‘ಇವರೊಂದಿಗೆ ನನ್ನನು ಹೋಲಿಕೆ ಮಾಡಿದಾಗ ಕೋಣೆಗೆ ಹೋಗಿ ತುಂಬಾ ಅಳುತ್ತಿದ್ದೆ”- ರಿಷಬ್ ಪಂತ್ ಶಾಕಿಂಗ್ ಹೇಳಿಕೆ ವೈರಲ್
Rishabh Pant on MS Dhoni: ಡಿಸೆಂಬರ್ 2022ರಲ್ಲಿ ಸಂಭವಿಸಿದ ದುರಂತ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಇದೀಗ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಧೋನಿಯೊಂದಿಗೆ ಹೋಲಿಕೆ ಮಾಡಿರುವುದು ಅವರಿಗೆ ಯಾವ ರೀತಿಯ ಅನುಭವ ನೀಡಿತ್ತು ಎಂಬುದರ ಬಗ್ಗೆ ಮಾತನಾಡಿದ್ದಾರೆ.
Rishabh Pant on MS Dhoni: ಮಹೇಂದ್ರ ಸಿಂಗ್ ಧೋನಿ ದೀರ್ಘಕಾಲದವರೆಗೆ ರಿಷಬ್ ಪಂತ್ ಅವರಿಗೆ ಮಾರ್ಗದರ್ಶಕರಾಗಿದ್ದರು. ಆದರೆ ಅವರೊಂದಿಗಿನ ನಿರಂತರ ಹೋಲಿಕೆಯಿಂದಾಗಿ ಉಸಿರುಗಟ್ಟುವಿಕೆ ಅನುಭವಿಸುವಷ್ಟು ಒತ್ತಡಕ್ಕೆ ಸಿಲುಕಿದ್ದರಂತೆ ರಿಷಬ್ ಪಂತ್. ಈ ಬಗ್ಗೆ ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ.
ಡಿಸೆಂಬರ್ 2022ರಲ್ಲಿ ಸಂಭವಿಸಿದ ದುರಂತ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಇದೀಗ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಧೋನಿಯೊಂದಿಗೆ ಹೋಲಿಕೆ ಮಾಡಿರುವುದು ಅವರಿಗೆ ಯಾವ ರೀತಿಯ ಅನುಭವ ನೀಡಿತ್ತು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Cervical Cancer: ಗರ್ಭಕಂಠದ ಕ್ಯಾನ್ಸರ್ ಎಂದರೇನು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
'ನಾನು ಕೋಣೆಗೆ ಹೋಗಿ ಅಳುತ್ತಿದ್ದೆ'
'ಸ್ಟಾರ್ ಸ್ಪೋರ್ಟ್ಸ್' ಸರಣಿಯಲ್ಲಿ ಮಾತನಾಡಿದ ಪಂತ್, 'ನಾನು ತುಂಬಾ ಕೆಟ್ಟ ಭಾವನೆ ಹೊಂದಿದ್ದೆ. ನನಗೆ 20-21 ವರ್ಷ, ಕೋಣೆಗೆ ಹೋಗಿ ಅಳುತ್ತಿದ್ದೆ. ನನಗೆ ಉಸಿರಾಡಲು ಸಾಧ್ಯವಾಗದಷ್ಟು ಟೆನ್ಷನ್ ಇತ್ತು. ಈಗ ಏನು ಮಾಡುವುದು ಎಂದು ಯೋಚಿಸುವಷ್ಟು ಒತ್ತಡವಿತ್ತು. ಮೊಹಾಲಿಯಲ್ಲಿ ನಾನು ಸ್ಟಂಪಿಂಗ್ ಅವಕಾಶವನ್ನು ಕಳೆದುಕೊಂಡಾಗ ಪ್ರೇಕ್ಷಕರು ಧೋನಿ ಧೋನಿ ಎಂದು ಕೂಗಲು ಪ್ರಾರಂಭಿಸಿದರು” ಎಂದಿದ್ದಾರೆ.
“ಎಂಎಸ್ ಜೊತೆಗಿನ ನನ್ನ ಸಂಬಂಧವನ್ನು ವಿವರಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಹಂಚಿಕೊಳ್ಳಬಹುದಾದ ಯಾರಾದರೂ ವ್ಯಕ್ತಿ ಇದ್ದರೆ, ಅದು ಧೋನಿ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಬೇರೆಯವರೊಂದಿಗೆ ಮಾತನಾಡಲಾಗದಂತಹ ವಿಷಯಗಳ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ. ನನಗೂ ಅವರಿಗೂ ಅದೇ ರೀತಿಯ ಸಂಬಂಧ ಇಂದಿಗೂ ಇದೆ” ಎಂದರು.
'ಹೋಲಿಕೆ ಬೇಡ'
ಧೋನಿ ಜೊತೆಗಿನ ಹೋಲಿಕೆ ಬಗ್ಗೆ ಮಾತನಾಡಿದ ಪಂತ್, “ಅವರೊಂದಿಗೆ ಏಕೆ ಹೋಲಿಕೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ತಂಡಕ್ಕೆ ಸೇರಿದ್ದೆ. ಜನರು ಪರ್ಯಾಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಒಬ್ಬ ಯುವಕನಿಗೆ ಇಂತಹ ಪ್ರಶ್ನೆಗಳನ್ನು ಏಕೆ ಕೇಳಲಾಯಿತು? ಈ ಹೋಲಿಕೆ ಏಕೆ ನಡೆಯುತ್ತಿತ್ತು, ಹೀಗಾಗಬಾರದಿತ್ತು. ಒಬ್ಬರು ಐದು ಪಂದ್ಯಗಳನ್ನು ಆಡಿದ್ದಾರೆ, ಇನ್ನೊಬ್ಬರು 500 ಆಡಿದ್ದಾರೆ. ಅಂತಹ ಸುದೀರ್ಘ ಪ್ರಯಾಣವನ್ನು ಹೊಂದಿರುವವರ ಜೊತೆ ಈ ಹೋಲಿಕೆ ಅರ್ಥಹೀನವಾಗಿದೆ” ಎಂದರು.
ಇದನ್ನೂ ಓದಿ:ಪೂನಂ ಪಾಂಡೆ ಸಾವಿನ ಹಿಂದಿದೆ ಭಯಂಕರ ಕ್ಯಾನ್ಸರ್..! ಈ ರೋಗದ ಬಗ್ಗೆ ತಜ್ಞರು ಏನಂತಾರೆ..?
“ತಂಡಕ್ಕೆ ಬಂದಾಗ ತನಗೆ ನೆಮ್ಮದಿ ತಂದ ಯುವರಾಜ್ ಸಿಂಗ್ ಅವರಂತಹ ಹಿರಿಯರಿಗೆ ಸದಾ ಋಣಿಯಾಗಿರುತ್ತೇನೆ. ನಾನು ತುಂಬಾ ಚಿಕ್ಕವನಾಗಿದ್ದೆ ಮತ್ತು ತಂಡದಲ್ಲಿ ಅನೇಕ ಹಿರಿಯ ಆಟಗಾರರಿದ್ದರು. ಯುವರಾಜ್ ಸಿಂಗ್, ಎಂಎಸ್ ಧೋನಿ ಎಲ್ಲರೂ ಹಿರಿಯರು. ಆದರೆ ಅವರು ಎಂದಿಗೂ ನನ್ನನ್ನು ಕಿರಿಯ ಎಂದು ಭಾವಿಸಲಿಲ್ಲ. ಅವರು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಎಲ್ಲಾ ಹೊಸ ಆಟಗಾರರನ್ನು ಸ್ವಾಗತಿಸಿದರು. ಇದು ಭಾರತ ತಂಡದ ಸಂಸ್ಕೃತಿ” ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾ