ಭಾರತ 2 ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದೇ ಈ ಭರತನಾಟ್ಯ ಕಲಾವಿದೆಯಿಂದ! 18 ವರ್ಷ ನಾಯಕಿಯಾಗಿದ್ದ ಈ ‘ಬಾಲಕಿ’ ಯಾರು ಗೊತ್ತಾ?

Mithali Raj Childhood Photo: ಮಹಿಳಾ ಕ್ರಿಕೆಟ್ ಆಟವನ್ನು ಭಾರತದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಭಾರತದ ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಸಲ್ಲುತ್ತದೆ. 23 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮಹತ್ವದ ಕೊಡುಗೆ ನೀಡಿದ ಮಿಥಾಲಿ ಜೂನ್ 8, 2022ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದರು.

Written by - Bhavishya Shetty | Last Updated : Aug 23, 2023, 08:24 AM IST
    • ಮಹಿಳಾ ಕ್ರಿಕೆಟ್ ಆಟವನ್ನು ಭಾರತದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಮಿಥಾಲಿ ರಾಜ್ ಅವರಿಗೆ ಸಲ್ಲುತ್ತದೆ
    • ಮಿಥಾಲಿ ಜೂನ್ 8, 2022ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದರು.
    • ಮಿಥಾಲಿ ರಾಜ್ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ
ಭಾರತ 2 ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದೇ ಈ ಭರತನಾಟ್ಯ ಕಲಾವಿದೆಯಿಂದ! 18 ವರ್ಷ ನಾಯಕಿಯಾಗಿದ್ದ ಈ ‘ಬಾಲಕಿ’ ಯಾರು ಗೊತ್ತಾ? title=
Mithali Raj Childhood Photo

Mithali Raj Childhood Photo: ಪುರುಷರ ಕ್ರಿಕೆಟ್ ಅನೇಕ ವರ್ಷಗಳಿಂದಲೂ ಜನಮನ್ನಣೆ ಗಳಿಸಿರುವುದು ತಿಳಿದೇ ಇದೆ. ಆದರೆ ಮಹಿಳಾ ಕ್ರಿಕೆಟ್ ಲೋಕಕ್ಕೂ ಕ್ರೇಜ್ ಹುಟ್ಟಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ. ಅದೆಷ್ಟೋ ಮಂದಿಗೆ ಭಾರತದ ಮಹಿಳಾ ಕ್ರಿಕೆಟ್ ತಂಡ ಇದೆ ಎಂದೂ ಸಹ ತಿಳಿದಿರದ ಕಾಲದಲ್ಲಿ, ಆ ಒಬ್ಬ ನಾಯಕಿ ಟೀಂ ಇಂಡಿಯಾ ಮಹಿಳಾ ತಂಡವನ್ನು ವಿಶ್ವಕಪ್ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು. ಆ ನಾಯಕಿ ಬಗ್ಗೆ ನಾವಿಂದು ಒಂದಿಷ್ಟು ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಮಹಾಗಣಪತಿ ಕೃಪೆಯಿಂದ ಇಂದು ಈ ರಾಶಿಗೆ ಉದ್ಯೋಗದಲ್ಲಿ ಬಡ್ತಿ, ಕೈತುಂಬಾ ದುಡ್ಡು ಸಿಗುವುದು ಖಚಿತ

ಮಹಿಳಾ ಕ್ರಿಕೆಟ್ ಆಟವನ್ನು ಭಾರತದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಭಾರತದ ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಸಲ್ಲುತ್ತದೆ. 23 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮಹತ್ವದ ಕೊಡುಗೆ ನೀಡಿದ ಮಿಥಾಲಿ ಜೂನ್ 8, 2022ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದರು. ಭಾರತೀಯ ಪುರುಷರ ಕ್ರಿಕೆಟ್‌’ನಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಎಂ ಎಸ್ ಧೋನಿ ಹೆಸರು ಯಾವ ರೀತಿಯಲ್ಲಿ ಪ್ರಸಿದ್ಧಿ ಪಡೆದಿದೆಯೋ, ಅಂತೆಯೇ ಮಿಥಾಲಿ ರಾಜ್ ಅವರ ಹೆಸರನ್ನು ಸಹ ಮಹಿಳಾ ಕ್ರಿಕೆಟ್‌’ನಲ್ಲಿ ಸಮಾನ ಗೌರವದಿಂದ ನೋಡಲಾಗುತ್ತದೆ.

ರಾಜಸ್ಥಾನದ ಜೋಧಪುರದಲ್ಲಿ ತಮಿಳು ಕುಟುಂಬದಲ್ಲಿ ಜನಿಸಿದ ಮಿಥಾಲಿ, 10 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದರು. ಇದಾದ 7 ವರ್ಷಗಳ ನಂತರ ಭಾರತ ತಂಡಕ್ಕೆ ಸೇರ್ಪಡೆಗೊಂಡರು. ತನ್ನ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಶತಕ ಬಾರಿಸಿದ್ದ ಮಿಥಾಲಿ ರಾಜ್ ಬಾಲ್ಯದಲ್ಲಿ ಭರತನಾಟ್ಯ ನೃತ್ಯಗಾರ್ತಿಯಾಗಬೇಕೆಂದು ಬಯಸಿದ್ದರು. ಆದರೆ ಏರ್ ಫೋರ್ಸ್‌’ನಲ್ಲಿ ಅಧಿಕಾರಿಯಾಗಿದ್ದ ಅವರ ತಂದೆ ಅವಳನ್ನು ಕ್ರಿಕೆಟ್ ಆಡಲು ಪ್ರೋತ್ಸಾಹಿಸಿದ್ದು, ಈ ಸಾಧನೆ ಮಾಡಲು ಸಾಧ್ಯವಾಗಿಸಿತು ಎಂದರೆ ತಪ್ಪಾಗಲ್ಲ.

ಮಿಥಾಲಿ ರಾಜ್ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ. ಪಂದ್ಯದ ಸಮಯದಲ್ಲಿಯೂ ಸಹ ಡಗೌಟ್ ಅಥವಾ ಪೆವಿಲಿಯನ್‌’ನಲ್ಲಿ ಕುಳಿತುಕೊಂಡು ಪುಸ್ತಕ ಓದುವುದನ್ನು ಅನೇಕ ಬಾರಿ ಕ್ಯಾಮರಾ ಸೆರೆಹಿಡಿದಿತ್ತು.

ಇನ್ನು ಮಿಥಾಲಿ ರಾಜ್ ಭಾರತದ ಅತ್ಯಂತ ಯಶಸ್ವಿ ನಾಯಕಿಗಳಲ್ಲಿ ಒಬ್ಬರು. ಆಕೆಯ ನಾಯಕತ್ವದಲ್ಲಿ ಭಾರತವು ಐಸಿಸಿ ವಿಶ್ವಕಪ್‌’ನಲ್ಲಿ ಎರಡು ಬಾರಿ ಫೈನಲ್‌ ಪ್ರವೇಶಿಸಿತ್ತು. 2005 ರಲ್ಲಿ, ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತವು ಆಸ್ಟ್ರೇಲಿಯಾದ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಇನ್ನೊಂದು ಬಾರಿ ಇಂಗ್ಲೆಂಡ್‌’ನಲ್ಲಿ ನಡೆದ ವಿಶ್ವಕಪ್ ಪ್ರಶಸ್ತಿ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಸೋಲು ಕಂಡಿತ್ತು.  2006ರಲ್ಲಿ ಮಿಥಾಲಿ ನಾಯಕತ್ವದಲ್ಲಿ ಭಾರತ ಏಷ್ಯಾಕಪ್ ಗೆದ್ದಿದ್ದು ಮಾತ್ರ ಐತಿಹಾಸಿಕ ಕ್ಷಣ.

ಮಿಥಾಲಿ ಅವರು ಟೆಸ್ಟ್, ODI ಮತ್ತು T20 ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತಕ್ಕಾಗಿ ಕ್ರಿಕೆಟ್ ಆಡಿದ್ದಾರೆ. 1997 ರ ಮಹಿಳಾ ಕ್ರಿಕೆಟ್ ವಿಶ್ವಕಪ್‌’ನ ಸಂಭಾವ್ಯರ ಪಟ್ಟಿಯಲ್ಲಿ ಮಿಥಾಲಿ ಹೆಸರು ಸೇರ್ಪಡೆಗೊಂಡಿತ್ತು. ಆದರೆ ಅಂತಿಮ ತಂಡಕ್ಕೆ ಬರಲು ಸಾಧ್ಯವಾಗಲಿಲ್ಲ. 1999 ರಲ್ಲಿ ಮಿಲ್ಟನ್ ಕೇನ್ಸ್‌’ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಏಕದಿನ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ಮಿಥಾಲಿ ಅಜೇಯ 114 ರನ್ ಗಳಿಸಿದರು. 2001-02 ರ ಋತುವಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಲಕ್ನೋದಲ್ಲಿ ತಮ್ಮ ಟೆಸ್ಟ್ ಪಾದಾರ್ಪಣೆ ಮಾಡಿದರು. 17 ಆಗಸ್ಟ್ 2002 ರಂದು ನಡೆದ 3ನೇ ಟೆಸ್ಟ್‌’ನಲ್ಲಿ ವಿಶ್ವದ ಅತಿ ಹೆಚ್ಚು ವೈಯಕ್ತಿಕ ಟೆಸ್ಟ್ ಸ್ಕೋರ್ ಗಳಿಸಿದ ಬಳಿಕ (209 ರನ್) ಕರೆನ್ ರೋಲ್ಟನ್ ಅವರ ದಾಖಲೆಯನ್ನು 19 ನೇ ವಯಸ್ಸಿನಲ್ಲಿ ಮುರಿದರು. ಕೌಂಟಿಯಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್‌’ನಲ್ಲಿ 214ರ ಹೊಸ ಗರಿಷ್ಠ ರನ್ ದಾಖಲೆಯಲ್ಲಿ ಮಿಥಾಲಿ ರಚಿಸಿದರು.

ಮಿಥಾಲಿ ರಾಜ್‌’ಗೆ 2003 ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2015 ರಲ್ಲಿ, ವಿಸ್ಡನ್ ಇಂಡಿಯಾ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳಾ ಕ್ರಿಕೆಟಿಗರಾದರು. ಅದೇ ವರ್ಷ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿಯನ್ನು ಕೂಡ ನೀಡಲಾಯಿತು.

ಇದನ್ನೂ ಓದಿ: "ಮಾನಸಿಕವಾಗಿ ಹೆಣಗಾಡುತ್ತಿದ್ದೇನೆ.." ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ವಿಶ್ವಕಪ್ ವಿಜೇತ ಸ್ಟಾರ್ ಎಡಗೈ ಸ್ಪಿನ್ನರ್

ನವೆಂಬರ್ 2021 ರಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಿಥಾಲಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನವನ್ನು ನೀಡಿ ಗೌರವಿಸಿದರು. ಮಿಥಾಲಿ ರಾಜ್ ದೇಶದ ಐದನೇ ಕ್ರಿಕೆಟಿಗ ಮತ್ತು ಈ ಗೌರವಕ್ಕೆ ಪಾತ್ರರಾದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News