ಸಚಿನ್ ತೆಂಡೂಲ್ಕರ್ ಭದ್ರತಾ ಸಿಬ್ಬಂದಿ ಆತ್ಮಹತ್ಯೆ: ಸರ್ಕಾರಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸೂಸೈಡ್
Sachin Tendulkar Security Guard Suicide: ಆತ್ಮಹತ್ಯೆ ಮಾಡಿಕೊಂಡ ಕಾನ್‌ಸ್ಟೆಬಲ್ ಸಚಿನ್ ತೆಂಡೂಲ್ಕರ್ ಅವರ ನಿವಾಸದ ಭದ್ರತಾ ತಂಡದ ಸದಸ್ಯರಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
Sachin Tendulkar Security Guard Suicide: ಮಾಜಿ ಹಿರಿಯ ಕ್ರಿಕೆಟಿಗ ಮತ್ತು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಎಸ್ ಆರ್ ಪಿ ಎಫ್ ಯೋಧ ಬುಧವಾರ ಮಹಾರಾಷ್ಟ್ರದ ಜಲಗಾಂವ್’ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಸಚಿನ್ ತೆಂಡೂಲ್ಕರ್ ನಿವಾಸದಲ್ಲಿ ಭದ್ರತೆಗೆಂದು ಅವರನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಅಂದು ವಿಶ್ವಕಪ್ ಹೀರೋ… ಇಂದು ಖ್ಯಾತ ಪೊಲೀಸ್ ಅಧಿಕಾರಿ! 2007ರಲ್ಲಿ ಟೀಂ ಇಂಡಿಯಾ T20 ವಿಶ್ವಕಪ್ ಗೆದ್ದಿದ್ದು ಈತನಿಂದಲೇ
ಆತ್ಮಹತ್ಯೆ ಮಾಡಿಕೊಂಡ ಕಾನ್‌ಸ್ಟೆಬಲ್ ಸಚಿನ್ ತೆಂಡೂಲ್ಕರ್ ಅವರ ನಿವಾಸದ ಭದ್ರತಾ ತಂಡದ ಸದಸ್ಯರಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ರಾಜ್ಯ ಮೀಸಲು ಪೊಲೀಸ್ ಪಡೆಗೆ (ಎಸ್ ಆರ್ ಪಿ ಎಫ್) ಸೇರಿದ ಪ್ರಕಾಶ್ ಗೋವಿಂದ್ ಕಪಾಡೆ (39) ಮುಂಜಾನೆ ತನ್ನ ಸರ್ವಿಸ್ ರಿವಾಲ್ವರ್’ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಾಪಾಡೆ ಕಳೆದ ವಾರ ಕುಟುಂಬ ಸಮೇತ ತನ್ನ ಊರಾದ ಜಾಮ್ನೇರ್’ಗೆ ಆಗಮಿಸಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಮಧ್ಯರಾತ್ರಿ 1.30 ರ ಸುಮಾರಿಗೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಗುಂಡಿನ ಸದ್ದು ಕೇಳಿ ಮನೆಯಲ್ಲಿದ್ದ ಇತರರೂ ಎಚ್ಚರಗೊಂಡಿದ್ದಾರೆ. ತಕ್ಷಣ ಕಪಾಡೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಈ ಲೆಕ್ಕಾಚಾರದ ಪ್ರಕಾರ ನಡೆದರೆ RCB-CSK ಎರಡೂ ತಂಡಗಳೂ ಪ್ಲೇಆಫ್ ಪ್ರವೇಶಿಸುತ್ತೆ: ಅದ್ಹೇಗೆ ಗೊತ್ತಾ
ಕಪಾಡೆ 15 ವರ್ಷಗಳ ಹಿಂದೆ ಎಸ್ ಆರ್ ಪಿ ಎಫ್’ಗೆ ಸೇರಿದ್ದು, ಪ್ರಸ್ತುತ ಮಹಾರಾಷ್ಟ್ರ ಪೊಲೀಸ್ ವಿಶೇಷ ರಕ್ಷಣಾ ಘಟಕದಲ್ಲಿ ಡೆಪ್ಯೂಟೇಶನ್’ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷ ಬಾಂದ್ರಾದಲ್ಲಿರುವ ಸಚಿನ್ ತೆಂಡೂಲ್ಕರ್ ಅವರ ನಿವಾಸಕ್ಕೆ ಅವರನ್ನು ನಿಯೋಜಿಸಲಾಗಿತ್ತು. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews