಿಶ್ವಕಪ್ ಮಹಾ ಟೂರ್ನಿ ಪ್ರಾರಂಭವಾಗಿದೆ, ಈ ಕ್ರೀಡಾ ಹಬ್ಬಕ್ಕೆ ಭಾರತವೇ ಸಂಪೂರ್ಣ ಆತಿಥ್ಯ ವಹಿಸಿದೆ. ಇನ್ನು ಅಕ್ಟೋಬರ್ 8ರಂದು ಅಂದರೆ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023ರಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಳುಗಳ ಸಂಪೂರ್ಣ ವಿವರ ಇಲ್ಲಿದೆ


ಇನ್ನು ಈ ವಿಶ್ವ ಟೂರ್ನಿ ಪ್ರಾರಂಭಕ್ಕೂ ಮುನ್ನವೇ ಖ್ಯಾತ ಜ್ಯೋತಿಷಿ ಒಬ್ಬರು ಯಾವ ತಂಡ ಈ ಬಾರಿ ಟ್ರೋಫಿ ಗೆಲ್ಲಲಿದೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ.


12 ವರ್ಷಗಳ ಹಿಂದೆ ಎಂ ಎಸ್ ಧೋನಿ ನಾಯಕತ್ವದ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿತ್ತು. ಆ ಬಳಿಕ ಎರಡು ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರೂ, ಫೈನಲ್ ಕನಸು ನನಸಾಗಿರಲಿಲ್ಲ. ಇದೀಗ ಮತ್ತೆ ಅವಕಾಶ ಬಂದಿದ್ದು, ವಿಶ್ವಕಪ್‌ ಗೆಲ್ಲಲು ಭಾರತ ತಂಡ ಕಸರತ್ತು ಮಾಡುತ್ತಿದೆ.


ಇನ್ನು ಈ ಎಲ್ಲದರ ಮಧ್ಯೆ ಖ್ಯಾತ ಜ್ಯೋತಿಷಿಯೊಬ್ಬರು ವಿಶ್ವಕಪ್ ಗೆಲ್ಲಲಿರುವ ತಂಡವನ್ನು ಲೆಕ್ಕಾಚಾರ ಮಾಡಿ ಹೇಳಿದ್ದಾರೆ. ವೈಜ್ಞಾನಿಕ ಜ್ಯೋತಿಷಿ ಎಂದೇ ಖ್ಯಾತಿ ಪಡೆದಿರುವ ಸ್ಟೋನ್ ಲೋಬೋ, ಈ ಬಾರಿ ಭಾರತ ವಿಶ್ವಕಪ್ ಪ್ರಶಸ್ತಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ YouTube ಚಾನೆಲ್‌’ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.


ಇನ್ನು ಈ ಟ್ರೋಫಿ ಗೆಲ್ಲಲು ಪ್ರಮುಖವಾಗಿ ಕಾರಣವಾಗುತ್ತಿರುವುದು  ರೋಹಿತ್ ಶರ್ಮಾ ಅವರ ಜಾತಕ ಎಂದು ಹೇಳಿದ್ದಾರೆ. 1987ರಲ್ಲಿ ರೋಹಿತ್ ಶರ್ಮಾ ಹುಟ್ಟಿದ್ದು, 1987ರಲ್ಲಿ ಜನಿಸಿದವರು ಯಾವ ತಂಡದ ನಾಯಕರಾಗಿರೋ, ಆ ತಂಡ 2023ರ ವಿಶ್ವಕಪ್ ಟ್ರೋಫಿ ಗೆಲ್ಲುತ್ತದೆ. ಇನ್ನು ಕ್ರೀಡಾ ತಂಡಗಳ ನಾಯಕರಾಗಿ 1986 ಮತ್ತು 1987 ರಲ್ಲಿ ಜನಿಸಿದ ಆಟಗಾರರ ಸಾಧನೆಗಳನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ.


ಇದನ್ನೂ ಓದಿ:  ಒಂದು ಎಸೆತ, ಎರಡು ಪ್ರತ್ಯೇಕ ದಾಖಲೆಗಳು… ಇತಿಹಾಸ ರಚಿಸಿಯೇ ಬಿಟ್ರು ವಿರಾಟ್-ಬುಮ್ರಾ!


ಇನ್ನು ಈ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಯಾಗೆ ವಿಶ್ವಕಪ್ ಗೆಲ್ಲುವ ಅವಕಾಶವಿಲ್ಲ ಎಂದು ಗ್ರೀನ್ ಸ್ಟೋನ್ ಲೋಬೊ ಹೇಳಿದ್ದಾರೆ. ಆದರೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮಾರ್ಚ್ 24, 1987ರಂದು ಜನಿಸಿದರೆ, ಭಾರತದ ನಾಯಕ ರೋಹಿತ್ ಶರ್ಮಾ ಏಪ್ರಿಲ್ 30, 1987 ರಂದು ಜನಿಸಿದ್ದಾರೆ. ಅಂದರೆ ಈ ಎರಡು ತಂಡಗಳಲ್ಲಿ ಒಂದು ವಿಶ್ವ ಚಾಂಪಿಯನ್ ಆಗಬಹುದು ಎಂಬುದು ಅವರ ಭವಿಷ್ಯವಾಣಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.