Rohit Sharma, Records: ಟೀಂ ಇಂಡಿಯಾ ನಾಯಕ ಮತ್ತು ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಏಷ್ಯಾಕಪ್‌’ನಲ್ಲಿ ಇತಿಹಾಸ ಸೃಷ್ಟಿಸುವ ಸಮೀಪದಲ್ಲಿ ಬಂದು ನಿಂತಿದ್ದಾರೆ. ಅಂದರೆ ರೋಹಿತ್ ಶರ್ಮಾ ಸಚಿನ್ ತೆಂಡೂಲ್ಕರ್ ಅವರ ಶ್ರೇಷ್ಠ ದಾಖಲೆಯನ್ನು ಮುರಿಯುವ ಹಂತದಲ್ಲಿದ್ದಾರೆ. ಏಷ್ಯಾ ಕಪ್ 2023 ಪಾಕಿಸ್ತಾನ ಮತ್ತು ಶ್ರೀಲಂಕಾದ ನೆಲದಲ್ಲಿ ಆಗಸ್ಟ್ 30 ರಿಂದ ಪ್ರಾರಂಭವಾಗಲಿದೆ. ಏಷ್ಯಾ ಕಪ್ 2023 ರಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಪ್ಟೆಂಬರ್ 2 ರಂದು ಆಡಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತ 2 ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದೇ ಈ ಭರತನಾಟ್ಯ ಕಲಾವಿದೆಯಿಂದ! 18 ವರ್ಷ ನಾಯಕಿಯಾಗಿದ್ದ ಈ ‘ಬಾಲಕಿ’ ಯಾರು ಗೊತ್ತಾ?


2023ರ ಏಷ್ಯಾಕಪ್‌’ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ 227 ರನ್ ಗಳಿಸಿದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಏಷ್ಯಾಕಪ್‌’ನಲ್ಲಿ ರೋಹಿತ್ ಶರ್ಮಾ 22 ಪಂದ್ಯಗಳಲ್ಲಿ 45.56 ಸರಾಸರಿಯಲ್ಲಿ 745 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಏಷ್ಯಾಕಪ್‌’ನ 23 ಪಂದ್ಯಗಳಲ್ಲಿ 51.10 ಸರಾಸರಿಯಲ್ಲಿ 971 ರನ್ ಗಳಿಸಿದ್ದಾರೆ. 2023 ರ ಏಷ್ಯಾಕಪ್‌’ನಲ್ಲಿ ರೋಹಿತ್ ಶರ್ಮಾ 227 ರನ್ ಗಳಿಸಿದರೆ, ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ದಾಖಲೆ ಬರೆಯುವುದು ಖಚಿತ. ಇನ್ನು ರೋಹಿತ್ ಶರ್ಮಾ 2008 ರಿಂದ 7 ಏಷ್ಯಾಕಪ್ ಸೀಸನ್‌’ಗಳನ್ನು ಆಡಿದ್ದಾರೆ.


ಇನ್ನು ಈ ಬಾರಿಯ 2023 ರ ಏಷ್ಯಾಕಪ್‌’ನ 6 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ 476 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ, ಶ್ರೀಲಂಕಾದ ಅನುಭವಿ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ 1220 ರನ್‌’ಗಳೊಂದಿಗೆ ಏಷ್ಯಾಕಪ್ ಇತಿಹಾಸದಲ್ಲಿ ಗರಿಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ.


ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು


1. ಸನತ್ ಜಯಸೂರ್ಯ (ಶ್ರೀಲಂಕಾ) - 1220 ರನ್, [6 ಶತಕ ಮತ್ತು 3 ಅರ್ಧ ಶತಕ]


2. ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 1075 ರನ್, [4 ಶತಕ ಮತ್ತು 8 ಅರ್ಧಶತಕ]


3. ಸಚಿನ್ ತೆಂಡೂಲ್ಕರ್ (ಭಾರತ) - 971 ರನ್, [2 ಶತಕ ಮತ್ತು 7 ಅರ್ಧಶತಕ]


4. ಶೋಯೆಬ್ ಮಲಿಕ್ (ಪಾಕಿಸ್ತಾನ) - 786 ರನ್, [3 ಶತಕ ಮತ್ತು 3 ಅರ್ಧಶತಕ]


5. ರೋಹಿತ್ ಶರ್ಮಾ (ಭಾರತ) - 745 ರನ್, [1 ಶತಕ ಮತ್ತು 6 ಅರ್ಧಶತಕ]


ಇದನ್ನೂ ಓದಿ: ಐರ್ಲೆಂಡ್ ಸರಣಿಯಲ್ಲಿ ಈ ಕ್ರಿಕೆಟಿಗನಿಗೆ ಟಿ20 ಪದಾರ್ಪಣೆಗೆ ಅವಕಾಶ ನೀಡುವರೇ ಕ್ಯಾಪ್ಟನ್ ಬುಮ್ರಾ?


ರೋಹಿತ್ ಶರ್ಮಾ ದಾಖಲೆ:


ಏಷ್ಯಾಕಪ್‌’ನ ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಅವರ ದಾಖಲೆ ಉತ್ತಮವಾಗಿದೆ. ಕೊನೆಯ ಬಾರಿಗೆ 2018 ರಲ್ಲಿ ಏಷ್ಯಾ ಕಪ್‌’ನ ODI ಸ್ವರೂಪವನ್ನು ಆಡಿದ್ದರು. 2018ರ ಏಷ್ಯಾಕಪ್‌’ನ 5 ಪಂದ್ಯಗಳಲ್ಲಿ 105.66 ರ ಸರಾಸರಿಯಲ್ಲಿ 317 ರನ್ ಗಳಿಸಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ 1 ಶತಕ ಹಾಗೂ 2 ಅರ್ಧ ಶತಕ ಸಿಡಿಸಿದ್ದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು 2018 ರ ಏಷ್ಯಾಕಪ್‌’ನ ಫೈನಲ್‌’ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ