Rishabh Pant Update: ಕಳೆದ ಒಂದು ವರ್ಷದಿಂದ ಭಾರತದ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಈಗ ರೋಹಿತ್ ಶರ್ಮಾ ಮತ್ತು ತಂಡದ ಗಮನವು 2024 ರ ಟಿ 20 ವಿಶ್ವಕಪ್ ಮೇಲೆ ಕೇಂದ್ರೀಕೃತವಾಗಿದೆ. ಈ ಕಾರಣದಿಂದಾಗಿ ಬ್ಲೂ ಆರ್ಮಿ ಸಿದ್ಧತೆ ನಡೆಸಿತ್ತಿದೆ. ಆದರೆ 2023ರ ಏಕದಿನ ವಿಶ್ವಕಪ್‌ನಲ್ಲಿ ಎದುರಾಳಿ ತಂಡಕ್ಕೆ ಆಪತ್ತು ನೀಡಿದ್ದ ಮೊಹಮ್ಮದ್ ಶಮಿ, ಟಿ20 ವಿಶ್ವಕಪ್‌’ನಿಂದ ಹೊರಗುಳಿದಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.


COMMERCIAL BREAK
SCROLL TO CONTINUE READING

ವಿಶ್ವಕಪ್ ವೇಳೆ ಮೊಹಮ್ಮದ್ ಶಮಿ ಕಾಲಿನ ಗಾಯದಿಂದ ಬಳಲುತ್ತಿದ್ದರು. ಬಳಿಕ ಭಾರತ ತಂಡಕ್ಕೆ ವಾಪಸಾಗಿರಲಿಲ್ಲ. ಇತ್ತೀಚೆಗಷ್ಟೇ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ನಂತರ ಟಿ20 ವಿಶ್ವಕಪ್‌’ಗೆ ಮರಳುವ ಬಗ್ಗೆ ಅನುಮಾನವಿತ್ತು. ಇದೀಗ ಅವರ ಕಂಬ್ಯಾಕ್ ಕುರಿತು ಅಪ್‌ಡೇಟ್ ನೀಡಿದ್ದಾರೆ.


ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ಶಾಕ್! ಏಕದಿನ ವಿಶ್ವಕಪ್ ಹೀರೋ ಟೂರ್ನಿಯಿಂದಲೇ ಹೊರಕ್ಕೆ


ಬಾಂಗ್ಲಾದೇಶ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಗೆ ಶಮಿ ವಾಪಸಾಗುವ ಸಾಧ್ಯತೆ ಇದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಮತ್ತು ಟಿ20 ಸರಣಿ ಸೆಪ್ಟೆಂಬರ್‌’ನಲ್ಲಿ ನಡೆಯಲಿದೆ.


ಪಂತ್ ಟಿ20 ವಿಶ್ವಕಪ್ ಆಡುತ್ತಾರಾ?


2022 ರಲ್ಲಿ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪಂತ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿತ್ತು. ಇದೀಗ ಐಪಿಎಲ್‌’ನಲ್ಲಿ ಎಲ್ಲರ ಕಣ್ಣು ರಿಷಬ್ ಪಂತ್ ಮೇಲೆ ನೆಟ್ಟಿದೆ. ಜೊತೆಗೆ ಟಿ20 ವಿಶ್ವಕಪ್ ಆಡುತ್ತಾರೋ ಇಲ್ಲವೋ ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ಜಯ್ ಶಾ ಕೂಡ ಮಾತನಾಡಿದ್ದಾರೆ. “ರಿಷಬ್ ಪಂತ್ ಭಾರತದ ಪರ ಟಿ 20 ವಿಶ್ವಕಪ್ ಆಡಿದರೆ ಅದು ದೊಡ್ಡ ವಿಷಯ. ಅವರು ಟೀಂ ಇಂಡಿಯಾದ ದೊಡ್ಡ ಆಸ್ತಿ. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾದರೆ, ವಿಶ್ವಕಪ್ ಆಡಬಹುದು” ಎಂದಿದ್ದಾರೆ.


IPL 2024 ಮಾರ್ಚ್ 22 ರಿಂದ ಪ್ರಾರಂಭವಾಗುತ್ತಿದೆ. ಮೊದಲ ಪಂದ್ಯ ಆರ್‌’ಸಿಬಿ ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.


ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಭೈರತಿ ರಣಗಲ್ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ


NCA ಅಪ್ಡೇಟ್:


ಇನ್ನು ರಿಷಭ್ ಪಂತ್ ಅವರು ಕ್ರಿಕೆಟ್’​ಗೆ ಫಿಟ್ ಆಗಿದ್ದು ಐಪಿಎಲ್ ಆಡಬಹುದು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸರ್ಟಿಫಿಕೇಟ್​ ನೀಡಿದೆ. ಕಳೆದ 449 ದಿನಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿರುವ ರಿಷಭ್ ಪಂತ್,  ಟೂರ್ನಿಯ ಮೊದಲ ಹಂತದಲ್ಲಿ ನಾಯಕತ್ವ ವಹಿಸಿಕೊಂಡು ಕೇವಲ ಬ್ಯಾಟಿಂಗ್ ಕಡೆಯಷ್ಟೇ ಗಮನ ಹರಿಸುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ