FIFA World Cup Final: ಅರ್ಜೆಂಟೀನಾ ಫುಟ್ಬಾಲ್ ಚಾಂಪಿಯನ್ ಎನಿಸಿಕೊಂಡಿದೆ. ಭಾನುವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಸೋಲಿಸಿದೆ. ಹೆಚ್ಚುವರಿ ಸಮಯದ ನಂತರ ಎರಡೂ ತಂಡಗಳು 3-3ರಲ್ಲಿ ಸಮಬಲಗೊಂಡವು. ಇದಾದ ಬಳಿಕ ಪೆನಾಲ್ಟಿ ಶೂಟೌಟ್ ನಿಂದ ನಿರ್ಧಾರ ಕೈಗೊಳ್ಳಲಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Argentina vs France FIFA World Cup 2022 final : ವ್ಯರ್ಥವಾದ ಎಂಬಪ್ಪೆ ಹ್ಯಾಟ್ರಿಕ್ ಶ್ರಮ, ಅರ್ಜೆಂಟೈನಾಗೆ ವಿಶ್ವ ಚಾಂಪಿಯನ್ ಪಟ್ಟ


ಆದರೆ ಫ್ರಾನ್ಸ್ ಸೋಲಿನ ನಂತರ, ಆ ದೇಶದಲ್ಲಿ ಗಲಭೆಗಳು ಭುಗಿಲೆದ್ದವು. ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದರು. ವಾಹನಗಳಿಗೆ ಬೆಂಕಿ ಹಚ್ಚಿ, ಗಲಭೆ ಎಬ್ಬಿಸಿದರು. ಇನ್ನು ಇದೇ ಸಂದರ್ಭದಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.


ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅವರ ಮೇಲೆ ಅಶ್ರುವಾಯು ಪ್ರಯೋಗಿಸಿದರು. ಪ್ಯಾರಿಸ್, ಲಿಯಾನ್ ಮತ್ತು ನೈಸ್‌ನಂತಹ ನಗರಗಳಲ್ಲಿ ಫುಟ್‌ಬಾಲ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ದಿ ಸನ್‌ನಲ್ಲಿನ ವರದಿಯ ಪ್ರಕಾರ, ಪೊಲೀಸರು ಮತ್ತು ಪ್ರತಿಭಟನಾಕಾರ ನಡುವೆ ಘರ್ಷಣೆ ನಡೆದಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ.


ಫೈನಲ್ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಫುಟ್ಬಾಲ್ ಅಭಿಮಾನಿಗಳು ಫ್ರಾನ್ಸ್‌ನ ವಿವಿಧ ನಗರಗಳಲ್ಲಿನ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಜಮಾಯಿಸಿದ್ದರು. ಆದರೆ ಪ್ಯಾರಿಸ್ ಸೇರಿದಂತೆ ಅನೇಕ ನಗರಗಳು ದೊಡ್ಡ ಪರದೆಯಲ್ಲಿ ಪಂದ್ಯವನ್ನು ಪ್ರಸಾರ ಮಾಡಲು ನಿರಾಕರಿಸಿದ್ದವು. ಫುಟ್ಬಾಲ್ ಜಗತ್ತಿನ ಹೊಸ ಚಕ್ರವರ್ತಿ ಫ್ರಾನ್ಸ್ ಆಗಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಸಾಗಿತು. ಅಲ್ಲಿ ಫ್ರಾನ್ಸ್ 4–2 ರಲ್ಲಿ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ವಿರುದ್ಧ ಸೋತಿತು. ಇದಾದ ಬಳಿಕ ಅಭಿಮಾನಿಗಳು ತಾಳ್ಮೆ ಕಳೆದುಕೊಂಡು ಹಲವು ನಗರಗಳಲ್ಲಿ ಗಲಭೆಯಂತಹ ಸನ್ನಿವೇಶ ಸೃಷ್ಟಿ ಮಾಡಿದರು.


ಲಿಯಾನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತು. ನಂತರ ಪೊಲೀಸರು ಪ್ರತಿಭಟನಾಕಾರ ಅಭಿಮಾನಿಗಳ ಮೇಲೆ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ಯಾರಿಸ್ ಮತ್ತು ಲಿಯಾನ್ ಬೀದಿಗಳಲ್ಲಿಮ ಗಲಭೆಯ ವೀಡಿಯೊಗಳನ್ನು ತನ್ನ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಪೊಲೀಸರ ಅಶ್ರುವಾಯು ಶೆಲ್‌ಗಳಿಂದ ಜನರು ಓಡಿಹೋಗುತ್ತಿರುವುದು ಕಂಡು ಬರುತ್ತಿದೆ.


ಇದನ್ನೂ ಓದಿ:  FIFA World Cup 2022: ವಿಶ್ವಕಪ್ ಫುಟ್ಬಾಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಮೆಸ್ಸಿ..!


ವರದಿಯ ಪ್ರಕಾರ, ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿಗಳನ್ನು ಸಹ ಬಳಸಿದ್ದಾರೆ. ಲಿಯಾನ್ ನಗರದಲ್ಲಿ ಹತ್ತಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ನೈಸ್ ನಗರದಲ್ಲಿಯೂ ಹಿಂಸಾಚಾರ ನಡೆದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.