ನವದೆಹಲಿ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ಗೆಲುವಿನಲ್ಲಿಲ್ಲಿ ಮಹತ್ವದ ಪಾತ್ರವಹಿಸಿದ ರಿಷಬ್ ಪಂತ್  ವಿಚಾರವಾಗಿ ಪ್ರಸ್ತಾಪಿಸುತ್ತಾ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಪಂತ್ ಧೋನಿಗಿಂತಲೂ ಉತ್ತಮ ವಿಕೆಟ್ ಕೀಪರ್ ಆಗಬಲ್ಲರು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭುಜದ ಗಾಯದಿಂದಾಗಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿದ ನಂತರ ರಿಶಬ್ ಪಂತ್ (Rishabh Pant) ರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ.ಇದೇ ವೇಳೆ ಭಾರತ ತಂಡದ  ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಪಂತ್ ಭವಿಷ್ಯದಲ್ಲಿ ತಂಡದ ಸಂಭಾವ್ಯ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: IPL 2021: ಈ ಆಟಗಾರನ ಹೆಗಲಿಗೆ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ


ಈ ಎಲ್ಲಾ ಪ್ರಶಂಸೆಗಳ ಮಧ್ಯೆ, ಭಾರತದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅವರು ಮಾಜಿ ಭಾರತದ ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂ.ಎಸ್.ಧೋನಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು ಎಂದು ಹೇಳಿದ್ದಾರೆ.


ಇದನ್ನೂ ಓದಿ: Saba Karim: 'ಭಾರತ ತಂಡಕ್ಕೆ ಇಬ್ಬರು‌ ಧೋನಿ ಸಿಗಲಿದ್ದಾರಂತೆ'


ಸ್ಟಾರ್ ಸ್ಪೋರ್ಟ್ಸ್ ಗೇಮ್ ಪ್ಲ್ಯಾನ್ ಕುರಿತು ಮಾತನಾಡಿದ ಪಾರ್ಥಿವ್, "ರಿಷಭ್ ಪಂತ್ ಅವರು ಸಾಕಷ್ಟು ಆತ್ಮ ವಿಶ್ವಾಸವನ್ನು ಹೊಂದಿದ್ದಾರೆ ಟಿ 20  ಆಟವಾಡುವ ಸಂದರ್ಭದಲ್ಲಿ ಇದು ಆಟಗಾರನಿಗೆ ಬೇಕಾಗುತ್ತದೆ. ಅವರು ಸ್ವತಃ ಅದ್ಭುತ ಆಟಗಾರ.ಅವರು ಎಂ.ಎಸ್.ಧೋನಿಯಂತೆ ಇರುವ ಬಗ್ಗೆ ಚಿಂತಿಸಬೇಕಾಗಿಲ್ಲ.ಅವರು ಎಂ.ಎಸ್.ಧೋನಿಗಿಂತ ಉತ್ತಮರಾಗಬಹುದು ಅಥವಾ ಅವರು ಪ್ರತಿ ಸಮಯದಲ್ಲೂ ತಮ್ಮದೇ ಆದ ಪಂದ್ಯಗಳನ್ನು ಗೆಲ್ಲಬಹುದು.ಆದ್ದರಿಂದ, ರಿಷಭ್ ಪಂತ್ ಅವರು ದೆಹಲಿ ಕ್ಯಾಪಿಟಲ್ಸ್ ನೇತೃತ್ವದ ಕೀಯನ್ನು ಹಿಡಿದಿಟ್ಟುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.