FIFA World Cup 2022: ವಿಶ್ವಕಪ್ ಫುಟ್ಬಾಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಮೆಸ್ಸಿ..!

 

Written by - Zee Kannada News Desk | Last Updated : Dec 18, 2022, 10:33 PM IST
  • ಏಂಜೆಲ್ ಡಿ ಮರಿಯಾ ಬಾರಿಸಿದ ಗೋಲಿನಿಂದ ಅರ್ಜೆಂಟೈನಾ 2-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿತು.
  • ವಿಶ್ವಕಪ್ ನಲ್ಲಿ ಮೆಸ್ಸಿ ಒಟ್ಟಾರೆಯಾಗಿ 20 ಗೋಲ್ ಗಳನ್ನು ಗಳಿಸಿದರು
  • ಆ ಮೂಲಕ 1966ರ ನಂತರ ಆಟಗಾರನೊಬ್ಬ 20 ಅಥವಾ ಅದಕ್ಕಿಂತ ಹೆಚ್ಚು ಗೋಲುಗಳಲ್ಲಿ ತೊಡಗಿರುವುದು ಇದೇ ಮೊದಲು.
FIFA World Cup 2022: ವಿಶ್ವಕಪ್ ಫುಟ್ಬಾಲ್ ನಲ್ಲಿ ನೂತನ ದಾಖಲೆ ನಿರ್ಮಿಸಿದ ಮೆಸ್ಸಿ..! title=
file photo

ಕತಾರ್: ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ 2022 ರ ಫಿಫಾ ವಿಶ್ವಕಪ್‌ನ ಗ್ರೂಪ್ ಹಂತ, ರೌಂಡ್ ಆಫ್ 16, ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಫ್ರಾನ್ಸ್ ವಿರುದ್ಧದ ಫೈನಲ್‌ನ 23 ನೇ ನಿಮಿಷದಲ್ಲಿ ಮೆಸ್ಸಿಯ ಅರ್ಜೆಂಟೀನಾಗೆ ಪೆನಾಲ್ಟಿ ನೀಡಲಾಯಿತು. ಭಾನುವಾರ ಇಲ್ಲಿ ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪೆನಾಲ್ಟಿ ಅವಕಾಶವನ್ನು ಪಡೆದ ಮೆಸ್ಸಿ ಗೋಲ್ ಆಗಿ ಪರಿವರ್ತಿಸುವ ಮೂಲಕ ತಂಡಕ್ಕೆ 1-0 ಅಂತರದ ಮುನ್ನಡೆಗೆ ಕಾರಣರಾದರು.

ನಂತರ ಏಂಜೆಲ್ ಡಿ ಮರಿಯಾ ಬಾರಿಸಿದ ಗೋಲಿನಿಂದ ಅರ್ಜೆಂಟೈನಾ 2-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿತು.ವಿಶ್ವಕಪ್ ನಲ್ಲಿ ಮೆಸ್ಸಿ ಒಟ್ಟಾರೆಯಾಗಿ 20 ಗೋಲ್ ಗಳನ್ನು ಗಳಿಸುವ ಮೂಲಕ 1966ರ ನಂತರ ಆಟಗಾರನೊಬ್ಬ 20 ಅಥವಾ ಅದಕ್ಕಿಂತ ಹೆಚ್ಚು ಗೋಲುಗಳಲ್ಲಿ ತೊಡಗಿರುವುದು ಇದೇ ಮೊದಲು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

Trending News