India vs Bangladesh, 1st Test Match: ನಾಲ್ಕು ವಿಕೆಟ್ ಆಧಾರದಲ್ಲಿ ಕಣಕ್ಕಿಳಿದಿದ್ದ ಬಾಂಗ್ಲಾದೇಶಕ್ಕೆ ಸೋಲಿನ ರುಚಿಯನ್ನು ಟೀಂ ಇಂಡಿಯಾ ತೋರಿಸಿದೆ. ಇಂದು ನಡೆದ ಮೊದಲ ಟೆಸ್ಟ್ ಪಂದ್ಯದ 5ನೇ ದಿನದಾಟದಲ್ಲಿ ಭಾರತಕ್ಕೆ 188 ರನ್ ಗಳ ಭರ್ಜರಿ ಜಯ ಸಿಕ್ಕಿದೆ. ಸದ್ಯ ಎರಡು ಸರಣಿಗಳ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: FIFA 2022 Finalಗೂ ಮುನ್ನ ಉಭಯ ತಂಡಗಳ ನಡುವೆ ವಾಗ್ವಾದ: ಮೆಸ್ಸಿಯ ಬಗ್ಗೆ ಫ್ರಾನ್ಸ್ ನೀಡಿತು ಈ ಹೇಳಿಕೆ
ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ನಲ್ಲಿ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾ 404 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ಕೇವಲ 150 ರನ್‌ಗಳಿಗೆ ಆಲ್ ಔಟ್ ಆಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 254 ರನ್ ಗಳ ಲೀಡ್ ಸಾಧಿಸಿತು. ಇನ್ನು ಈ ಪಂದ್ಯದಲ್ಲಿ ಕುಲದೀಪ್ ಯಾದವ್ 40 ರನ್ ಗೆ ಐದು ವಿಕೆಟ್ ಪಡೆದಿದ್ದರು. ಚೇತೇಶ್ವರ್ ಪೂಜಾರ 90 ರನ್ ಕಲೆ ಹಾಕಿದ್ದಾರೆ.
ಈ ಬಳಿಕ ಕೆಎಲ್ ರಾಹುಲ್ ನೇತೃತ್ವದ ತಂಡವು 2 ವಿಕೆಟ್‌ಗೆ 258 ರನ್‌ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಬಾಂಗ್ಲಾದೇಶಕ್ಕೆ 513 ರನ್ ಗುರಿಯನ್ನು ನಿಗದಿಪಡಿಸಿತು. ಶಕೀಬ್ ಅಲ್ ಹಸನ್ ತಮ್ಮ 84 ರನ್‌ಗಳ ನಾಕ್‌ನೊಂದಿಗೆ ಉತ್ತಮ ಲಯ ಕಂಡುಕೊಂಡರೂ ಸಹ, ಜೊತೆಯಿದ್ದ ಆಟಗಾರರ ಬೆಂಬಲ ಸಿಕ್ಕಿರಲಿಲ್ಲ. ಈ ಕಾರಣದಿಂದ ಭಾರತವು ಬಾಂಗ್ಲಾವನ್ನು 324 ರನ್ ಗೆ ಕಟ್ಟಿಹಾಕಿತು. ಅಕ್ಸರ್ ಪಟೇಲ್ ಅಂತಿಮ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದರೆ, ಕುಲದೀಪ್ ಮೂರು ವಿಕೆಟ್ ಕಬಳಿಸಿದರು.
ಸದ್ಯ ಈ ಪಂದ್ಯವನ್ನು ಭಾರತ 188 ರನ್‌ಗಳಿಂದ ಗೆದ್ದಿದೆ. ಬಾಂಗ್ಲಾ 324ಕ್ಕೆ ಆಲೌಟ್ ಆಗಿದ್ದು, ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಅಕ್ಷರ್ ಬಾಂಗ್ಲಾದ ನಾಲ್ಕು ವಿಕೆಟ್ ಉರುಳಿಸಿದರೆ, ಕುಲದೀಪ್ ಮೂರು ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆ ಈ ಟೆಸ್ಟ್ ನಲ್ಲಿ ಕುಲದೀಪ್ 8 ವಿಕೆಟ್ ಪಡೆದಿದ್ದಾರೆ.
ಎರಡನೇ ಇನ್ನಿಂಗ್ಸ್ ನಲ್ಲಿ ಅಕ್ಸರ್ ಪಟೇಲ್ 77 ರನ್ ಗೆ 4 ವಿಕೆಟ್ ಮತ್ತು ಕುಲದೀಪ್ ಯಾದವ್ 73 ರನ್ ಗೆ 3 ವಿಕೆಟ್ ಕಿತ್ತಿದ್ದಾರೆ. ಭಾರತವು ಅಂತಿಮ ದಿನದಂದು 50 ನಿಮಿಷಗಳಲ್ಲಿ ಪಂದ್ಯವನ್ನು ಮುಕ್ತಾಯಗೊಳಿಸಿದೆ. ವೈಡ್ ಎಸೆತವನ್ನು ಬೆನ್ನಟ್ಟಿದ ಮೆಹಿದಿಯನ್ನು ಸಿರಾಜ್ ಔಟ್ ಮಾಡಿದರು. ಮೊದಲಿಗೆ ಶಕೀಬ್ ಭಾರತೀಯ ಬೌಲರ್‌ಗಳನ್ನು ಬೆಂಡಾಗಿಸಲು ಪ್ರಯತ್ನಿಸಿ, ಬೌಂಡರಿಗಳ ಸುರಿಮಳೆಯನ್ನು ಹೊಡೆದರು. ಆದರೆ = ಅಂತಿಮವಾಗಿ ಕುಲದೀಪ್ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿ 84 ರನ್ ಗೆ ಔಟಾದರು.
ಇದನ್ನೂ ಓದಿ: IND vs BAN: ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ರೋಹಿತ್ ಟೀಂ ಇಂಡಿಯಾಗೆ ಎಂಟ್ರಿ ಯಾವಾಗ ಗೊತ್ತಾ?
ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಕಂಡ ಭಾರತ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.