IND vs NZ, 1st Test: ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 4ನೇ ದಿನದಂದು ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೇವಲ 1 ರನ್​ನಿಂದ ಶತಕ ವಂಚಿತರಾಗಿದ್ದಾರೆ. ಟಿಮ್ ಸೌಥಿಯ 87ನೇ ಓವರ್‌ನ 3ನೇ ಎಸೆತದಲ್ಲಿ 107 ಮೀಟರ್‌ ಸಿಕ್ಸ್‌ ಭಾರಿಸಿದ ಪಂತ್‌, ಲಿಯಂ ಓ'ರೂರ್ಕ್ ಎಸೆದ 89ನೇ ಓವರ್‌ನ ಮೊದಲ ಎಸೆತವನ್ನು ಡಿಫೆಂಡ್‌ ಮಾಡುವ ಯತ್ನದಲ್ಲಿ ಬೌಲ್ಡ್‌ ಆದರು. 


COMMERCIAL BREAK
SCROLL TO CONTINUE READING

ಕೇವಲ 1 ರನ್‌ಗಳಿಂದ ಶತಕ ವಂಚಿತನಾದ ಪಂತ್‌ 99 ರನ್‌ ಗಳಿಸಿ ಭಾರದ ನೋವಿನಿಂದಲೇ ಪೆವಿಲಿಯನ್‌ ಸೇರಿದರು. ಈ ವೇಳೆ ಡ್ರೆಸ್ಸಿಂಗ್‌ ರೂಂನಲ್ಲಿದ್ದ ಎಲ್ಲಾ ಆಟಗಾರರ ಮೊಗದಲ್ಲಿ ನಿರಾಸೆ ಕಂಡುಬಂತು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಸಹ ನಿರಾಸೆ ಅನುಭವಿಸಿದರು. ಕ್ರೀಸ್‌ನಲ್ಲಿದ್ದ ಕೆ.ಎಲ್.ರಾಹುಲ್‌ ಸಹ ಬೇಸರ ವ್ಯಕ್ತಪಡಿಸಿದರು. 


IND vs NZ: ಡಕೌಟ್‌ ಆದ ನಂತರವೂ ಶತಕ ಭಾರಿಸಿ ದಾಖಲೆ ಸೃಷ್ಟಿಸಿದ ಭಾರತ ತಂಡದ ಆಟಗಾರ..ಅಪರೂಪದ ಸಾಧನೆ ಮಾಡಿದ ಸರ್ಫರಾಜ್ ಖಾನ್!


ಮಾಸ್ಟರ್‌ ಬ್ಲ್ಯಾಸ್ಟರ್‌ ಸಚಿನ್ ತೆಂಡೂಲ್ಕರ್‌ಗೆ ವೃತ್ತಿ ಜೀವನದುದ್ದಕ್ಕೂ ಕಾಡಿದ್ದ ʼನರ್ವಸ್ 90ʼ ಭೂತ ಇದೀಗ ಪಂತ್ ಹೆಗಲೆರಿದೆ. ಸಚಿನ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀನವದಲ್ಲಿ ಒಟ್ಟು 10 ಬಾರಿ ನರ್ವಸ್ 90ಗೆ ಬಲಿಯಾಗಿದ್ದರೆ, ಪಂತ್ 7 ಬಾರಿ ಶತಕದಂಚಿನಲ್ಲಿ ಎಡವಿದ್ದಾರೆ. 


ಭಾರತ 93 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡಿದ್ದು, 441 ರನ್‌ ಗಳಿಸಿದೆ. ಈ ಮೂಲಕ 85 ರನ್‌ಗಳ ಮುನ್ನಡೆ ಸಾಧಿಸಿದೆ.  


ಇದನ್ನೂ ಓದಿ: IPL 2025: RCB ತಂಡ ಸೇರಲು ಕೇಳಿದ ಅಭಿಮಾನಿಗೆ ರೋಹಿತ್‌ ಶರ್ಮಾ ನೀಡಿದ ಉತ್ತರ ಇದು! ಬೆಂಗಳೂರು ಬಾಯ್ಸ್‌ಗೆ ಬಂದಂಗಾಯ್ತು ಆನೆಬಲ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.