Cristiano Ronaldo: ಪೋರ್ಚುಗಲ್‌ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಅರೇಬಿಯಾದ ಅಲ್-ನಸ್ ಕ್ಲಬ್ ಪರ ಆಟವಾಡಲು ಮುಂದಿನ ಎರಡೂವರೆ ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಬೈ ಬೈ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rishabh Pant Health Bulletine: ರಿಷಬ್ ಪಂತ್ ಚಿಕಿತ್ಸೆ ಜವಾಬ್ದಾರಿ ಹೊತ್ತ ಬಿಸಿಸಿಐ-ದೆಹಲಿಗೆ ಶಿಫ್ಟ್ ಸಾಧ್ಯತೆ: ಹೆಲ್ತ್ ಬುಲೆಟಿನ್ ಹೀಗಿದೆ


ಐದು ಬಾರಿ ಬ್ಯಾಲನ್ ಡಿವೋ ಪ್ರಶಸ್ತಿಗೆ ಭಾಜನರಾಗಿದ್ದ ಕ್ರಿಸ್ಟಿಯಾನೋ ರೊನಾಲ್ಡೊ 2022ರ ಫಿಫಾ ವಿಶ್ವಕಪ್‌ನಲ್ಲಿ ಸೋಲನ್ನು ಅನುಭವಿಸಿದ್ದರು. ಸೋಲಿನ ಬಳಿಕ ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರನಡೆದಿದ್ದು, ಆ ವಿಡಿಯೋ ಅಭಿಮಾನಿಗಳ ಮನಮುಟ್ಟುವಂತಿತ್ತು.


ಇದೀಗ 2025ರವರೆಗೆ ಅಲ್-ನಸ್ ಕ್ಲಬ್ ಪರ ಆಡಲು ರೊನಾಲ್ಡೋ ಒಪ್ಪಿಕೊಂಡಿದ್ದು, ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಸೌದಿ ಕ್ಲಬ್ ಹೇಳಿಕೆ ನೀಡಿದೆ. ಈ ಒಪ್ಪಂದಕ್ಕೆ ರೊನಾಲ್ಡೊಗೆ 200 ಮಿಲಿಯನ್ ಯುರೋಗಿಂತಲೂ ಅಧಿಕ ಮೌಲ್ಯವನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಇಲ್ಲ.


ಈ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ರೊನಾಲ್ಡೋ, “ಯೂರೋಪಿಯನ್ ಫುಟ್ಬಾಲ್‌ನಲ್ಲಿ ನಾನು ಇರಿಸಿಕೊಂಡಿದ್ದ ಎಲ್ಲಾ ಗುರಿಗಳನ್ನು ಸಾಧಿಸಿದ್ದೇನೆ. ಇದೀಗ ಏಷ್ಯಾದಲ್ಲಿ ನನ್ನ ಅನುಭವ ಹಂಚಿಕೊಳ್ಳಲು ಇದು ಸಕಾಲ. ಹೊಸ ತಂಡದ ಸಹ ಆಟಗಾರರ ಜೊತೆ ಸೇರಿ ಆಟವಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಕ್ಲಬ್‌ನ ಯಶಸ್ಸಿಗೆ ನೆರವಾಗಲಿದ್ದೇನೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: Cricketer Rishabh Pant Car Accident: ರಿಷಬ್ ಪಂತ್ ತಾಯಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಕ್ರಿಕೆಟಿಗನ ಕುಟುಂಬಕ್ಕೆ ಧೈರ್ಯ ತುಂಬಿದ ‘ನಾಯಕ’


ಇತ್ತೀಚೆಗೆಯಷ್ಟೇ “ನನಗೆ ಕ್ಲಬ್ ದ್ರೋಹ ಬಗೆದಿದೆ. ಡಚ್ ವ್ಯವಸ್ಥಾಪಕ ಎರಿಕ್ ಟೆನ್ ಹಗ್ ಅವರ ಬಗ್ಗೆ ನನಗೆ ಗೌರವ ಇಲ್ಲ” ಎಂದು ರೊನಾಲ್ಡೋ ಹೇಳಿದ್ದರು. ಈ ಬೆನ್ನಲ್ಲೇ ಸೌದಿ ಅರೇಬಿಯಾದ ಅಲ್-ನಸ್ ಕ್ಲಬ್ ಗೆ ಸೇರ್ಪಡೆಗೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.