Rinku Singh: ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ "ಫಿನಿಶರ್ ರಿಂಗು ಸಿಂಗ್" ತಮ್ಮ ಸಾಹಸ ಪ್ರದರ್ಶಿಸಿದ್ದಾರೆ. 22 ಎಸೆತಗಳನ್ನಾಡಿದ ರಿಂಕು 48 ರನ್ ಗಳಿಸಿ ಜಿಂಬಾಬ್ವೆ ತಂಡವನ್ನು ಉನ್ಮಾದಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಿಂಕು ಈ ಪಂದ್ಯದಲ್ಲಿ 218 ಸ್ಟ್ರೈಕ್ ರೇಟ್  ಹೊಂದಿದ್ದರು. 


COMMERCIAL BREAK
SCROLL TO CONTINUE READING

16ನೇ ಓವರ್‌ನಿಂದ 20ನೇ ಓವರ್‌ವರೆಗೆ ಡೆತ್ ಓವರ್‌ಗಳು ಎಂದು ಕರೆಯಲ್ಪಡುವ ಕೊನೆಯ ಐದು ಓವರ್‌ಗಳಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಿಂಕು ಸಿಂಗ್‌ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ರಿಂಕು ಸಿಂಗ್ ಅವರು ಅತಿ ಕಡಿಮೆ ಅವಧಿಯಲ್ಲಿ ಭಾರತ ತಂಡದ ಅತ್ಯುತ್ತಮ ಫಿನಿಶರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.


ಕೊನೆಯ 5 ಓವರ್‌ಗಳಲ್ಲಿ ಕನಿಷ್ಠ 250 ರನ್ ಗಳಿಸಿದ ಆಟಗಾರರನ್ನು ಮಾತ್ರ ತೆಗೆದುಕೊಂಡರೆ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರ ಪಟ್ಟಿಯಲ್ಲಿ 228 ಸ್ಟ್ರೈಕ್ ರೇಟ್‌ನೊಂದಿಗೆ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. 


ಇದನ್ನೂ ಓದಿ: ಭಾರತ ತಂಡಕ್ಕೆ ಮುಂದಿನ ಕೋಚ್‌ ಗೌತಮ್‌ ಗಂಭೀರ್‌..? ಸುಳಿವು ಕೊಟ್ಟಿದ್ದು ಅದೊಂದು ನಡೆ..!


ಕಳೆದ ಪಂದ್ಯದಲ್ಲಿ ಡಕ್ ಔಟ್ ಆದ ರಿಂಕು ಸಿಂಗ್‌ ಎರಡನೇ ಪಂದ್ಯದಲ್ಲಿ ಸಾಹಸಮಯ ಆಟವಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಕೊನೆಯ 2 ಓವರ್ ಗಳಲ್ಲಿ ಬರೋಬ್ಬರಿ ನಾಲ್ಕು ಸಿಕ್ಸರ್ ಬಾರಿಸಿರುವ ಮೂಲಕ ಭರ್ಜರಿ ಆಟ ಪ್ರದರ್ಶಿಸಿದರು. ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಹಿಂದಿನ ತಲೆಮಾರಿನ ಏಕೈಕ ಆಟಗಾರ ಯುವರಾಜ್ ಸಿಂಗ್ ಎಂಬುದು ಗಮನಾರ್ಹ. ಭಾರತ ತಂಡದ ಬೆಸ್ಟ್ ಫಿನಿಶರ್ ಎಂದು ಹೇಳಲಾಗುವ ಧೋನಿ ಈ ಪಟ್ಟಿಯಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆಯದಿರುವುದು ಅನೇಕರಿಗೆ ಅಚ್ಚರಿ ಮೂಡಿಸಬಹುದು.


ಆದರೆ ಕೊನೆಯ 5 ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯನ್ನು ನೋಡಿದಾಗ ವಿರಾಟ್ ಕೊಹ್ಲಿ 1032 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಧೋನಿ 1014 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕೊನೆಯ ಐದು ಓವರ್‌ಗಳಲ್ಲಿ ಧೋನಿ ಸ್ಟ್ರೈಕ್ ರೇಟ್ ಕೇವಲ 152 ಆಗಿದೆ. ಅವರ ಸ್ಟ್ರೈಕ್ ರೇಟ್ ಕಡಿಮೆಯಾದರೂ ಹೆಚ್ಚು ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.