IND vs NZ: ಡಕೌಟ್‌ ಆದ ನಂತರವೂ ಶತಕ ಭಾರಿಸಿ ದಾಖಲೆ ಸೃಷ್ಟಿಸಿದ ಭಾರತ ತಂಡದ ಆಟಗಾರ..ಅಪರೂಪದ ಸಾಧನೆ ಮಾಡಿದ ಸರ್ಫರಾಜ್ ಖಾನ್!

Sarfaraj khan: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಅಪರೂಪದ ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್ ಖಾನ್ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. 110 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಟೆಸ್ಟ್ ಮಾದರಿಯಲ್ಲಿ ಸರ್ಫರಾಜ್ ಖಾನ್ ಅವರ ಮೊದಲ ಶತಕವಾಗಿದೆ. ಶುಭಮನ್ ಗಿಲ್ ಗಾಯಗೊಂಡ ನಂತರ ಅನಿರೀಕ್ಷಿತವಾಗಿ ತಂಡಕ್ಕೆ ಬಂದ ಸರ್ಫರಾಜ್ ಖಾನ್ ಮೊದಲ ಇನ್ನಿಂಗ್ಸ್‌ನಲ್ಲಿ ಡಕೌಟ್‌ ಆಗಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಸಮಯದಲ್ಲಿ ಶತಕ ಸಿಡಿಸಿ ಅಪರೂಪದ ಸಾಧನೆ ಮಾಡಿದರು.
 
IND vs NZ: ಡಕೌಟ್‌ ಆದ ನಂತರವೂ ಶತಕ ಭಾರಿಸಿ ದಾಖಲೆ ಸೃಷ್ಟಿಸಿದ ಭಾರತ ತಂಡದ ಆಟಗಾರ..ಅಪರೂಪದ ಸಾಧನೆ ಮಾಡಿದ ಸರ್ಫರಾಜ್ ಖಾನ್!
Source: Bureau

About the Author